Uncategorized

ರಹಸ್ಯ ಮದುವೆ​ ಗಾಸಿಪ್​ಗೆ ರಾಕಿ ಸಾವಂತ್ ನೀಡಿದ ರಿಯಾಕ್ಷನ್​ ಏನುಗೊತ್ತಾ?!

Pinterest LinkedIn Tumblr

ಬಾಲಿವುಡ್ ನ ಹಾಟ್ ಬೆಡಗಿ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ನಟಿ ರಾಕಿ ಸಾವಂತ್ ವಿಚಾರವಾಗಿ ಹೊಸ ಗಾಸಿಪ್ ಬಾಲಿವುಡ್​​ನಲ್ಲಿ ಕೇಳಿಬಂದಿದೆ. ಹೌದು ಹಾಟ್ ಬೆಡಗಿ ರಾಕಿಸಾವಂತ್​ ಗೌಪ್ಯವಾಗಿ ವಿವಾಹ ಬಂಧನಕ್ಕೆ ಕಾಲಿರಿಸಿದ್ದಾರಂತೆ. ಆದರೆ ಈ ವಿಚಾರ ತಿಳಿದ ನಟಿ ರಾಕಿ ಸಾವಂತ್ ಕೆಂಡಮಂಡಲವಾಗಿದ್ದು, ನಾನ್ಯಾಕೆ ಗೌಪ್ಯವಾಗಿ ವಿವಾಹವಾಗಲಿ ಅಂತ ಕಿಡಿಕಾರಿದ್ದಾರೆ.

ಹೌದು ಜುಲೈ 28ರಂದು ನಟಿ ರಾಖಿ ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್‍ನಲ್ಲಿ ಎನ್‌ಆರ್‌ಐ ಯುವಕನ ಜೊತೆ ಗೌಪ್ಯವಾಗಿ ಸಪ್ತಪದಿ ತುಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮದುವೆಯಲ್ಲಿ ಕೇವಲ 4-5 ಮಂದಿ ಬಿಟ್ಟು ಬೇರೆ ಯಾರಿಗೂ ಹಾಜರಾಗಿರಲಿಲ್ಲ, ಅದಲ್ಲದೆ ಈ ವಿಷಯ ಯಾರಿಗೂ ಗೊತ್ತಾಗಬಾರದೆಂದು ವರ-ವಧು ಹೋಟಿಲಿನ ಹಾಲ್‍ನಲ್ಲಿ ಮದುವೆಯಾಗುವ ಬದಲು ರೂಮಿನಲ್ಲಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇನ್ನೂ ಈ ವಿಚಾರವಾಗಿ ರಾಕಿ ಸಾವಂತ್ ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸರಿಯಾಗಿ ಪ್ರತಿಕ್ರಿಯಿಸದೇ ತೀವ್ರ ಕೆಂಡಮಂಡಲವಾಗಿ ನಾನು ಮದುವೆಯಾಗಿಲ್ಲ. ಕೆಲವು ಓಟಿಟಿ ಪ್ಲಾಟ್‍ಫಾರ್ಮ್ ಗೆ ನಾನು ಬ್ರೈಡಲ್ ಲುಕ್‍ನಲ್ಲಿ ಫೋಟೋಶೂಟ್ ಮಾಡಿಸಿದೆ. ಯಾವುದೇ ನಟಿ ಮೆಹೆಂದಿ ಹಾಕಿದ ತಕ್ಷಣ, ಒಂದು ಉಂಗುರ ಧರಿಸಿದ ಅವರಿಗೆ ಮದುವೆ ಆಗಿದೆ. ಆಸ್ಪತ್ರೆಯಿಂದ ಹೊರ ಬಂದರೆ ಅರ್ಬಾಷನ್ ಮಾಡಿಸಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗುತ್ತದೆ.

ಇಬ್ಬರ ಜೊತೆ ತಿರುಗಾಡಿದ ತಕ್ಷಣ ಗೌಪ್ಯವಾಗಿ ಅವರ ಜೊತೆ ಮದುವೆ ಆಗಿದ್ದಾರೆ ಎನ್ನಲಾಗುತ್ತದೆ. ಏನು ಇದೆಲ್ಲಾ?. ನಟಿಯರಿಗೆ ಬದುಕಲು ಬಿಡುವುದಿಲ್ಲವೇ? ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ನಾವು ಹಣೆಯಲ್ಲಿ ಸಿಂಧೂರ ಇಟ್ಟುಕೊಂಡು ಶೂಟಿಂಗ್ ಹಾಗೂ ಸಿರಿಯಲ್ ಕೂಡ ಮಾಡುತ್ತೇವೆ ಎಂದು ಖಡಕ್ ಆಗಿ ರಾಖಿ ಸ್ಪಷ್ಟನೆ ನೀಡಿದ್ದಾರೆ.

Comments are closed.