ಮನೋರಂಜನೆ

ಬೀದಿ ನಾಯಿಗಾಗಿ ಒಂದಾದ ಬಾಲಿವುಡ್​ ನಟಿಯರು!

Pinterest LinkedIn Tumblr


ಮುಂಬೈ ವರ್ಲಿಯಲ್ಲಿ ಮೂಕ ಪ್ರಾಣಿ ನಾಯಿ ಮೇಲೆ ನಡೆದ ಅಮಾನವೀಯ ಮಾರಣಾಂತಿಕ ಹಲ್ಲೆ ಕೃತ್ಯವನ್ನು ಖಂಡಿಸಿ ಬಾಲಿವುಡ್ ನ ಖ್ಯಾತ ನಟಿಯರಿಬ್ಬರು ಒಂದಾಗಿದ್ದು, ನಾಯಿಗೆ ನ್ಯಾಯಕೊಡಿಸಿಯೇ ಸಿದ್ಧ ಅಂತ ಪ್ರಯತ್ನ ಆರಂಭಿಸಿ ಸುದ್ದಿಯಾಗಿದ್ದಾರೆ.

ಹೌದು ಮುಂಬೈನಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಬೀದಿ ನಾಯಿಯೊಂದು ಎಲ್ಲಿ ಹೋಗಬೇಕೆಂದು ದಿಕ್ಕು ತೋಚದೆ ಆಶ್ರಯಕ್ಕಾಗಿ ಜುಲೈ 24 ರಂದು ಟರ್ಫ್ ವ್ಯೂ ಕಟ್ಟಡದ ಫ್ಲ್ಯಾಟ್ ಒಳಗೆ ಬಂದಿದೆ. ಇದೇ ಕಾರಣಕ್ಕೆ ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತೊಮ್ಮೆ ನಾಯಿಯು ಕಟ್ಟಡದ ಒಳಗೇ ಬಾರದು ಎಂಬಂತೆ ನಾಯಿಯ ತಲೆ ಮತ್ತು ಹೊಟ್ಟೆಗೆ ಹಲ್ಲೆ ನಡೆಸಿದ್ದಾರೆ. ಇನ್ನೂ ಗಾಯಗೊಂಡಿರುವ ನಾಯಿ ಈಗ ಕೋಮಾ ಸ್ಥಿತಿಗೆ ತಲುಪಿದೆ. ನಾಯಿಯನ್ನು ಥಳಿಸುತ್ತಿರುವ ದೃಶ್ಯ ಫ್ಲ್ಯಾಟ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನೂ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದಂತೆ ಜುಲೈ 27 ರಂದು ಮುಂಬೈ ಪ್ರಾಣಿ ದಯಾ ಸಂಘಟನೆಯ ಸದಸ್ಯರು ನಾಯಿಯನ್ನು ಥಳಿಸಿದ ಇಬ್ಬರು ವ್ಯಕ್ತಿಗಳ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಸದ್ಯ ಇದೇ ವಿಚಾರವಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದು ಈ ಅಮಾನವೀಯ ಕೃತ್ಯವನ್ನು ನಮಗೆ ನಂಬಲಸಾಧ್ಯ. ಈಗ ಈ ನಾಯಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ. ಎಂದು ಕ್ಯಾಪ್ಷನ್ ಬರೆದುಕೊಳ್ಳುವ ಮೂಲಕ ಮುಗ್ದ ಪ್ರಾಣಿ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ನಟಿ ಅನುಷ್ಕಾ ಶರ್ಮಾ ಜೊತೆಗೆ ಬಾಲಿವುಡ್ ಎವರ್ ಗ್ರೀನ್ ನಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಸಹ ಈ ಅಮಾನವೀಯ ಘಟನೆಯನ್ನು ಖಂಡಿಸುವ ಮೂಲಕ ಅನುಷ್ಕಾಗೆ ಸಾಥ್ ನೀಡಿದ್ದಾರೆ. ಅಲ್ಲದೆ ಈ ಕೃತ್ಯಕ್ಕೆ ಬಾಲಿವುಡ್ ನ ಹಲವಾರು ಗಣ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Comments are closed.