
ಬೆಂಗಳೂರು:14 ತಿಂಗಳ ಸಮ್ಮಿಶ್ರ ಸರ್ಕಾರ ಉರುಳಿಸಿ ದೇಶದ ಗಮನ ಸೆಳೆದಿದ್ದ ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಬಿಗ್ ಶಾಕ್ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಬಿದ್ದ ಎರಡೇ ದಿನದಲ್ಲಿ ಮೂವರು ಶಾಸಕರ ಅನರ್ಹಗೊಳಿಸಿ ಆದೇಶಿಸಿದ್ದಾರೆ. ಇದರಿಂದ ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರ ಪಾಳಯದಲ್ಲಿ ಆತಂಕ ಮನೆ ಮಾಡಿದೆ.
ಅನರ್ಹಗೊಂಡವರು ಇವರು!
ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ, ಇವರ ಆಪ್ತ ಅಥಣಿಯ ಮಹೇಶ್ ಕುಮಟಳ್ಳಿ ಅನರ್ಹಗೊಂಡಿದ್ದಾರೆ. ಹಾಗೆಯೇ ಇತ್ತೀಚೆಗೆ ಕಾಂಗ್ರೆಸ್ ಜೊತೆ ಕೆಪಿಜೆಪಿ ವಿಲೀನಗೊಳಿಸಿ ಸಚಿವರಾಗಿದ್ದ ರಾಣೇಬೆನ್ನೂರಿನ ಆರ್.ಶಂಕರ್ ಅನರ್ಹಗೊಂಡಿದ್ದಾರೆ.
3 ವರ್ಷ 10 ತಿಂಗಳು ಬ್ಯಾನ್
ಅನರ್ಹಗೊಂಡಿರುವ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್.ಶಂಕರ್ 3 ವರ್ಷ 10 ತಿಂಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಪ್ರಸ್ತುತ 15ನೇ ವಿಧಾನಸಭೆಯ ಅವಧಿ ಇನ್ನೂ 3 ವರ್ಷ 10 ತಿಂಗಳಿದ್ದು, ಅಲ್ಲಿಯವರೆಗೆ ಚುನಾವಣೆ ನಿಲ್ಲುವಂತಿಲ್ಲ. ಇದರಿಂದ ಈ ಮೂವರ ಭವಿಷ್ಯ ರಾಜಕೀಯವಾಗಿ ಮೂಲೆಗುಂಪಾಗುವ ಸಾಧ್ಯತೆ ಇದೆ.
ಇದರಿಂದ ಸಮ್ಮಿಶ್ರ ಸರ್ಕಾರದಲ್ಲಿನ ಇಡೀ ಬಂಡಾಯದ ಕೇಂದ್ರಬಿಂದುವಾದ ರಮೇಶ್ ಜಾರಕಿಹೊಳಿ ಅವರ ಎಲ್ಲಾ ಕನಸು ನುಚ್ಚುನೂರಾಗಿವೆ. ಹಾಗೆಯೇ ಅವರ ಆಪ್ತ ಮಹೇಶ್ ಕುಮಟಳ್ಳಿ ಕೂಡ ಮೂಲೆಗೆ ಸರಿಯುವಂತಾಗಿದೆ. ಬಿಜೆಪಿ ಸರ್ಕಾರ ರಚನೆಯಾದರೂ ಈ ಮೂವರಿಗೆ ಯಾವುದೇ ಸ್ಥಾನಮಾನ ಸಿಗುವುದಿಲ್ಲ.
ಶೀಘ್ರದಲ್ಲೇ ಉಳಿದವರ ಭವಿಷ್ಯ ನಿರ್ಧಾರ
ಮೂವರು ಅನರ್ಹತೆಯಿಂದಾಗಿ ಮುಂಬೈನಲ್ಲಿರುವ ಅತೃಪ್ತರ ಪಾಳಯದಲ್ಲಿ ಆತಂಕ ನೆಲೆಸಿದೆ. ಉಳಿದವರ ಭವಿಷ್ಯವನ್ನು ಅತೀ ಶೀಘ್ರದಲ್ಲೇ ನಿರ್ಧರಿಸೋದಾಗಿ ಸ್ಪೀಕರ್ ಹೇಳಿದ್ದಾರೆ. ಉಳಿದ ಶಾಸಕರ ನಡವಳಿಕೆ ನೋಡುತ್ತಿದ್ದೇನೆ. ಬೇರೆ ಬೇರೆ ರಾಜ್ಯಗಳ ತೀರ್ಪುಗಳನ್ನು ಅಧ್ಯಯನ ಮಾಡುತ್ತಿದ್ದಾರೆ.
ಇನ್ನುಳಿದ ಶಾಸಕರ ನಡವಳಿಕೆ ನೋಡಿದ್ದೇನೆ. ಅನರ್ಹತೆ ಮತ್ತು ರಾಜೀನಾಮೆ ದೂರು ಅರ್ಜಿ ಇದೆ. ಇನ್ನು ಸ್ವಲ್ಪ ದಿನಗಳಲ್ಲಿ ಸ್ಪಷ್ಟ ಉತ್ತರ ನೀಡುತ್ತೇನೆ. ಇದರಿಂದ ಉಳಿದವರ ತಳಮಳ ಶುರುವಾಗಿದೆ.
Comments are closed.