ಅಂತರಾಷ್ಟ್ರೀಯ

ಚಿಕನ್‌ ತಿಂದರೆ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು: ಆಕ್ಸ್‌ಫೋರ್ಡ್‌ ವಿ.ವಿ. ವಿಜ್ಞಾನಿಗಳ ಸಂಶೋಧನೆ

Pinterest LinkedIn Tumblr


ಲಂಡನ್‌: ಚಿಕನ್‌ ಅಂದ್ರೆ ಎಲ್ಲ ಮಾಂಸಾಹಾರಿಗಳಿಗೆ ಇಷ್ಟವೇ. ಆದರೆ ಚಿಕನ್‌ ತಿನ್ನೋದು ಭಾರೀ ಅಪಾಯಕಾರಿಯಂತೆ. ಚಿಕನ್‌ ತಿಂದರೆ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಯೊಂದು ಹೇಳಿದೆ.

ಇತರ ಮಾಂಸಗಳಿಗಿಂತ ಚಿಕನ್‌ ಉತ್ತಮ ಎಂದಿದ್ದರೂ, ಈಗ ಚಿಕನ್‌ ಅಪಾಯಕಾರಿ ಎಂದು ಆಕ್ಸ್‌ಫ‌ರ್ಡ್‌ ಸಂಶೋಧಕರು ಬೊಟ್ಟು ಮಾಡಿದ್ದಾರೆ. ಅಂದಹಾಗೆ ಈ ಕುರಿತ ಸಂಶೋಧನೆ ನಡೆದಿರುವುದು ಬ್ರಿಟನ್‌ನಲ್ಲಿ 4.75 ಸಾವಿರ ಮಂದಿಯನ್ನು ಸಂಶೋಧನೆಗೊಳಪಡಿಸಿದ್ದು, 2006ರಿಂದ 2014ರವರೆಗೆ ಸಂಶೋಧನೆ ನಡೆಸಿ ವಿಜ್ಞಾನಿಗಳು ಹಲವು ಅಂಶಗಳನ್ನು ಕಂಡುಕೊಂಡಿದ್ದಾರೆ.

ಇಷ್ಟು ಮಂದಿಯಲ್ಲಿ ಹಲವು ಕಾಯಿಲೆಗಳು ಬಂದಿದ್ದು ಅದರಲ್ಲಿ 23 ಸಾವಿರ ಮಂದಿಗೆ ಕ್ಯಾನ್ಸರ್‌ ತಗುಲಿದೆಯಂತೆ. ತೀರ ಅಪಾಯಕಾರಿ ಕ್ಯಾನ್ಸರ್‌ಗಳೂ ಪತ್ತೆಯಾಗಿವೆಯಂತೆ. ಅಚ್ಚರಿ ಎಂದೆ ಚಿಕನ್‌ ಮತ್ತು ಕ್ಯಾನ್ಸರ್‌ಗೆ ಹತ್ತಿರದ ಸಂಬಂಧವಿದೆ ಎಂದು ಕಂಡುಕೊಂಡಿದ್ದಾರೆ.

ಆದರೆ ಚಿಕನ್‌ ತಿಂದರೆ ಕ್ಯಾನ್ಸರ್‌ ಬರುವಂಥದ್ದು ಏನಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೂ ಹಲವು ಕಾರಣಗಳಿರಬಹುದು ಎಂದು ಹೇಳಲಾಗಿದೆ. ಈವರೆಗೆ ಗೋಮಾಂಸ, ಹಂದಿ ಮಾಂಸಗಳಿಗಿಂತ ಚಿಕನ್‌ ಉತ್ತಮ ಎಂದು ಪಾಶ್ಚಿಮಾತ್ಯ ದೇಶಗಳಲ್ಲಿ ಹೇಳಲಾಗುತ್ತಿತ್ತು. ಆದರೆ ಈಗ ಚಿಕನ್‌ ಕೂಡ ಒಳ್ಳೆಯದಲ್ಲ ಎಂದು ಹೇಳಲಾಗಿದೆ.

Comments are closed.