ಮನೋರಂಜನೆ

ಸಾಹೋ ಚಿತ್ರ ವಿಮರ್ಶೆ

Pinterest LinkedIn Tumblr


350 ಕೋಟಿ ಬಜೆಟ್​​. ನ್ಯಾಷನಲ್​​​ ಸ್ಟಾರ್ ಪ್ರಭಾಸ್. 2 ವರ್ಷಗಳ ಸಾಹಸ. ಹಾಲಿವುಡ್​ ರೇಂಜ್​​ನ ಇಂಡಿಯನ್​ ಬಿಗ್ಗೆಸ್ಟ್ ಆ್ಯಕ್ಷನ್ ಥ್ರಿಲ್ಲರ್. ಅಬ್ಬಬ್ಬಾ ಸಾಹೋ, ಸ್ಪೆಷಾಲಿಟಿಗಳನ್ನೆಲ್ಲಾ ನೋಡಿದ್ಮೇಲೆ, ಸಿನಿಮಾ ಇನ್ಯಾವ ರೇಂಜಿಗಿರುತ್ತೋ ಅಂತ ಪ್ರೇಕ್ಷಕರು ಕಾಯ್ತಿದ್ರು. ಫೈನಲಿ ಸಿಲ್ವರ್​ ಸ್ಕ್ರೀನ್​ ಮೇಲೆ ಸಾಹೋ ಆರ್ಭಟ ಶುರುವಾಗಿದೆ.. ಸಾಹೋ ಕಥೆಯೇನು..? ಡಾರ್ಲಿಂಗ್​​ ಪ್ರಭಾಸ್​​ ಪರಾಕ್ರಮ ನೋಡಿದ ಪ್ರೇಕ್ಷಕರು ಏನಂದ್ರು..? ಸಿನಿಮಾ ಪ್ಲಸ್​ ಪಾಯಿಂಟ್ಸ್​​​​​​ ಏನು..? ಮೈನಸ್​​ ಪಾಯಿಂಟ್ಸ್​​ ಏನು..? ಇಲ್ಲಿದೆ ನೋಡಿ ಡಿಟೈಲ್ಡ್​ ರಿಪೋರ್ಟ್.

ಬಾಹುಬಲಿ ಸೂಪರ್ ಸಕ್ಸಸ್ ನಂತ್ರ ಡಾರ್ಲಿಂಗ್​ ಪ್ರಭಾಸ್​, ಅಭಿನಯದ ಸಿನಿಮಾ ಸಾಹೋ. ಇದೊಂದು ಸಂಗತಿ ಸಾಕಾಗಿತ್ತು, ಸಾಹೋ ಸಿನಿಮಾ ಮೇಲೆ ನಿರೀಕ್ಷೆ ಹುಟ್ಟಿಕೊಳ್ಳೋಕ್ಕೆ. ಇನ್ನು ಸಿನಿಮಾ ರಿಲೀಸ್​ ವೇಳೆಗೆ ನಿರೀಕ್ಷೆ ಎವರೆಸ್ಟ್​ ಶಿಖರದಷ್ಟು ಎತ್ತರಕ್ಕೆ ಬೆಳೆದು ನಿಂತಿತ್ತು. ಥೇಟ್​ ಬಾಹುಬಲಿಯಂತೆ ನಿರೀಕ್ಷೆಯ ಭಾರ ಹೊತ್ತು, ಸಾಹೋ ಥಿಯೇಟರ್ ಅಂಗಳಕ್ಕೆ ಬಂದಿದ್ದಾನೆ. ಸಾಹೋ ಫೀವರ್​ಗೆ ತಕ್ಕಂತೆ ಅಡ್ವಾನ್ಸ್​​ ಟಿಕೆಟ್ ಜೋರಾಗಿತ್ತು. ಹಲವೆಡೆ ಮಧ್ಯರಾತ್ರಿಯಿಂದ್ಲೇ ಸಾಹೋ ಆರ್ಭಟ ಶುರುವಾದ ಕಾರಣ, ಚಿತ್ರಕ್ಕೆ ಫಸ್ಟ್​ ಡೇ ಭರ್ಜರಿ ಓಪನಿಂಗ್​ ಸಿಕ್ಕಿದೆ.

ಪ್ರಪಂಚದ ಟಾಪ್​ ಗ್ಯಾಂಗ್​ಸ್ಟರ್ಸ್​ ಇರೋ ವಾಜಿ ಸಿಟಿಯಲ್ಲಿ, ಅಂಡರ್​ವರ್ಲ್ಡ್​ ಉತ್ತರಾಧಿಕಾರಕ್ಕಾಗಿ ರಾಯ್​ ಮತ್ತು ಪೃಥ್ವಿರಾಜ್​ ನಡುವೆ ಪೈಪೋಟಿ ಶುರುವಾಗುತ್ತೆ. ಮುಂಬೈನಲ್ಲಿ ರಾಯ್​, ಅನುಮಾನಾಸ್ಪದವಾಗಿ ರಸ್ತೆ ಅಪಘಾತದಲ್ಲಿ ಸಾಯ್ತಾನೆ. ಅದೇ ಸಮಯದಲ್ಲಿ ಲಕ್ಷ ಕೋಟಿಯನ್ನ ಹೊತ್ತು ಬರೋ ಶಿಪ್ ಸ್ಫೋಟವಾಗುತ್ತೆ.. ಆಗ ರಾಯ್​​ ವಾರಸ್ದಾರನಾಗಿ ವಿಶ್ವಕ್​ ಗ್ಯಾಂಗ್​ಸ್ಟರ್​ ಸಾಮ್ರಾಜ್ಯಕ್ಕೆ ಎಂಟ್ರಿ ಕೊಡ್ತಾನೆ. ಮತ್ತೊಂದ್ಕಡೆ ಮುಂಬೈನಲ್ಲಿ 2 ಸಾವಿರ ಕೋಟಿ ದರೋಡೆಯಾಗುತ್ತೆ. ಈ ದರೋಡೆ ಪ್ರಕರಣ ಭೇದಿಸೋಕ್ಕೆ ಅಂಡರ್​ ಕವರ್ ಕಾಪ್​ ಅವತಾರದಲ್ಲಿ ಅಶೋಕ್ ಚಕ್ರವರ್ತಿ, ಪ್ರಭಾಸ್ ಎಂಟ್ರಿಯಾಗುತ್ತೆ.

ಕ್ರೈಂ ಬ್ರಾಂಚ್​ ಆಫೀಸರ್ ಅಮೃತಾ ನಾಯರ್, ಅರ್ಥಾತ್​ ಶ್ರದ್ಧಾ ಕಪೂರ್​ ​ಜೊತೆ ಅಶೋಕ್ ಚಕ್ರವರ್ತಿ ಇನ್​ವೆಸ್ಟಿಗೇಷನ್​ ಸ್ಟಾರ್ಟ್​ ಆಗುತ್ತೆ. ಜೊತೆ ಜೊತೆಗೆ ಇಬ್ಬರ ಲವ್ ಸ್ಟೋರಿ ಸಾಗುತ್ತೆ. ಅತ್ತ ವಾಜಿ ಸಿಟಿಯಲ್ಲಿ ಮಿಸ್ಟೀರಿಯಸ್​​ ಬ್ಲ್ಯಾಕ್​ ಬಾಕ್ಸ್​​​ಗಾಗಿ ಗ್ಯಾಂಗ್​ಸ್ಟರ್ಸ್​​ ಮಧ್ಯೆ ಕಾದಾಟ ಶುರುವಾಗುತ್ತೆ. ಇತ್ತ ಅಸಲಿ ಅಶೋಕ್ ಚಕ್ರವರ್ತಿ ಯಾರು ಅನ್ನೋದು ಗೊತ್ತಾಗೋ ಹೊತ್ತಿಗೆ ಇಂಟರ್​ವಲ್. ಅಷ್ಟಕ್ಕೂ ಬ್ಲ್ಯಾಕ್​ ಬಾಕ್ಸ್ ಮಿಸ್ಟರಿ ಏನು..? ಅದನ್ನ ಹೀರೋ ಹೇಗೆ ಭೇದಿಸ್ತಾನೆ..? ಕೊನೆಗೆ ಅಂಡರ್​ವರ್ಲ್ಡ್ ಡಾನ್ ಯಾರಾಗ್ತಾರೆ ಅನ್ನೋದೇ ಸಾಹೋ ಕಥೆ.

ಮೈಜುಮ್​ ಅನ್ಸೋ ಆ್ಯಕ್ಷನ್, ಹೈ ಪ್ರೊಡಕ್ಷನ್ ವ್ಯಾಲ್ಯೂಸ್, ಸ್ಟನ್ನಿಂಗ್ ವಿಷ್ಯುವಲ್ಸ್, ಖಡಕ್ ವಿಲನ್ಸ್, ಫಾರಿನ್ ಲೊಕೇಶನ್ಸ್. ಯಂಗ್ ರೆಬೆಲ್ ಸ್ಟಾರ್ ಕಿಲ್ಲಿಂಗ್ ಲುಕ್ಸ್. ಸ್ಯಾಂಪಲ್​ಗಳಲ್ಲಿ ಇದು ಏಕ್ದಮ್​​ ಹಾಲಿವುಡ್​ ರೇಂಜ್​​ ಸಿನಿಮಾ ಸಾಹೋ. ಪ್ರಭಾಸ್​​ ಮೈನವಿರೇಳಿಸೋ ಆ್ಯಕ್ಷನ್, ಸ್ಟ್ರಾಂಗ್​ ಸ್ಕ್ರೀನ್​ ಪ್ರಸೆನ್ಸ್, ಡೈಲಾಗ್ ಡೆಲಿವರಿ ಎಲ್ಲವೂ ಸಿಂಪ್ಲಿ ಸೂಪರ್. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ, ಸಾಹೋ, ಪ್ರಭಾಸ್​ ಒನ್​ ಮ್ಯಾನ್​ ಶೋ. ಆ್ಯಕ್ಷನ್​ ಪ್ರಿಯರಿಗಂತೂ ಈ ಆ್ಯಕ್ಷನ್​ ಥ್ರಿಲ್ಲರ್ ಹಬ್ಬದೂಟವೇ ಸರಿ.

ಇನ್ನು ಖಳನಟರಾಗಿ ಜಾಕಿ ಶ್ರಾಫ್​, ಅರುಣ್​ ವಿಜಯ್, ಮಂದಿರಾ ಬೇಡಿ, ಟಿನು ಆನಂದ್​, ಚಂಕಿ ಪಾಂಡೆ ಹೀಗೆ ದೊಡ್ಡ ತಾರಾಗಣವೇ ಸಿನಿಮಾದಲ್ಲಿದೆ. ಗ್ಯಾಂಗ್​ಸ್ಟರ್ಸ್​ ಅವತಾರದಲ್ಲಿ ಇವ್ರ ಲುಕ್ಸ್​, ಪ್ರಸೆನ್ಸ್​ ಸೊಗಸಾಗಿದೆ. ಶ್ರದ್ಧಾ ಕಪೂರ್​ ಬರೀ ಹಾಡುಗಳಲ್ಲಿ ಮಾತ್ರವಲ್ಲ, ಆ್ಯಕ್ಷನ್​ ಸೀಕ್ವೆನ್ಸ್​ನಲ್ಲೂ ಅಬ್ಬರಿಸಿ, ಫುಲ್ ಮಾರ್ಕ್ಸ್​ ಗಿಟ್ಟಿಸಿಕೊಂಡಿದ್ದಾರೆ.

ಅಬ್ಬಬ್ಬಾ ಅನ್ಸೋ ಮೇಕಿಂಗ್​ನಿಂದ ಗೆದ್ದಿರೋ ಯುವ ನಿರ್ದೇಶಕ ಸುಜಿತ್​, ಪ್ರೇಕ್ಷಕರನ್ನ ರಂಜಿಸುವಲ್ಲಿ ಎಡವಿದ್ದಾರೆ.. ಗ್ಯಾಂಗ್​ಸ್ಟರ್​ ಸಿನಿಮಾಗಳಿಗೆ ಆ್ಯಕ್ಷನ್​, ಟ್ವಿಸ್ಟ್​ಗಳು ಇಂಪಾರ್ಟೆಂಟ್​. ಆ ವಿಚಾರದಲ್ಲಿ ಗೆದ್ದಿದ್ರು, ಅದನ್ನ ಪ್ರೇಕ್ಷಕರಿಗೆ ಅರ್ಥ ಮಾಡಿಸುವಲ್ಲಿ ಸೋತಿದ್ದಾರೆ. ಆರಂಭದಿಂದ ಕೊನೆವರೆಗೆ ಡಜನ್​ಗಟ್ಟಲೇ ಗ್ಯಾಂಗ್​ಸ್ಟರ್ಸ್, ಬಂದೂಕು, ಬಾಂಬಿನ ಸದ್ದು, ಛೇಸಿಂಗ್​ ಸೀಕ್ವೆನ್ಸ್, ಎಲ್ಲವೂ ಅಬ್ಬಬ್ಬಾ ಅನ್ನಿಸಿದ್ರು, ಎಲ್ಲವನ್ನ ಮೈಂಡ್​ ಡೈಜೆಸ್ಟ್ ಮಾಡಿಕೊಳ್ಳೋದು ಕಷ್ಟವಾಗಿಬಿಡುತ್ತೆ. ರೊಟೀನ್​ ಕ್ರೈಂ ಫಾರ್ಮುಲಾ ಕಥೆ ತಗೊಂಡಿರೋ ಸುಜಿತ್​, ಅದನ್ನ ಪ್ರೆಸೆಂಟ್ ಮಾಡುವಲ್ಲಿ ಮುಗ್ಗರಿಸಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ನಿರಾಸೆ ಮೂಡಿಸಿದೆ.

350 ಕೋಟಿ ಬಜೆಟ್ನ ಸಾಹೋ​ ಚಿತ್ರದ ಪ್ರತಿ ಫ್ರೇಮ್​ನಲ್ಲೂ ಅದ್ದೂರಿತನ ಎದ್ದು ಕಾಣ್ತಿದೆ. ಆರ್​. ಮಧೀ ಕ್ಯಾಮರಾ ವರ್ಕ್​ ಚಿತ್ರದ ಮತ್ತೊಂದು ಪ್ಲಸ್​ ಪಾಯಿಂಟ್. ಗಿಬ್ರನ್​ ಬ್ಯಾಕ್​ಗ್ರೌಂಡ್​ ಸ್ಕೋರ್​ ಬೊಂಬಾಟಾಗಿದೆ. ಆದ್ರೆ, ಹಾಡುಗಳು ನೋಡೋಕ್ಕೆ ಚೆಂದ ಅನ್ನಿಸಿದ್ರು, ಕೇಳೋಕ್ಕೆ ಮಜಾ ಕೊಡೋದಿಲ್ಲ. ಇದ್ದಿದ್ದರಲ್ಲಿ, ಪ್ರಭಾಸ್, ಜಾಕ್ವೆಲಿನ್​ ಸ್ಪೆಷಲ್​ ನಂಬರ್​, ಹೈಲೆಟ್.

ಸಾಹೋ ಪ್ಲಸ್​ ಪಾಯಿಂಟ್ಸ್
⦁ ಆ್ಯಕ್ಷನ್​ ಸೀನ್ಸ್
⦁ ಪ್ರಭಾಸ್ ಪರ್ಫಾರ್ಮೆನ್ಸ್
⦁ ಕ್ಯಾಮರಾ ವರ್ಕ್ & ಹಿನ್ನೆಲೆ ಸಂಗೀತ

ಸಾಹೋ ಮೈನಸ್​ ಪಾಯಿಂಟ್ಸ್
⦁ ಸ್ಟೋರಿ, ಸ್ಕ್ರೀನ್​ ಪ್ಲೇ
⦁ ಸಿನಿಮಾ ಕಾಲಾವಧಿ
⦁ ಎಡಿಟಿಂಗ್

ಸಾಹೋ ಚಿತ್ರವನ್ನ ಕನ್ನಡದ ಕೆಜಿಎಫ್​ ಚಿತ್ರಕ್ಕೆ ಹೋಲಿಕೆ ಮಾಡಿ ಮಾತನಾಡ್ತಿದ್ರು. ಆದ್ರೆ, ಕೆಜಿಎಫ್​ಗೆ ಕಂಪೇರ್ ಮಾಡಿದ್ರೆ, ಸಾಹೋ ಕೆಟ್ಟ ಪ್ರಯತ್ನ ಅನ್ನಿಸಿಬಿಡುತ್ತೆ. ಕೆಜಿಎಫ್​ ಸಿನಿಮಾದಲ್ಲಿದ್ದ ಮ್ಯಾಜಿಕ್​, ಮಜಾ ಸಾಹೋದಲ್ಲಿ ಸಿಗೋದಿಲ್ಲ. 80 ಕೋಟಿ ಕೆಜಿಎಫ್​​ ಮಾಡಿದ ಮ್ಯಾಜಿಕ್ 350 ಕೋಟಿ ಸಾಹೋ ಮಾಡ್ಲೇಯಿಲ್ಲ. ಅದೇ ಕಾರಣಕ್ಕೆ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಮೇಕಿಂಗ್​, ಆ್ಯಕ್ಷನ್ ಬಿಟ್ರೆ, ಮತ್ಯಾವ್ದೆ ವಿಚಾರದಲ್ಲಿ ಸಾಹೋ ಇಷ್ಟವಾಗಲ್ಲ. ಅದೇ ಕಾರಣಕ್ಕೆ ಒಂದು ಒಳ್ಳೆ ಅವಕಾಶವನ್ನ ಚಿತ್ರತಂಡ ಹಾಳು ಮಾಡಿಕೊಂಡುಬಿಡ್ತು ಅನ್ಸುತ್ತೆ.

ಪ್ರಭಾಸ್​ ಮೇಲಿನ ಪ್ರೀತಿಯಿಂದ ನಿರ್ಮಾಪಕರು, ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಸಿನಿಮಾ ನೋಡೋಕ್ಕೆ ಅದ್ಭುತ ಅನ್ನಿಸಿದ್ರು, ಎಲ್ಲೋ ಮಿಸ್​ ಹೊಡೆಯೋ ಫೀಲ್​ ಬರುತ್ತೆ. ಹಾಗಾಗಿ ಪ್ರೇಕ್ಷಕನಿಗೆ ಸಾಹೋ ಪ್ರಭಾಸ್​​​ ಜೊತೆ ಜರ್ನಿ ಮಜಾ ಕೊಡಲ್ಲ.

ಒಟ್ಟಾರೆ ಅಡ್ವಾನ್ಸ್ ಟಿಕೆಟ್​ ಬುಕ್ಕಿಂಗ್​ನಿಂದ ಸಾಹೋ ಫಸ್ಟ್​​ ಡೇ ಕಲೆಕ್ಷನ್ ಜೋರಾಗಿದೆ. ಆದ್ರೆ, ಮಿಕ್ಸ್ಡ್​​ ರೆಸ್ಪಾನ್ಸ್, ನೆಗೆಟಿವ್​ ಮೌತ್ ಪ್ರಮೋಷನ್​ನಿಂದ ಸಿನಿಮಾ ಬಾಕ್ಸಾಫೀಸ್​ನಲ್ಲಿ ಮುಗ್ಗರಿಸೋ ಸೂಚನೆ ಸಿಕ್ತಿದೆ. ಸಾಹೋ ಬಾಕ್ಸಾಫೀಸ್ ಲೆಕ್ಕಾಚಾರ ಏನಾಗುತ್ತೋ ಕಾದು ನೋಡ್ಬೇಕು.

Comments are closed.