ಮನೋರಂಜನೆ

ಮಲೈಕಾ ಅರೋರಾ ಜೊತೆ ಫ್ಲರ್ಟ್ ಮಾಡಿದ್ದಕ್ಕೆ ಅರ್ಜುನ್ ಕಪೂರ್ ಪ್ರತಿಕ್ರಿಯೆ!

Pinterest LinkedIn Tumblr


ಕ್ಯಾನ್ಬೆರಾ: ಬಾಲಿವುಡ್ ನಟಿ ಮಲೈಕಾ ಅರೋರಾ ಜೊತೆ ಕಿರುತೆರೆ ನಟ ಕರಣ್ ಟ್ಯಾಕರ್ ಫ್ಲರ್ಟ್ ಮಾಡಿದ್ದಕ್ಕೆ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೆಲ್ಬೋರ್ನ್ ನ ಭಾರತೀಯ ಚಲನಚಿತ್ರೋತ್ಸವ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಭಾಗವಹಿಸಿದ್ದರು. ಮೆಲ್ಭೋರ್ನ್‍ನ ಸೆಂಟ್ ಕಿಲ್ಡಾದಲ್ಲಿ ಇರುವ ಪಲೈಸ್ ಥಿಯೇಟರ್ ನಲ್ಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಕಿರುತೆರೆ ನಟ ಕರಣ್ ಟ್ಯಾಕರ್, ಮಲೈಕಾ ಜೊತೆ ನಡೆಸಿದ ಸಂಭಾಷಣೆ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಕರಣ್ ನಟಿ ಮಲೈಕಾ ಅವರಿಗೆ “20 ಗಂಟೆ ವಿಮಾನದಲ್ಲಿ ಸಂಚಾರ ಮಾಡಿದ್ದರು ಸುಂದರವಾಗಿ ಕಾಣಿಸುತ್ತಿದ್ದೀರಾ” ಎಂದು ಹೇಳಿದ್ದಾರೆ. ಈ ವೇಳೆ ಪಕ್ಕದಲ್ಲಿಯೇ ಕುಳಿತಿದ್ದ ಅರ್ಜುನ್, “ಹಿಂದೆ ಬೇರೆ ಮಹಿಳೆಯರು ಕುಳಿತಿದ್ದಾರೆ. ಅವರ ಜೊತೆ ಫ್ಲರ್ಟ್ ಮಾಡು ಹೋಗು’ ಎಂದು ನಗುತ್ತಾ ಕರಣ್‍ಗೆ ಪ್ರತಿಕ್ರಿಯಿಸಿದ್ದಾರೆ. ಅರ್ಜುನ್ ಮಾತು ಕೇಳಿ ಅಲ್ಲಿದ್ದ ಬೇರೆ ಕಲಾವಿದರು ಜೋರಾಗಿ ನಗಲು ಶುರು ಮಾಡಿದ್ದರು.

ಮಲೈಕಾ ಅರೋರಾ ಅವರು 1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಜೋಡಿಗೆ ಒಂದು ಮಗುವಿದೆ. ಆದರೆ 2017ರಲ್ಲಿ ಮಲೈಕಾ ಹಾಗೂ ಅರ್ಬಾಜ್ ಖಾನ್ ವಿಚ್ಛೇದನ ಪಡೆದು, ಬೇರೆಯಾಗಿದ್ದರು. ಈಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರ ಜೊತೆಗೆ ಮಲೈಕಾ ಪ್ರೇಮ ಬಂಧನದಲ್ಲಿ ಬಂಧಿಯಾಗಿದ್ದಾರೆ.

Comments are closed.