
ಹೈದರಾಬಾದ್: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಗೆ ಸುದ್ದಿಯಾಗುತ್ತಿರುವ ಟಾಲಿವುಡ್ ನಟಿ ಶ್ರೀರೆಡ್ಡಿ ಬಿಗ್ ಬಾಸ್ ಮನೆಯ ಬಗ್ಗೆ ಮತ್ತೊಂದು ಸ್ಫೋಟಕ ಹೇಳಿಕೆ ಸಿಡಿಸಿದ್ದಾರೆ.
ತೆಲುಗು ಸುದ್ದಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ” ನಟ ನಾಗಾರ್ಜುನ ಆಯೋಜಿಸಿ ಕೊಡುತ್ತಿರುವ ತೆಲುಗು ಬಿಗ್ ಬಾಸ್ ಸೀಸನ್ 3ರಲ್ಲಿ ಆಫರ್ ನೀಡುವುದಾಗಿ ನನ್ನನ್ನು ಸಂಪರ್ಕಿಸಿದರು. ವ್ಯಕ್ತಿಯೊಬ್ಬರು ಹೈದರಾಬಾದಿನಲ್ಲಿರುವ ಹೋಟೆಲಿಗೆ ಬರಲು ಹೇಳಿ, ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಇರಬೇಕು ಎಂಬ ಬಗ್ಗೆ ಪ್ರಸ್ತಾಪಿಸಿ ಇದರಲ್ಲಿ ಲೈಂಗಿಕ ವಿಷಯಗಳ ಬಗ್ಗೆ ಹೆಚ್ಚು ಮಾತನಾಡಿದಾಗ ನನಗೆ ನಿಜವಾಗಲು ಗಾಬರಿಯಾಯಿತು’ ಎಂದಿದ್ದಾರೆ.
‘ನಿಮಗೆ ಬೆಡ್ಶೀಟ್ ಒಳಗೆ ಸೆಕ್ಸ್ ಮಾಡುವುದು ಇಷ್ಟವೇ? ಕ್ಯಾಮೆರಾ ಇದ್ದರೂ ಆ ಕೆಲಸ ಮಾಡುತ್ತೀರಾ? ಎಂದ. ಅದಕ್ಕೆ ನಾನು ನಾಚಿಕೆಯಾಗುತ್ತದೆ ಎಂದು ಹೇಳಿದೆ. ಮೊದಮೊದಲು ಆತ ತಮಾಷೆಗೆ ಹೇಳುತ್ತಿದ್ದಾನೆ ಎಂದು ನಕ್ಕಿದೆ. ನಾನು ಅಷ್ಟೆಲ್ಲಾ ನಾಚಿಕೆ ಇಲ್ಲದೆ ಸೆಕ್ಸ್ ಮಾಡುವ ಪೈಕಿ ಅಲ್ಲ ಎಂದು ಆತನಿಗೆ ತಿಳಿಸಿದೆ.
“ತದನಂತರ ನಿಮಗೆ ತುಂಡುಡುಗೆ ಧರಿಸಲು ಇಷ್ಟವೇ ಎಂದು ಕೇಳಿದ. ನಾನು ತೊಂದರೆ ಏನು ಇಲ್ಲ ಎಂದೆ. ಬಳಿಕ ನಿಮ್ಮ ಎದೆ ಭಾಗ ತುಂಬಾ ದೊಡ್ಡದಾಗಿದೆ ಅದು ನಿಜವಾದುದೆ ಅಥವಾ ಸರ್ಜರಿ ಮಾಡಿಸಿಕೊಂಡಿರಾ ಎಂದು ಕೇಳಿದ. ತಕ್ಷಣ ನನಗೆ ಕಿರಿಕಿರಿ ಎನಿಸಿ ಬಿಚ್ಚಿ ತೋರಿಸಲೇ ಎಂದು ಗಂಭೀರವಾಗಿ ಹೇಳಿದೆ. ನಿನ್ನೊಂದಿಗೆ ಅನಂತರ ಮಾತನಾಡುತ್ತೇನೆ ಎಂದಾಗ ವಾಸ್ತವ ಸ್ಥಿತಿ ಅರ್ಥವಾಯಿತು.
ನಾನು ನಕಾರಾತ್ಮಕವಾಗಿ ಮಾತನಾಡಿದ ಕಾರಣ 3 ನೇ ಅವತರಣಿಕೆಯ ಬಿಗ್ಬಾಸ್ಗೆ ಆಯ್ಕೆ ಮಾಡಲಿಲ್ಲ. ಇದರಿಂದ ನನಗೆ ಯಾವ ಬೇಜಾರು ಆಗಲಿಲ್ಲ. ಬಿಗ್ ಬಾಸ್ಗೆ ಹೋದವರು ತಮ್ಮ ಕೆರಿಯರ್ ಸೃಷ್ಟಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಇದೊಂತರ ‘ವೇಶ್ಯಾವಾಟಿಕೆಯ ಮನೆ’ಯ ರೀತಿ ಇದೆ ಎಂದು ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
Comments are closed.