
ಬೆಂಗಳೂರು: ಯಡಿಯೂರಪ್ಪ ಎಲ್ಲಿದ್ದೀಯಪ್ಪ, ಬೆಳಗಾವಿ, ಬಾಗಲಕೋಟೆಯಲ್ಲಿ ಪ್ರವಾಹ ಬರ್ತಿದೆ ಬಂದು ಜನರ ಸಮಸ್ಯೆ ಪರಿಹರಿಸಪ್ಪ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ಅಧಿಕಾರ ಬೇಕಿಲ್ಲ, ನನಗೆ ಬೇಕಿರುವುದು ನಿಮ್ಮ ಪ್ರೀತಿ ಎಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ಹೇಳಿದರು.
ನಂತರ ಮುಖ್ಯಮಂತ್ರಿ ಯಡಿಯೂರಪ್ಪರ ಮೇಲೆ ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಸಾನ್ ಸಮ್ಮಾನ್ ಯೋಜನೆಗೆ ಬಿಎಸ್ ವೈ ಮುಂದಾಗಿದ್ದಾರೆ. ಕೇಂದ್ರದ 6 ಸಾವಿರಕ್ಕೆ 4 ಸಾವಿರ ಸೇರಿಸಿದ್ದಾರೆ. ಆ ಸೇರಿಸಿರುವ ಹಣ ಎಲ್ಲಿಂದ ಬರುತ್ತದೆ. ನಾವು ರೈತರ ಸಾಲಮನ್ನಾಗೆ ಇಟ್ಟಿದ್ದ ಉಳಿಕೆ ಹಣವನ್ನು ಕೊಡೋಕೆ ಯಡಿಯೂರಪ್ಪನವರೇ ಬೇಕಾ ಎಂದು ಆಕ್ರೋಶ ಹೊರಹಾಕಿದರು.
ಆಗಸ್ಟ್, ಸೆಪ್ಟಂಬರ್ ನಲ್ಲಿ ದಲಿತ, ಎಸ್ಟಿ ,ಒಬಿಸಿ, ಮುಸ್ಲಿಂ ಸಮಾವೇಶಕ್ಕೆ ಪ್ರತ್ಯೇಕವಾಗಿ ರೈತರ ಸಮಾವೇಶ ಆಯೋಜನೆ, ಆ ಸಮಾವೇಶಕ್ಕೆ ಶೀಘ್ರದಲ್ಲೇ ದಿನಾಂಕ ನಿಗದಿ ಮಾಡುತ್ತೇವೆ ಹಾಗೂ ಪದಾಧಿಕಾರಿಗಳ ಬದಲಾವಣೆಯನ್ನೂ ಮಾಡುತ್ತೇವೆ ಎಂದರು, ಪಕ್ಷ ಬಿಟ್ಟು ಹೋಗಿರುವ ಮೂವರ ಬಗ್ಗೆಯೂ ಚಕಾರವೆತ್ತಲ್ಲ,ಆ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದು ಇದೆ ವೇಳೆ ಕುಮಾರಸ್ವಾಮಿ ತಿಳಿಸಿದರು.
Comments are closed.