ರಾಷ್ಟ್ರೀಯ

ಯುಪಿಎಸ್ ಪರೀಕ್ಷೆಗೆ ಓದುವುದರಲ್ಲೇ ಗಂಡ ಬ್ಯುಸಿ; ವಿಚ್ಛೇದನ ಕೋರಿದ ಪತ್ನಿ!

Pinterest LinkedIn Tumblr


ಪಾಟ್ನ: ತನ್ನ ಪತಿ ಇಡೀ ದಿನ ಯುಪಿಎಸ್ ಸಿ(ಕೇಂದ್ರೀಯ ಲೋಕಸೇವಾ ಆಯೋಗ) ಪರೀಕ್ಷೆ ತಯಾರಿಯಲ್ಲಿಯೇ ಕಾಲಕಳೆಯುವ ಮೂಲಕ ವೈಯಕ್ತಿಕ ಬದುಕಿಗೆ ಸಮಯ ಮೀಸಲಿಡುತ್ತಿಲ್ಲ ಎಂದು ಆರೋಪಿಸಿರುವ ಪತ್ನಿ ವಿಚ್ಛೇದನ ಕೊಡಿಸುವಂತೆ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿರುವ ಘಟನೆ ಬೋಪಾಲ್ ನಲ್ಲಿ ನಡೆದಿದೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕೌನ್ಸೆಲಿಂಗ್ ಸಮಯದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಆಕೆಯ ಮಾರ್ಗದರ್ಶಿ ಹೇಳಿಕೆ ಪ್ರಕಾರ, ತನ್ನ ಪತಿ ಇಡೀ ದಿನ ಪರೀಕ್ಷೆಗಾಗಿ ಓದುವುದರಿಂದ ನನ್ನ ಜೊತೆ ಮಾತನಾಡುವುದು ಇಲ್ಲ. ಕೆಲವು ಸಂದರ್ಭಗಳಲ್ಲಿ ಸಿನಿಮಾ, ಶಾಪಿಂಗ್ ಗೆ ಹೋಗುವ ಎಂದು ಕೇಳಿದರೆ ತನಗೆ ಅದರಲ್ಲಿ ಆಸಕ್ತಿ ಇಲ್ಲ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಸಂಬಂಧಿಕರ ಮನೆಗೂ ಹೋಗಲ್ಲ. ಕೇವಲ ಯುಸಿಎಸ್ ಸಿ ಪರೀಕ್ಷೆ ತಯಾರಿಯಲ್ಲಿಯೇ ತಲ್ಲೀನರಾಗಿರುತ್ತಾರೆ ಎಂದು ಆರೋಪಿಸಿದ್ದರು.

ಈ ಕಾರಣದಿಂದಾಗಿ ತಾನು ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದೇನೆ ಎಂದು ಆಕೆ ತಿಳಿಸಿದ್ದಳು. ಈಕೆಯ ಕೌನ್ಸೆಲಿಂಗ್ ಬಳಿಕ ಪತಿಯನ್ನೂ ಕರೆಯಿಸಿ ಕೌನ್ಸೆಲಿಂಗ್ ಮಾಡಿಸಿದಾಗ, ತನಗೆ ಪತ್ನಿಯ ವಿರುದ್ಧ ಯಾವುದೇ ದೂರುಗಳಿಲ್ಲ. ಯುಪಿಎಸ್ ಸಿ ಪರೀಕ್ಷೆ ಉತ್ತೀರ್ಣನಾಗಬೇಕೆಂಬುದು ನನ್ನ ಬಾಲ್ಯದ ಕನಸು. ಈ ಕಾರಣದಿಂದ ತಾನು ಪರೀಕ್ಷೆ ತಯಾರಿಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿರುವುದಾಗಿ ತಿಳಿಸಿದ್ದರು.

ಯುಪಿಎಸ್ ಸಿ ಪರೀಕ್ಷೆ ತಯಾರಿಯ ವಿಷಯದಲ್ಲಿ ನಮ್ಮ ವೈಯಕ್ತಿಕ ಬದುಕು ಅತಂತ್ರವಾಗುತ್ತಿದ್ದು, ಇದು ಮತ್ತಷ್ಟು ಜಟಿಲವಾಗುವುದು ನನಗೆ ಬೇಕಾಗಿಲ್ಲ ಎಂದು ಪತಿ ತಿಳಿಸಿದ್ದಾರೆ. ಹೀಗೆ ಗಂಡ, ಹೆಂಡತಿಯ ಪ್ರತಿಕ್ರಿಯೆ ಆಲಿಸಿದ ನಂತರ ಸ್ವಲ್ಪ ಸಮಯ ತೆಗೆದುಕೊಂಡು ಒಟ್ಟಿಗೆ ಇದ್ದು, ನಂತರ ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಕೌನ್ಸೆಲಿಂಗ್ ನಲ್ಲಿ ಸಲಹೆ ನೀಡಿ ಕಳುಹಿಸಿರುವುದಾಗಿ ವರದಿ ವಿವರಿಸಿದೆ.

Comments are closed.