ಕರ್ನಾಟಕ

ಇಂದಿರಾ ಕ್ಯಾಂಟೀನ್​ ಗೆ ಅನ್ನಪೂರ್ಣ​ ಹೆಸರಿಡಲು ಬಿಜೆಪಿ ಚಿಂತನೆ’ – ಸಿಟಿ ರವಿ

Pinterest LinkedIn Tumblr


ಬೆಂಗಳೂರು: ಸ್ಪೀಕರ್ ನಿರ್ಧಾರ ಅನುಮಾನಾಸ್ಪದ, ಪೂರ್ವಾಗ್ರಹ ಪೀಡಿತ ಯಾವುದೋ ಒತ್ತಡಕ್ಕೆ ಮಣಿದು ಸ್ಪೀಕರ್ ತೀರ್ಪು ಕೊಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಅವರು ಹೇಳಿದರು.

ನಗರದ ಚಾನ್ಸರಿ ಪೆವಿಲಿಯನ್ ಹೊಟೇಲ್ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹಳೇ ಋಣ ತೀರಿಸಲೇನೋ ಈ ತೀರ್ಪನ್ನು ರಮೇಶ್ ಕುಮಾರ್ ಅವರು ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್​​ಗೆ ಈ ಪ್ರಕರಣ ಹೋಗಬಹುದು ಕೋರ್ಟ್​​ನಲ್ಲಿ ಅಂತಿಮ ತೀರ್ಮಾನ ಬರಲಿದೆ ಎಂದು ಅವರು ತಿಳಿಸಿದರು.

ಇನ್ನು ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇಂದಿರಾ ಕ್ಯಾಂಟೀನ್​ಗಳಿಗೆ ಅನ್ನಪೂರ್ಣ ಕ್ಯಾಂಟೀನ್​​ಗಳೆಂದು ಹೆಸರಿಡಲು ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಅವರು ನುಡಿದರು.

ಸದ್ಯ ಮೈತ್ರಿ ಅವಧಿಯಲ್ಲಿ ಮಾಡಿರುವ ಕೆಲವು ರಾಜಕೀಯ ತೀರ್ಮಾನಗಳ ಸಂಬಂಧ ನಾವು ತೀರ್ಮಾನ ತಗೋತೀವಿ. ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಿ ಕೆಲವೊಂದು ವಿಷಯಗಳ ಬಗ್ಗೆ ನಿರ್ಧಾರ ತಗೋತೀವಿ. ಇವತ್ತಿಗೇ ಎಲ್ಲವೂ ಮುಗಿಲಿಲ್ಲ ಎಂದು ಬಿಜೆಪಿ ಶಾಸಕ ಸಿಟಿ ರವಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Comments are closed.