ಕರ್ನಾಟಕ

ನಾನು ಮುಖ್ಯಮಂತ್ರಿಯಾಗಿದ್ದಾಗ 50,000 ರೈತರ ಸಾಲ ಮನ್ನಾ ಮಾಡಿದ್ದೆ, ಈಗ ಯಾರ ಸಾಲವೂ ಮನ್ನಾ ಆಗಲಿಲ್ಲ; ಸಿದ್ದರಾಮಯ್ಯ

Pinterest LinkedIn Tumblr


ಬಾಗಲಕೋಟೆ: ನಾನು ನಿಮ್ಮನ್ನು ಭೇಟಿ ಮಾಡಿರೋದು ವಿರೋಧ ಪಕ್ಷದವರು. ನಾವು ನಮ್ಮ ಕೆಲ್ಸ ಮಾಡಬೇಕಲ್ಲ ಎಂದು ಹಳ್ಳಿಯ ಜನರಿಗೆ ತಮ್ಮನ್ನು ವಿರೋಧ ಪಕ್ಷದ ನಾಯಕ ಎಂದು ಪರಿಚಯ ಮಾಡಿಕೊಂಡ ಘಟನೆ ಇಂದು ನಡೆಯಿತು.

ಮುಧೋಳದ ಮಳಲಿ ಗ್ರಾಮದಲ್ಲಿ ಪ್ರವಾಹ ಸಂತ್ರಸ್ತರೊಂದಿಗಿನ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾವೇ ಪರಿಹಾರ ಕೊಡಲು ಆಗದೇ ಇರಬಹುದು. ಆದರೆ ಪರಿಹಾರ ಕೊಡಿ ಅಂತ ನಿಮ್ಮ ಪರವಾಗಿ ಒತ್ತಾಯ ಹಾಕಬೇಕಲ್ಲ. ಕೊಡುವವರಿಗೆ ಜೋರಾಗಿ ಕೇಳುವವರು ಒಬ್ಬರು ಇರಬೇಕಲ್ಲ. ಹೌದೋ ಅಲ್ಲವೋ ಎಂದು ಜನರನ್ನು ಕೇಳಿದರು. ಹೀಗೆ ಹೇಳುವ ಮೂಲಕ ಸಿದ್ದರಾಮಯ್ಯ ಅವರು ಯಾರಿಗೆ ಏನನ್ನು ಹೇಳಬೇಕು ಎಂಬ ಸಂದೇಶವನ್ನು ರವಾನಿಸಿದ್ದರು.

ನಾನು ಸಿಎಂ ಆಗಿದ್ದಾಗ ಕಬ್ಬಿನ ಬೆಲೆ ಬಿದ್ದು ಹೋಗಿದ್ದಾಗ ಟನ್​ಗೆ 350ರೂ ಕೊಟ್ಟಿದ್ದೆ. ಯಾವುದೇ ಕಂಡಿಷನ್​ ಇಲ್ಲದೆ ಒಟ್ಟು 50 ಸಾವಿರ ರೈತರ ಸಾಲಮನ್ನಾ ಮಾಡಿದ್ದೆ. ಈಗ ಸಾಲಮನ್ನಾಗೆ ಕಂಡಿಷನ್​ ಹಾಕಿದರು. ಆದರೆ ಯಾವ ರೈತರ ಸಾಲ ಮನ್ನಾ ಆಗಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಯಡಿಯೂರಪ್ಪ ಅವರು ಈಗ ಸಿಎಂ ಆಗಿ ಬಂದಿದ್ದಾರೆ. ಅವರಿಗೆ ರಾಜ್ಯದಲ್ಲಾದ ಅನಾಹುತದ ಬಗ್ಗೆ ಮನವರಿಕೆಯಾಗಿದೆ ಅನ್ಕೋತಿನಿ. 2009ರಲ್ಲಿ ಪ್ರವಾಹ ಬಂದಾಗ ಯಡಿಯೂರಪ್ಪರೇ ಸಿಎಂ ಆಗಿದ್ರು. ಈಗಲೂ ಯಡಿಯೂರಪ್ಪನೇ ಸಿಎಂ ಆಗಿದ್ದಾರೆ. ನಾನು ಸಿಎಂ ಆಗಿದ್ದಾಗ ಪ್ರವಾಹ ಬರಲಿಲ್ಲ. ಪ್ರವಾಹ ಬರಬೇಕಂತ ನಾನು ಹೇಳೋಲ್ಲ. ಪ್ರವಾಹ ಬಂದರೆ ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ಪ್ರವಾಹ ಬರ್ಬಾರದು. ಯಾರಾದ್ರೂ ಮುಖ್ಯಮಂತ್ರಿ ಆಗಿರಲಿ ಪ್ರವಾಹ ಬರಬಾರದು ಎಂದು ಸಿದ್ದರಾಮಯ್ಯ ಹೇಳಿದರು.

Comments are closed.