ಕರ್ನಾಟಕ

ಮಂಡ್ಯದಲ್ಲೂ ಹುಚ್ಚಾವೆಂಕಟ್ ರಂಪಾಟ: ಬಿತ್ತು ಗೂಸಾ..!

Pinterest LinkedIn Tumblr


ಮಂಡ್ಯ: ಮೊನ್ನೆ ಮೊನ್ನೆ ತಾನೇ ಮಡಿಕೇರಿಯಲ್ಲಿ ಓರ್ವನ ಕಾರ್‌ಗೆ ಹಾನಿ ಮಾಡಿ, ಗೂಸಾ ತಿಂದಿದ್ದ ಹುಚ್ಚಾ ವೆಂಕಟ್ ಇಂದೂ ಸಹ ಮಂಡ್ಯದಲ್ಲಿ ತನ್ನ ರಂಪಾಟ ಮುಂದುವರೆಸಿ, ಕಾರ್‌ಗೆ ಕಲ್ಲಿನಿಂದ ಹೊಡೆದು ಗೂಸಾ ತಿಂದಿದ್ದಾರೆ.

ಕೊಡಗಿನಿಂದ ಮಂಡ್ಯಕ್ಕೆ ಬಂದ ವೇಳೆ ಮದ್ಯಪಾನ ಮಾಡುವಾಗ, ಮಂಡ್ಯದ ವಿನಯ್ ಮತ್ತು ಕಿರಣ್ ಹುಚ್ಚಾ ವೆಂಕಟ್‌ಗೆ ಪರಿಚಯವಾಗಿದ್ದಾರೆ. ಈ ವೇಳೆ ವಿನಯ್, ಕಿರಣ್ ಜೊತೆ, ಅವರ ಕಾರಿನಲ್ಲೇ ಹೊಟೇಲ್‌ಗೆ ಬಂದ ವೆಂಕಟ್‌ಗೆ ಪರಿಚಿತರು ಊಟ ಕೊಡಿಸಲು ಮುಂದಾಗಿದ್ದಾರೆ. ಆದ್ರೆ ಊಟಕ್ಕೆ ಹೋಗದೇ, ಸಹಾಯ ತೋರಲು ಬಂದಿದ್ದ ವಿನಯ್, ಕಿರಣ್‌ಗೆ ಸೇರಿದ ಕಾರಿನ ಮೇಲೆ ದರ್ಪ ತೋರಿದ್ದ ಹುಚ್ಚಾ ವೆಂಕಟ್‌ಗೆ ಕಾರಿನ ಮಾಲೀಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇನ್ನು ಹುಚ್ಚಾ ವೆಂಕಟ್ ಹುಚ್ಚಾಟ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೊದಲು ಕಾರಿನ ಮೇಲೆ ಕಾಲು ಇರಿಸಿದ ವೆಂಕಟ್, ತದನಂತರ ಕಲ್ಲಿನಿಂದ ಕಾರಿನ ಗಾಜು ಒಡೆದು ಹಾಕಿದ್ದಾನೆ. ತದನಂತರ ಬಂದ ಕಾರಿನ ಮಾಲೀಕರು ಹುಚ್ಚಾ ವೆಂಕಟ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

Comments are closed.