ಕರಾವಳಿ

ಬಾರಕೂರು ಕಚ್ಚೂರು ಶ್ರೀ ಮಾಲ್ತೀದೇವಿ ಹಾಗೂ ಬಬ್ಬು ಸ್ವಾಮಿ ಮೂಲ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಪ್ರಥಮ ರಥೋತ್ಸವ : ಪೂರ್ವಭಾವಿ ಸಭೆ

Pinterest LinkedIn Tumblr

ಮಂಗಳೂರು : ಬಾರಕೂರು ಕಚ್ಚೂರು ಶ್ರೀ ಮಾಲ್ತೀದೇವಿ ಹಾಗೂ ಬಬ್ಬು ಸ್ವಾಮಿ ಮೂಲ ಕ್ಷೇತ್ರದಲ್ಲಿ 2020 ನೇ ಜನವರಿ ತಿಂಗಳಲ್ಲಿ ಜರುಗುವ ಬ್ರಹ್ಮಕಲಶೋತ್ಸವ ಹಾಗೂ ಪ್ರಥಮ ರಥೋತ್ಸವ ಪ್ರಯುಕ್ತ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ಆಯೋಜಿಸುವ ಕುರಿತು ಮಂಗಳೂರು ಕರ್ನಾಟಕ ಸರಕಾರಿ ನೌಕರರ ಸಭಾ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಉಡುಪಿ ಜಿ.ಪಂ ಅಧ್ಯಕ್ಷ ದಿನಕರ ಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಕಚ್ಚೂರು ದೇವಸ್ಥಾನದ ಅಧ್ಯಕ್ಷ ಗೋಕುಲ್‍ದಾಸ್ ಬಾರಕೂರು, ಶಿವಪ್ಪ ನಂತೂರು, ಪ್ರೇಮಾನಂದ ಬಾರ್ಕೂರು ಮತ್ತಿತರರು ಉಪಸ್ಥಿತರಿದ್ದರು.

Comments are closed.