ನವದೆಹಲಿ: ಇದು ನಮ್ಮ ಆಂತರಿಕ ವಿಷಯ ಎಂದು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಚೀನಾಗೆ ಮಂಗಳವಾರ ಭಾರತ ತಿರುಗೇಟು ನೀಡಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ‘ಭಾರತ ಬೇರೆ ಯಾವುದೇ ರಾಷ್ಟ್ರಗಳ ಆಂತರಿಕ ವಿಷಯದ ಕುರಿತು ಮಾತನಾಡುವುದಿಲ್ಲ, ಇದೇ ವಿಧದಲ್ಲಿ ಇತರ ರಾಷ್ಟ್ರಗಳೂ ಭಾರತದ ಆಂತರಿಕ ವಿಷಯದ ಕುರಿತು ಮಾತನಾಡಬಾರದು ಎಂದು ಬಯಸುತ್ತದೆ ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಿದೆ.
ಭಾರತವು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವುದನ್ನು ಚೀನಾ ಆಕ್ಷೇಪಿಸಿದ್ದು ಈ ಕ್ರಮವು ತನ್ನ “ಪ್ರಾದೇಶಿಕ ಸಾರ್ವಭೌಮತ್ವ” ಕ್ಕೆ ವಿರುದ್ಧವಾಗಿದೆ ಮತ್ತು ಭಾರತವು “ಎಚ್ಚರಿಕೆ ವಹಿಸುವಂತೆ” ಕೇಳಿದೆ. ಅಲ್ಲದೆ ಭಾರತವು ಪ್ರಸ್ತುತ ಗಡಿ ಸಮಸ್ಯೆಯನ್ನು ಇನ್ನಷ್ಟು “ಸಂಕೀರ್ಣಗೊಳಿಸಬಾರದು” ಎಂದು ಹೇಳಿದೆ.
Comments are closed.