
ಸಿಲಿಕಾನ್ ಸಿಟಿಯ ಸಿನಿ ಇತಿಹಾಸಕ್ಕೆ ರಂಗು ತುಂಬಿದ್ದೇ ಇಲ್ಲಿನ ಥಿಯೇಟರ್ಗಳು. ಮೆಜೆಸ್ಟಿಕ್, ಸಾಗರ್,ಕಲ್ಪನಾ,ಕೈಲಾಶ್,ಕೆಂಪೇಗೌಡ,ಕಪಾಲಿ,ಸುಜಾತಾ ಹೀಗೆ ಒಂದೊಂದು ಚಿತ್ರಮಂದಿರಗಳ ಹಿಂದು ಒಂದೊಂದು ಸುಂದರ ನೆನಪಿನ ಕತೆ ಇದೆ. ಆದರೆ ಇದರಲ್ಲಿ ಬಹುತೇಕ ಚಿತ್ರಮಂದಿರಗಳು ಈಗ ಪ್ರದರ್ಶನ ನಿಲ್ಲಿಸಿದ್ದು, ಇದೀಗ ಈ ಸಾಲಿಗೆ ನವರಂಗ ಚಿತ್ರಮಂದಿರ ಹೊಸ ಸೇರ್ಪಡೆ.
ಹೌದು ಬೆಂಗಳೂರಿನ ರಾಜಾಜಿನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ 59 ವರ್ಷಗಳ ಇತಿಹಾಸ ಇರುವ ನವರಂಗ್ ಥಿಯೇಟರ್ ಇನ್ಮುಂದೆ ಪ್ರದರ್ಶನ ನಿಲ್ಲಿಸಲಿದ್ದು, ಮಲ್ಟಿಪ್ಲೆಕ್ಸ್ ರೂಪದಲ್ಲಿ ಮತ್ತೆ ಕಾರ್ಯಾರಂಭ ಮಾಡಲಿದೆ. ನಗರದಲ್ಲಿ ಮಲ್ಟಿಪ್ಲೆಕ್ಸ್ ಹಾವಳಿಯಿಂದ ನವರಂಗ ಥಿಯೇಟರ್ ನಷ್ಟ ಅನುಭವಿಸುವ ಪರಿಸ್ಥಿತಿ ಇತ್ತು. ಎಲ್ಲರೂ ಥಿಯೇಟರ್ ಮಾಲೀಕ ಮೋಹನ್ ಅವರಿಗೆ ಥಿಯೇಟರ್ ಕೆಡವಿ ಶಾಪಿಂಗ್ ಮಾಲ್ ಕಟ್ಟಲು ಸಲಹೆ ನೀಡಿದ್ದರಂತೆ.
ಆದರೆ ತಮ್ಮ ತಂದೆಯ ಸವಿ ನೆನಪಿಗಾಗಿ ಥಿಯೇಟರ್ ಹಾಗೇ ಉಳಿಸಿಕೊಳ್ಳಲು ಮುಂಧಾಗಿರುವ ಮಾಲೀಕ ಮೋಹನ್, ಮಲ್ಟಿಪ್ಲೆಕ್ಸ್ ರೂಪದಲ್ಲಿ ರೀ-ಓಪನ್ ಮಾಡಲಿದ್ದಾರೆ. 2 ಕೋಟಿ ರೂಪಾಯಿ ವೆಚ್ಚದಲ್ಲಿ ಮರುನಿರ್ಮಾಣವಾಗಲಿದ್ದು, ರಿನೋವೇಶನ್ ಕೆಲಸ ಮುಗಿಯುವರೆಗೂ ಚಿತ್ರಪ್ರದರ್ಶನ ಸ್ಥಗಿತಗೊಳ್ಳಲಿದೆ.
ಡಾ. ರಾಜ್ಕುಮಾರ್, ಶಿವರಾಜ್ಕುಮಾರ್ , ಪುನೀತ್ ಸೇರಿದಂತೆ ಸ್ಟಾರ್ಗಳ ಚಿತ್ರಗಳು ಈ ಥಿಯೇಟರ್ನಲ್ಲಿ ದಾಖಲೆ ಪ್ರದರ್ಶನ ಕಂಡಿವೆ. ಅಲ್ಲದೇ ಮುಂಗಾರು ಮಳೆ ಚಿತ್ರ 25 ವಾರಕ್ಕೂ ಹೆಚ್ಚು ದಿನ ಇಲ್ಲಿ ಪ್ರದರ್ಶನಗೊಂಡಿದೆ.
Comments are closed.