ಕರ್ನಾಟಕ

ಸೊಸೆಯಿಂದ ಅತ್ತೆ ಮಾವನ ಹತ್ಯೆ!

Pinterest LinkedIn Tumblr


ಬಾಗಲಕೋಟೆ : ಲೈಂಗಿಕ ಕಿರುಕುಳ ನೀಡಿದ ಮಾವನ ವಿರುದ್ಧ ಆಕ್ರೋಶಗೊಂಡ ಸೊಸೆಯೊಬ್ಬಳು, ಮಾವ ಹಾಗೂ ಬಿಡಿಸಲು ಬಂದ ಅತ್ತೆಯನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಜಮಖಂಡಿ ತಾಲೂಕಿನ ಜಂಬಗಿ ಕೆ.ಡಿ. ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ.

ಕೊಲೆಯಾದ ವ್ಯಕ್ತಿಗಳನ್ನು ಸಿದರಾಯ ಮಲ್ಲೇಶನವರ (58) ಹಾಗೂ ಕಲಾವತಿ ಸಿದರಾಯ ಮಲ್ಲೇಶನವರ (45) ಎಂದು ಗುರುತಿಸಲಾಗಿದೆ. ಸೊಸೆ ಗೀತಾ ಮಲ್ಲೇಶನವರಿಗೆ ಮಾವ ಸಿದರಾಯ, ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಸೊಸೆ, ಕಬ್ಬಿನದ ರಾಡ್‌ನಿಂದ ಮಾವನಿಗೆ ಹೊಡೆಯುತ್ತಿದ್ದಳು. ಈ ವೇಳೆ ಬಿಡಿಸಲು ಬಂದ ಅತ್ತೆ ಕಲಾವತಿಗೂ ಅದೇ ರಾಡ್‌ನಿಂದ ಹೊಡೆದಿದ್ದು, ಮಾವ ಸಿದರಾಮಯ ಮತ್ತು ಕಲಾವತಿ ಅವರಿಗೆ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ.

ಕೊಲೆಗೈದ ಬಳಿಕ ಗೀತಾ ಮತ್ತು ಆಕೆಯ ಪತಿ ಕೂಡಿಕೊಂಡು, ಸಿದರಾಯನ ಶವವನ್ನು ಚೀಲದಲ್ಲಿ ಹಾಕಿಕೊಂಡು ಸಾವಳಗಿ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾಳೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.