ಕರ್ನಾಟಕ

ಕಾಂಗ್ರೆಸ್​ ಸೋಷಿಯಲ್​ ಮೀಡಿಯಾದ ಹೊಣೆಗಾರಿಕೆ ಮತ್ತೊಮ್ಮೆ ಕನ್ನಡಿಗರಿಗೆ ಒಲಿಯುತ್ತಾ?!

Pinterest LinkedIn Tumblr


ಕಾಂಗ್ರೆಸ್​​ ಸಾಮಾಜಿಕ ಜಾಲತಾಣ ಹಿಂದೆಂದಿಗಿಂತ ಆಕ್ಟಿವ್​ ಆಗಿದೆ. ಈ ಹಿಂದೆ ಕನ್ನಡತಿ, ಸ್ಯಾಂಡಲ್​ವುಡ್​ ಕ್ವೀನ್​, ಮಾಜಿ ಸಂಸದೆ ರಮ್ಯ ಈ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಗುರುತಿಸಿಕೊಂಡಿದ್ದರು. ಇದೀಗ ರಮ್ಯ ಬಳಿಕವೂ ಕನ್ನಡಿಗರಿಗೆ ಈ ಪಟ್ಟ ಒಲಿದುಬರುವ ಮುನ್ಸೂಚನೆ ಲಭ್ಯವಾಗಿದ್ದು, ಇಬ್ಬರು ಕನ್ನಡಿಗರು ಸೇರಿ ನಾಲ್ವರ ಹೆಸರು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹೆಡ್ ಸ್ಥಾನಕ್ಕೆ ಕೇಳಿಬಂದಿದೆ.

ಸದ್ಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಟ್ವೀಟರ್‌ ಖಾತೆ ನಿರ್ವಹಿಸುತ್ತಿರುವ ನಿಖಿಲ್‌ ಆಳ್ವ ಹಾಗೂ ಕರ್ನಾಟಕದ ಕೆಪಿಸಿಸಿಯ ಸೋಷಿಯಲ್‌ ಮೀಡಿಯಾ ವಿಭಾಗದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ವೈ.ಬಿ. ಶ್ರೀವತ್ಸ ಅವರ ಹೆಸರು ಹೆಚ್ಚು ಚರ್ಚೆಯಲ್ಲಿದೆ.ಇದಲ್ಲದೆ ರಾಷ್ಟ್ರೀಯ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಹಾಗೂ ಎಐಸಿಸಿ ಮಾಧ್ಯಮ ಸಮನ್ವಯಕಾರ ರೋಹನ್‌ ಗುಪ್ತಾ ಹೆಸರೂ ಕೂಡ ಕೇಳಿಬರುತ್ತಿದೆ.ಇನ್ನು ಈ ವಿಚಾರವನ್ನು ಬಹಿರಂಗವಾಗಿ ಹೇಳಲು ಈ ನಾಲ್ವರು ಅಭ್ಯರ್ಥಿಗಳು ನಿರಾಕರಿಸುತ್ತಿದ್ದಾರೆ.

ಇನ್ನು 2017ರಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗಿನಿಂದಲೂ ರಾಹುಲ್‌ ಗಾಂಧಿ ಅವರ ಸೋಷಿಯಲ್‌ ಮೀಡಿಯಾವನ್ನು ನಿಖಿಲ್‌ ಆಳ್ವಾ ನಿರ್ವಹಿಸುತ್ತಿದ್ದು, ಟ್ವೀಟರ್‌ನಲ್ಲಿ ರಾಹುಲ್‌ರ ಹಿಂಬಾಲಕರ ಸಂಖ್ಯೆಯನ್ನು 20.5 ಲಕ್ಷದಿಂದ 1.5 ಕೋಟಿಗೆ ಎತ್ತರಿಸಿದ ಕೀರ್ತಿ ಆಳ್ವಾಗೆ ಸಲ್ಲುತ್ತದೆ ಎನ್ನಲಾಗಿದೆ.

ಹೀಗಾಗಿ ಕಾಂಗ್ರೆಸ್​ ಸೋಷಿಯಲ್ ಮೀಡಿಯಾವನ್ನು ಇನ್ನಷ್ಟು ಸ್ಟ್ರಾಂಗ್​ ಗೊಳಿಸುವ ಉದ್ದೇಶದಿಂದ ಇದೀಗ ಸಾಮಾಜಿಕ ಜಾಲತಾಣದ ಮುಖ್ಯಸ್ಥರ ಆಯ್ಕೆಗೆ ಸಿದ್ಧತೆ ನಡೆದಿದ್ದು, ಮತ್ತೊಮ್ಮೆ ಈ ಹುದ್ದೆ ಕನ್ನಡಿಗರಿಗೆ ಒಲಿಯುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Comments are closed.