ಕುಂದಾಪುರ: ತಾಲೂಕಿನ ವಕ್ವಾಡಿಯ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಮೂರನೇ ವರ್ಷದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಸೈನ್ಸ್ ಎಕ್ಸ್‌ಫೋ-2019 ಕಾರ್ಯಕ್ರಮ ಶನಿವಾರ ನಡೆಯಿತು.
ಕುಂದಾಪುರದ ವಕ್ವಾಡಿಯಲ್ಲಿರುವ ಗುರುಕುಲ ಪಬ್ಲಿಕ್ ಸ್ಕೂಲ್ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಗಳು ತುಂಬಾನೇ ಡಿಪರೆಂಟ್ ಮತ್ತು ಅಷ್ಟೆನೇ ಫೆಮಸ್. ಇಲ್ಲಿ ಮಕ್ಕಳಿಗೆ ಕಲಿಕೆ ಜೊತೆ ಇತರೇ ಚಟುವಟಿಕೆಗೂ ಅಷ್ಟೇ ಪ್ರೋತ್ಸಾಹ ನೀಡಲಾಗುತ್ತೆ. ವಿದ್ಯಾರ್ಥಿಗಳು ಸಂಕುಚಿತ ಮನೋಭಾವನೆಯನ್ನು ಬಿಟ್ಟು ಹೊರಬಂದು ಎಲ್ಲರೊಂದಿಗೆ ಬೆರೆತು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತವೇದಿಕೆ ಕಲ್ಪಿಸುವಲ್ಲಿ ವಾರಂತ್ಯದ ದಿನವಾದ ಶನಿವಾರ ಶಾಲೆಯಲ್ಲಿ ಸೈನ್ಸ್ ಎಕ್ಸ್‌ಪೋ-೨೦೧೯ ಹೆಸರಿನಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ಮಾದರಿಯ ವಸ್ತುಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು. ವಿಜ್ಞಾನದ ಜೊತೆಗೆ ಗಣಿತ, ಸಮಾಜ, ಕೃಷಿ ಸೇರಿದಂತೆ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಕರಕುಶಲ ವಸ್ತುಗಳು, ಚಿತ್ರಕಲೆ, ಪುರಾತನ ವಸ್ತುಗಳ ಸಂಗ್ರಹಕ್ಕೂ ಅವಕಾಶ ಕಲ್ಪಿಸಲಾಯ್ತು. ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಇದರ ಗುರುಕುಲ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್.ಕೆ.ಜಿ. ವಿದ್ಯಾರ್ಥಿಗಳಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಈ ಎಕ್ಸ್‌ಫೋದಲ್ಲಿ ಭಾಗವಹಿಸಿದ್ರು. ಕಳೆದ ಎರಡು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದಿದ್ದು ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆ ಈ ಬಾರಿ ಮತ್ತಷ್ಟು ಸೇರ್ಪಡೆಯೊಂದಿಗೆ ವಿಭಿನ್ನವಾಗಿ ಹಾಗೂ ಅದ್ಧೂರಿಯಾಗಿಯೇ ಕಾರ್ಯಕ್ರಮ ಮಾಡಲಾಯ್ತು.

ಎಂಟನೇ ತರಗತಿ ವಿದ್ಯಾರ್ಥಿಗಳಾದ ಹರ್ಷಿತಾ, ನವ್ಯಾ, ಸಾನ್ವಿ ತಯಾರಿಸಿದ ಲೈ-ಫೈ ಎಂಬ ಬೆಳಕು ಮತ್ತು ಸೋಲಾರ್ ಮೂಲಕ ಸ್ಪೀಕರ್ ಆನ್ ಆಗುವ ಪ್ರಕ್ರಿಯೆ ಹಾಗೂ ಆಟೋ ಮ್ಯಾಟಿಕ್ ದಾರಿದೀಪ ಪ್ರಕ್ರಿಯೆ……. ಆಶ್ಲೇಶ್, ಅಖಿಲೇಶ್ ಹಾಗೂ ತನೀಶ್ ಎನ್ನುವ ವಿದ್ಯಾರ್ಥಿಗಳು ಸಿದ್ದಪಡಿಸಿದ ಅತೀ ಕಮ್ಮಿ ವೆಚ್ಚದಲ್ಲಿ ತಯಾರಿಸಬಹುದಾದ ಮೊಬೈಲ್ ಪವರ್ ಬಂಕ್ ಹಾಗೂ ವೈಫೈ ಸ್ಪೀಕರ್ ನಿಜಕ್ಕೂ ಎಲ್ಲರ ಗಮನ ಸೆಳೆಯಿತು. ಆಯಸ್ಕಾಂತವಿರುವ ಉಪ್ಪುನೀರಿನಲ್ಲಿ ವಿದ್ಯುತ್ ಬಲ್ಬ್ ಆನ್ ಆಗೋದು, ರೋಪ್ ವೇ, ಸಮುದ್ರದ ಉಪ್ಪುನೀರಿನ ಸಂಸ್ಕರಣಾ ವಿಧಾನ, ಮಳೆ ನೀರು ಕೊಯ್ಲು ಪ್ರಕ್ರಿಯೆ, ಸ್ಮಾರ್ಟ್ ಸಿಟಿ, ಡೆವಲಪಡ್ ಸಿಟಿ,ಏತ ನೀರಾವರಿ ಪದ್ದತಿ, ಜ್ವಾಲಾಮುಖಿ ಸ್ಫೋಟ ವಿಧಾನ ಪ್ರಕ್ರಿಯೆಯಂತಹ ವಿಜ್ಞಾನದ ರಾಸಾಯನಿಕ, ಭೌತ ಹಾಗೂ ಜೀವಶಾಸ್ತ್ರಕ್ಕೆ ಸಂಬಂಧಿಸಿದ 600ಕ್ಕೂ ಅಧಿಕ ಪ್ರದರ್ಶನಗಳಿದ್ದವು. ಅಲ್ಲದೇ ತರಹೇವಾರಿ ಕರಕುಶಲ ವಸ್ತು, ವಿವಿಧ ರೀತಿಯ ಸಸ್ಯ, ಸೊಪ್ಪು, ಗಿಡಗಳ ಸಂಗ್ರಹಿಸಿದ ವಿದ್ಯಾರ್ಥಿಗಳ ಶ್ರಮಕ್ಕೆ ವೀಕ್ಷಕರು ತಲೆದೂಗಿದ್ರು. ಇತ್ತೀಚೆಗೆ ಸಂಭವಿಸಿದ ಪ್ರವಾಹದ ಮರುಸ್ರಷ್ಟಿ ಜೊತೆಗೆ ವಿವಿಧ ಭಾಗಗಗಳ ನೆರೆಹಾನಿ ಫೋಟೋ ಪ್ರದರ್ಶನವನ್ನು ಮಾಡಿ ಕಾಡು ಬೆಳಸಿ ನಾಡು ಉಳಿಸಿ ಎಂಬ ಸಂದೇಶವನ್ನು ವಿದ್ಯಾರ್ಥಿಗಳು ಪ್ರೇಕ್ಷಕರಿಗೆ ನೀಡಿದರು.
ಜನರ ಮೆಚ್ಚುಗೆ
ಮಕ್ಕಳ ಈ ಕಾರ್ಯಕ್ರಮ ವ್ವೀಕ್ಷಣೆಗೆ ಪಾಲಕರು, ಆಸುಪಾಸಿನ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸಿ ವಿಜ್ಞಾನ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳೇ ಆಯಾಯ ವಸ್ತು ಮಾದರಿಯ ಬಗ್ಗೆ ಇಂಗ್ಲೀಷ್, ಕನ್ನಡ, ಸಂಸ್ಕ್ರತ, ಹಿಂದಿ, ಹಾಗೂ ಕುಂದಾಪುರ ಕನ್ನಡದಲ್ಲಿ ವಿವರಣೆ ನೀಡಿದರು.
ಉದ್ಘಾಟನೆ-
ಭವ್ಯ ಭಾರತವನ್ನು ನಿರ್ಮಾಣ ಮಾಡಲು ಕಲೆ ಮತ್ತು ವಿಜ್ಞಾನ ಗುರುತರವಾದ ಕೊಡುಗೆಯನ್ನು ನೀಡುತ್ತದೆ. ವಿದ್ಯಾರ್ಥಿಗಳು ಮುಂದಿನ ಜಗತ್ತಿನ ಭಾವಿ ಪ್ರಜೆಗಳು. ಅವರಲ್ಲಿ ಕನಸುಗಳ ಬೀಜವನ್ನು ಬಿತ್ತುವ ಕೆಲಸ ಶಿಕ್ಷಣ ಸಂಸ್ಥೆಯಿಂದ, ಪಾಲಕರಿಂದ ಹಾಗೂ ಸಮಾಜದಿಂದಾದರೆ ಮಾತ್ರ ಭವ್ಯ ಭಾರತದ ಕನಸು ನಿಜವಾಗುತ್ತದೆ. ವಿದ್ಯಾರ್ಥಿಗಳ ಸೃಜನಶೀಲತೆ, ಆತ್ಮ ವಿಶ್ವಾಸ ಹಾಗೂ ವೈಜ್ಞಾನಿಕ ಚಿಂತನೆಗಳು ಸಮಗ್ರ ಬದಲಾವಣೆಗೆ ಭವಿಷ್ಯತ್ತಿನಲ್ಲಿ ಸಹಾಯಕವಾಗಲಿದೆ. ಈ ನಿಟ್ಟಿನಲ್ಲಿ ಗುರುಕುಲ ವಿದ್ಯಾಸಂಸ್ಥೆ ತಮ್ಮ ಎಲ್ಲ ಮಕ್ಕಳಿಗೆ ಅಧ್ಯಾಪಕರ ಮಾರ್ಗದರ್ಶನದ ಮೇರೆಗೆ ವಿಜ್ಞಾನ ಮಾದರಿ ವಸ್ತು ಪ್ರದರ್ಶನವನ್ನು ಹಬ್ಬದಂತೆ ಆಚರಿಸುತ್ತಿರುವುದು ಗುಣಾತ್ಮಕ ಬದಲಾವಣೆಯೆಂದರೆ ಅತಿಶಯೋಕ್ತಿ ಆಗಲಾರದೆಂದು ಮಣಿಪಾಲ ಇನ್ಸಿಟೂಟ್ ಆಫ್ ಟೆಕ್ನೋಲೊಜಿಯ ಕಂಪೂಟರ್ ಸೈನ್ಸ್ ವಿಭಾಗದ ಪ್ರಾದ್ಯಾಪಕ ಮನಮೋಹನ ಕೆ. ಉದ್ಘಾಟಿಸಿ ಮಾತನಾಡಿದರು.
ಇವರು ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಚಿಂತನೆ ಮತ್ತು ತತ್ವದ ಅಡಿಯಲ್ಲಿ ವಿಭಿನ್ನ ಬಗೆಯ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಇದೊಂದು ಉತ್ತಮ ಪ್ರಯತ್ನವಾಗಿದೆ ಎಂದು ಪ್ರಶಂಷಿಸಿದರು. ಈ ವಸ್ತು ಪ್ರದರ್ಶನದ ಉದ್ಘಾಟನೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಜಂಟಿ ನಿರ್ದೇಶಕರಾದ ಸುಭಾಶ್ಚಂದ್ರ ಶೆಟ್ಟಿರವರು ವಸ್ತು ಪ್ರದರ್ಶನದ ಮಾದರಿಯ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಕ್ಕೆ ಉಪಯುಕ್ತ ವಾಗುವಂತಹ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಲು ನಮ್ಮ ಸಂಸ್ಥೆಯ ಶಿಕ್ಷಕವೃಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕೆಂದು ಸಲಹೆಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ ಅನುಪಮ ಶೆಟ್ಟಿ ಹಾಗೂ ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಅರವಿಂದ ಮರಳಿ ಮತ್ತು ಗುರುಕುಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣ್ ಡಿ’ಸಿಲ್ವಾರವರು ಉಪಸ್ಥಿತರಿದ್ದರು. ಈ ಉದ್ಘಾಟನ ಕಾರ್ಯಕ್ರಮವನ್ನು ಹತ್ತನೆ ತರಗತಿಯ ವಿದ್ಯಾರ್ಥಿನಿಯರಾದ ಅಪೇಕ್ಷಾ ಹಾಗೂ ಆಯುಶ್ ನಿರ್ವಹಿಸಿದರು. ಅಥಿತಿಗಳ ಪರಿಚಯವನ್ನು ಶಿಕ್ಷಕಿ ಸ್ಮಿತಾ ನಿರ್ವಹಿಸಿದರು.
ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಬುದ್ಧಿಮತ್ತೆ ಹಾಗೂ ತೀಕ್ಷ್ಣತೆ ಹೆಚ್ಚಿಸಿ ಅವರಲ್ಲಿರುವ ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಲು ಈ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಲ್ಲಿ ಮೂರನೇ ವರ್ಷವೂ ಆಯೋಜಿಸಲಾಗಿದೆ. 550ಕ್ಕೂ ಅಧಿಕ ಮಾದರಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು, ಪೋಷಕರ ಪ್ರತಿಕ್ರಿಯೆ ಉತ್ತಮವಾಗಿದೆ.
-ಅನುಪಮ ಎಸ್. ಶೆಟ್ಟಿ (ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ)
(ವರದಿ- ಯೋಗೀಶ್ ಕುಂಭಾಸಿ)
Comments are closed.