ರಾಷ್ಟ್ರೀಯ

ಜಮ್ಮು-ಕಾಶ್ಮೀರದ 50 ಸಾವಿರ ಯುವಕರಿಗೆ ಸರಕಾರಿ ಉದ್ಯೋಗ!

Pinterest LinkedIn Tumblr


ಜಮ್ಮು-ಕಾಶ್ಮೀರ:ಜಮ್ಮು-ಕಾಶ್ಮೀರದ 50 ಸಾವಿರ ಯುವಕರಿಗೆ ಸರಕಾರಿ ಉದ್ಯೋಗ ನೀಡಲಾಗುವುದು ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಬುಧವಾರ ಘೋಷಿಸಿದ್ದಾರೆ. ಈ ಕೆಲಸದಲ್ಲಿ ಯುವಕರು ಪೂರ್ಣ ಪ್ರಮಾಣದಲ್ಲಿ ಉತ್ಸಾಹದಲ್ಲಿ ತೊಡಗಿಕೊಳ್ಳಬೇಕು. ಮುಂದಿನ 2-3 ತಿಂಗಳಲ್ಲಿಯೇ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ಪರಂಪರೆಯನ್ನು ನಾವು ರಕ್ಷಿಸುವುದಾಗಿ ಭರವಸೆ ನೀಡುತ್ತೇವೆ. ನಾವು ಯಾವುದೇ ಮಾಹಿತಿಯನ್ನು ಮುಚ್ಚಿಡುತ್ತಿಲ್ಲ. ಕಲ್ಲೆಸೆತದಿಂದ ಗಾಯಗೊಂಡಿರುವ ಪ್ರತಿಯೊಂದು ಘಟನೆಯನ್ನು ವರದಿ ಮಾಡಿದ್ದೇವೆ. ಈವರೆಗೂ ಯಾರೊಬ್ಬರ ಪ್ರಾಣಹಾನಿ ಸಂಭವಿಸಿಲ್ಲ. ಪ್ರತಿದಿನ ಕೇಂದ್ರ ಸರಕಾರ ನನ್ನ ಜೊತೆ ಮಾಹಿತಿ ಪಡೆಯುತ್ತಿದೆ ಎಂದು ಗವರ್ನರ್ ತಿಳಿಸಿದರು.

ಕಣಿವೆ ರಾಜ್ಯದ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಘೋಷಿಸಿದರು. ಕಾಶ್ಮೀರದ ಕುಪ್ವಾರ ಹಾಗೂ ಹಂದ್ವಾರ ಜಿಲ್ಲೆಗಳಲ್ಲಿ ಮೊಬೈಲ್ ಫೋನ್ ಸಂಪರ್ಕ ನೀಡಲಾಗಿದೆ. ಅದೇ ರೀತಿ ಉಳಿದ ಜಿಲ್ಲೆಗಳ ಮೊಬೈಲ್ ಸಂಪರ್ಕ ಶೀಘ್ರವೇ ನೀಡಲಾಗುವುದು ಎಂದರು.

ಜಮ್ಮು-ಕಾಶ್ಮೀರದ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನೂ ಇನ್ನೂ ಸ್ಪಷ್ಟಪಡಿಸಿಲ್ಲ ಎಂದ ರಾಜ್ಯಪಾಲ ಮಲಿಕ್, ರಾಹುಲ್ ಗಾಂಧಿ ರಾಜಕೀಯದಲ್ಲಿ ಇನ್ನೂ ಅಪ್ರಬುದ್ಧ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

Comments are closed.