ಈಗಾಗಲೇ ತೃಪ್ತರ ಖಾತೆ ಬೇಡಿಕೆ ಹಾಗೂ ಅನರ್ಹರ ಸಚಿವ ಸ್ಥಾನ ಮೀಸಲಿಡುವ ಷರತ್ತುಗಳಿಂಗ ಕಂಗಲಾಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಹೈಕಮಾಂಡ್ ಕೂಡ ಶಾಕ್ ನೀಡಿದ್ದು, ಪದೇ ಪದೇ ಸಮಸ್ಯೆ ಹೊತ್ತು ದೆಹಲಿಗೆ ಬರಬೇಡಿ ಎನ್ನುವ ಮೂಲಕ ಎಲ್ಲ ರಾಜ್ಯ ಸರ್ಕಾರಕ್ಕೆ ಎದುರಾಗಿರುವ ಎಲ್ಲ ಸಂಕಷ್ಟಕ್ಕೂ ನೀವೆ ಹೊಣೆ ಎಂದು ಬಿಎಸ್ವೈಗೆ ಪರೋಕ್ಷ ಟಾಂಗ್ ನೀಡಿದೆ.
ಹೌದು ಅನರ್ಹ ಶಾಸಕರು ಸಚಿವ ಸಂಪುಟದಲ್ಲಿ ಒಂದಷ್ಟು ಪ್ರಭಾವಿ ಖಾತೆಗಳನ್ನು ತಮಗಾಗಿ ಮೀಸಲಿರಿಸಬೇಕೆಂದು ಪಟ್ಟು ಹಿಡಿದಿದ್ದರೇ, ಇತ್ತ ಈಗಾಗಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಚಿವರು ತಮಗೆ ಇಂತಹುದ್ದೇ ಖಾತೆ ಬೇಕೆಂದು ಆಗ್ರಹಿಸಿದ್ದಾರೆ. ಅನರ್ಹರು ಮತ್ತು ಹಾಲಿ ಸಚಿವರ ನಡುವೆ ಸಿಲುಕಿಕೊಂಡಿರುವ ಸಿಎಂ ಬಿಎಸ್ವೈ ಖಾತೆ ಹಂಚಿಕೆ ಫೈನಲ್ ಮಾಡಿಸಿಕೊಂಡು ಬರಲು ಮತ್ತೆ ದೆಹಲಿಯ ಹೈಕಮಾಂಡ್ ಮೊರೆ ಹೋಗಿದ್ದರು. ಸಚಿವರ ಖಾತೆ ಹಂಚಿಕೆಯ ಪಟ್ಟಿಯೊಂದಿಗೆ ಹೈಕಮಾಂಡ್ ಅಂಗಳ ತಲುಪಿದ್ದ ಬಿಎಸ್ವೈಗೆ ಕೇಂದ್ರ ಗೃಹ ಸಚಿವ ಹಾಗೂ ಹೈಕಮಾಂಡ್ ನ ನಾಯಕಅಮಿತ್ ಸಖತ್ ವಾರ್ನಿಂಗ್ ನೀಡಿದ್ದು ಬಿಎಸ್ವೈಗೆ ಒಂದು ರೀತಿ ಮುಖಭಂಗವಾದಂತಾಗಿದೆ.
ನೀವು ಈ ರೀತಿ ಪದೇ ಪದೇ ಸಮಸ್ಯೆಗಳನ್ನು ಹೊತ್ತು ದೆಹಲಿಗೆ ಬರಬೇಡಿ. ರಾಜ್ಯ ಸಚಿವ ಸಂಪುಟದ ಖಾತೆ ಹಂಚಿಕೆ ಹಾಗೂ ಅನರ್ಹರ ವಿಚಾರವನ್ನು ನೀವೇ ನಿಭಾಯಿಸಿ. ನೀವು ಈ ರೀತಿ ಪದೇ ಪದೇ ಸಮಸ್ಯೆ ಹೊತ್ತು ಬರೋದರಿಂದ ನಮಗೆ ಕೆಟ್ಟ ಹೆಸರು ಬರುತ್ತದೆ.ಜನಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ಬಿಎಸ್ವೈ ಗೆ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗ್ತಿದೆ.
ಅಲ್ಲದೇ, ನೀವು ನನ್ನನ್ನು ಸಿಎಂ ಮಾಡಿ ಎಲ್ಲ ಸಮಸ್ಯೆ ಎದುರಿಸಿ ಸರ್ಕಾರ ನಡೆಸುತ್ತೇನೆ ಎಂದಿದ್ದೀರಿ. ಈಗ ಈ ರೀತಿ ಎಲ್ಲದಕ್ಕೂ ಹೈಕಮಾಂಡ್ ಮೇಲೆ ಭಾರ ಹೊರಿಸುವುದು ಸರಿಯಲ್ಲ. ಇದರ ಬದಲು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ ಎಂದು ಶಾ ಹೇಳಿದ್ದು ಇದನ್ನು ಕೇಳಿದ ಬಿಎಸ್ವೈ ಕಂಗಾಲಾಗಿದ್ದಾರೆ.
ಶಾ ಅವರ ಈ ಮಾತುಗಳಿಂದ ಬಿಎಸ್ವೈ ಸಂಕಷ್ಟಕ್ಕೆ ಸಿಲುಕಿದ್ದು ಅನರ್ಹರು,ನೂತನ ಸಚಿವರು ಹಾಗೂ ಹೈಕಮಾಂಡ್ ನಡುವೆ ಸಿಲುಕಿ ಪರದಾಡುವಂತಾಗಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟ ಎಂಬಂತ ಸ್ಥಿತಿಗೆ ಬಂದು ತಲುಪಿದ್ದಾರೆ. ಸಿಎಂ ಆಗಿದ್ದೇ ತಪ್ಪಾಯ್ತು ಎಂಬಷ್ಟರ ಮಟ್ಟಿಗೆ ಬಿಎಸ್ವೈ ಗೆ ಸಂಕಷ್ಟಗಳು ಸುತ್ತಿಕೊಳ್ಳುತ್ತಿದ್ದು ಹೇಗೆ ಈ ಪರಿಸ್ಥಿತಿ ನಿಭಾಯಿಸಿ ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂಬುದೇ ಸಧ್ಯದ ಕುತೂಹಲ.
ಈಗಾಗಲೇ ತೃಪ್ತರ ಖಾತೆ ಬೇಡಿಕೆ ಹಾಗೂ ಅನರ್ಹರ ಸಚಿವ ಸ್ಥಾನ ಮೀಸಲಿಡುವ ಷರತ್ತುಗಳಿಂದ ಕಂಗಲಾಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಹೈಕಮಾಂಡ್ ಕೂಡ ಶಾಕ್ ನೀಡಿದ್ದು, ಪದೇ ಪದೇ ಸಮಸ್ಯೆ ಹೊತ್ತು ದೆಹಲಿಗೆ ಬರಬೇಡಿ ಎನ್ನುವ ಮೂಲಕ ಎಲ್ಲ ರಾಜ್ಯ ಸರ್ಕಾರಕ್ಕೆ ಎದುರಾಗಿರುವ ಎಲ್ಲ ಸಂಕಷ್ಟಕ್ಕೂ ನೀವೆ ಹೊಣೆ ಎಂದು ಬಿಎಸ್ವೈಗೆ ಪರೋಕ್ಷ ಟಾಂಗ್ ನೀಡಿದೆ.
ಹೌದು ಅನರ್ಹ ಶಾಸಕರು ಸಚಿವ ಸಂಪುಟದಲ್ಲಿ ಒಂದಷ್ಟು ಪ್ರಭಾವಿ ಖಾತೆಗಳನ್ನು ತಮಗಾಗಿ ಮೀಸಲಿರಿಸಬೇಕೆಂದು ಪಟ್ಟು ಹಿಡಿದಿದ್ದರೇ, ಇತ್ತ ಈಗಾಗಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಚಿವರು ತಮಗೆ ಇಂತಹುದ್ದೇ ಖಾತೆ ಬೇಕೆಂದು ಆಗ್ರಹಿಸಿದ್ದಾರೆ. ಅನರ್ಹರು ಮತ್ತು ಹಾಲಿ ಸಚಿವರ ನಡುವೆ ಸಿಲುಕಿಕೊಂಡಿರುವ ಸಿಎಂ ಬಿಎಸ್ವೈ ಖಾತೆ ಹಂಚಿಕೆ ಫೈನಲ್ ಮಾಡಿಸಿಕೊಂಡು ಬರಲು ಮತ್ತೆ ದೆಹಲಿಯ ಹೈಕಮಾಂಡ್ ಮೊರೆ ಹೋಗಿದ್ದರು. ಸಚಿವರ ಖಾತೆ ಹಂಚಿಕೆಯ ಪಟ್ಟಿಯೊಂದಿಗೆ ಹೈಕಮಾಂಡ್ ಅಂಗಳ ತಲುಪಿದ್ದ ಬಿಎಸ್ವೈಗೆ ಕೇಂದ್ರ ಗೃಹ ಸಚಿವ ಹಾಗೂ ಹೈಕಮಾಂಡ್ ನ ನಾಯಕಅಮಿತ್ ಸಖತ್ ವಾರ್ನಿಂಗ್ ನೀಡಿದ್ದು ಬಿಎಸ್ವೈಗೆ ಒಂದು ರೀತಿ ಮುಖಭಂಗವಾದಂತಾಗಿದೆ.
ನೀವು ಈ ರೀತಿ ಪದೇ ಪದೇ ಸಮಸ್ಯೆಗಳನ್ನು ಹೊತ್ತು ದೆಹಲಿಗೆ ಬರಬೇಡಿ. ರಾಜ್ಯ ಸಚಿವ ಸಂಪುಟದ ಖಾತೆ ಹಂಚಿಕೆ ಹಾಗೂ ಅನರ್ಹರ ವಿಚಾರವನ್ನು ನೀವೇ ನಿಭಾಯಿಸಿ. ನೀವು ಈ ರೀತಿ ಪದೇ ಪದೇ ಸಮಸ್ಯೆ ಹೊತ್ತು ಬರೋದರಿಂದ ನಮಗೆ ಕೆಟ್ಟ ಹೆಸರು ಬರುತ್ತದೆ.ಜನಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ಬಿಎಸ್ವೈ ಗೆ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗ್ತಿದೆ.
ಅಲ್ಲದೇ, ನೀವು ನನ್ನನ್ನು ಸಿಎಂ ಮಾಡಿ ಎಲ್ಲ ಸಮಸ್ಯೆ ಎದುರಿಸಿ ಸರ್ಕಾರ ನಡೆಸುತ್ತೇನೆ ಎಂದಿದ್ದೀರಿ. ಈಗ ಈ ರೀತಿ ಎಲ್ಲದಕ್ಕೂ ಹೈಕಮಾಂಡ್ ಮೇಲೆ ಭಾರ ಹೊರಿಸುವುದು ಸರಿಯಲ್ಲ. ಇದರ ಬದಲು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ ಎಂದು ಶಾ ಹೇಳಿದ್ದು ಇದನ್ನು ಕೇಳಿದ ಬಿಎಸ್ವೈ ಕಂಗಾಲಾಗಿದ್ದಾರೆ.
ಶಾ ಅವರ ಈ ಮಾತುಗಳಿಂದ ಬಿಎಸ್ವೈ ಸಂಕಷ್ಟಕ್ಕೆ ಸಿಲುಕಿದ್ದು ಅನರ್ಹರು,ನೂತನ ಸಚಿವರು ಹಾಗೂ ಹೈಕಮಾಂಡ್ ನಡುವೆ ಸಿಲುಕಿ ಪರದಾಡುವಂತಾಗಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟ ಎಂಬಂತ ಸ್ಥಿತಿಗೆ ಬಂದು ತಲುಪಿದ್ದಾರೆ. ಸಿಎಂ ಆಗಿದ್ದೇ ತಪ್ಪಾಯ್ತು ಎಂಬಷ್ಟರ ಮಟ್ಟಿಗೆ ಬಿಎಸ್ವೈ ಗೆ ಸಂಕಷ್ಟಗಳು ಸುತ್ತಿಕೊಳ್ಳುತ್ತಿದ್ದು ಹೇಗೆ ಈ ಪರಿಸ್ಥಿತಿ ನಿಭಾಯಿಸಿ ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂಬುದೇ ಸಧ್ಯದ ಕುತೂಹಲ.
Comments are closed.