
ಇಸ್ಲಾಮಾಬಾದ್: ಪಾಕಿಸ್ತಾನವೇ ಮೊದಲಿಗೆ ಅಣು ಬಾಂಬ್ಅನ್ನು ಉಪಯೋಗಿಸುವುದಿಲ್ಲ ಎಂದು ಪಾಕ್ ಪ್ರಧಾನಿ ಇರ್ಮಾನ್ ಖಾನ್ ಸೋಮವಾರ ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯದ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದುಗೊಳಿಸಿ, ಈ ಎರಡು ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ ಬಳಿಕ ಪಾಕ್ ಮತ್ತು ಭಾರತ ನಡುವಿನ ಪರಿಸ್ಥಿತಿ ಮತ್ತಷ್ಟು ವಿಷಮಗೊಂಡಿತ್ತು.
ಭಾರತ ಮತ್ತು ಪಾಕ್ ಎರಡು ದೇಶಗಳು ಪರಮಾಣು ಅಣು ಬಾಂಬ್ಗಳನ್ನು ಹೊಂದಿವೆ. ಒಂದು ವೇಳೆ ಇದೇ ಒತ್ತಡ ಪರಿಸ್ಥಿತಿ ಹೆಚ್ಚಾದರೆ ಅದು ಜಗತ್ತಿಗೆ ಅಪಾಯವಾಗಲಿದೆ. ಪರಮಾಣು ಅಣು ಬಾಂಬ್ ಅನ್ನು ನಮ್ಮ ಕಡೆಯಿಂದ ಮೊದಲಿಗೆ ನಾವು ಬಳಸುವುದಿಲ್ಲ ಎಂದು ಇರ್ಮಾನ್ ಖಾನ್ ಹೇಳಿದರು.
ಲಾಹೋರ್ನ ಪೂರ್ವ ನಗರದಲ್ಲಿ ಆಯೋಜನೆಗೊಂಡಿದ್ದ ಸಿಖ್ ಸಮುದಾಯದ ಸಮಾರಂಭದಲ್ಲಿ ಇರ್ಮಾನ್ ಖಾನ್ ಈ ಮಾತುಗಳನ್ನು ಹೇಳಿದರು.
ಕಳೆದ ವಾರದ ಹಿಂದೆ ಇರ್ಮಾನ್ ಖಾನ್ ಅವರು, ನಮ್ಮ ಬಳಿಯೂ ಅಣು ಬಾಂಬ್ ಇದೆ ಎಂದು ಭಾರತಕ್ಕೆ ಬೆದರಿಕೆಯೊಡ್ಡಿದ್ದರು.
Comments are closed.