
ಪ್ರತಿಯೊಬ್ಬ ಮನುಷ್ಯನು ತಾನು ಇಷ್ಟ ಪಡುವ ವ್ಯಕ್ತಿ ಸಾವಿಗೀಡಾಗಿ ದೂರವಾದಾಗ ಬಹಳ ದುಃಖ ಪಡುತ್ತಾರೆ. ಅವರ ಮೇಲಿನ ಪ್ರೀತಿ ದೂರವಾದಗ ಇನ್ನೂ ಹೆಚ್ಚಾಗುತ್ತದೆ. ಅಷ್ಟಲ್ಲದೆ ಅವರನ್ನು ದೂರ ಮಾಡಿದ ಯಾವುದೇ ವ್ಯಕ್ತಿಯಾಗಲಿ ವಸ್ತುವನ್ನಾಗಲಿ ಕಂಡರೆ ಯಾರಿಗೂ ಇಷ್ಟವಾಗುವುದಿಲ್ಲ ಹಾಗೂ ಮನಸ್ಸಿನ ಸಣ್ಣದೊಂದು ಮೂಲೆಯಲ್ಲಿ ದ್ವೇಷ ಉಂಟಾಗಿ ದ್ವೇಷಿಸಲು ಆರಂಭಿಸುತ್ತಾರೆ. ಇದು ಮನುಷ್ಯನ ಸಹಜ ಗುಣ.
ಆದರೆ ಇಲ್ಲೊಬ್ಬ ಮಹಿಳೆ ಇದಕ್ಕೆ ತದ್ವಿರುದ್ಧವಾಗಿ ವರ್ತಿಸಿದ್ದಾರೆ. ಅಷ್ಟಕ್ಕೂ ನಾವು ಹೇಳುತ್ತಿರುವುದಾದರೂ ಏನು ಎಂದು ಯೋಚಿಸುತ್ತಿದ್ದೀರಾ ಹಾಗಾದರೆ ಈ ಕೆಳಗಿನ ಸ್ಟೋರಿ ಓದಿ.
ಹೌದು ಪತಿಯ ಸಾವಿಗೆ ಕಾರಣವಾದ ಯುದ್ಧ ವಿಮಾನವನ್ನೇ ತನ್ನ ವೃತ್ತಿಯನ್ನಾಗಿ ಸ್ವೀಕರಿಸಿ ಪತಿಯನ್ನು ಬಲಿ ಪಡೆದ ವಿಮಾನವನ್ನೇ ತಾನೂ ಓಡಿಸುವ ಮೂಲಕ ಆತನನ್ನು ನಿತ್ಯ ನೆನಯುವ ದಿಟ್ಟ ನಿರ್ಧಾರದ ವಿಭಿನ್ನ ಕತೆ ಇದು.
ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮಿರಾಜ್ 2000 ಯುದ್ಧ ವಿಮಾನ ಪರೀಕ್ಷಾರ್ಥ ಹಾರಾಟ ಸಂದರ್ಭದಲ್ಲಿ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಮೃತಪಟ್ಟಿದ್ದರು. ಇದೀಗಾ ಅವರ ಪತ್ನಿ ಗರೀಮಾ ಅಬ್ರೋಲ್ ವಾಯುಸೇನೆ ಸೇರಿದ್ದಾರೆ.
ವಾರಾಣಸಿಯಲ್ಲಿ ನಡೆದ ಸೇವಾ ಆಯ್ಕೆ ಮಂಡಳಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತೆಲಂಗಾಣದಲ್ಲಿರುವ ಭಾರತೀಯ ವಾಯುಪಡೆ ಅಕಾಡೆಮಿ ಸೇರ್ಪಡೆಯಾಗಲಿದ್ದಾರೆ.
ತಾವು ಇಷ್ಟ ಪಡುವ ವ್ಯಕ್ತಿಯನ್ನು ದೂರ ಮಾಡಿದ ಯಾವುದೇ ವಸ್ತುವನ್ನು ದ್ವೇಷಿಸುವ ಈ ಕಾಲದಲ್ಲಿ ತನ್ನ ಪತಿಯನ್ನು ಬಲಿ ಪಡೆದ ವಾಯುಸೇನೆಗೆ ಸೇರಲು ನಿರ್ಧರಿಸಿ ತನ್ನ ಪತಿಯನ್ನು ಅದರಲ್ಲಿಯೇ ನೆನೆಯುವ ಮನೋಭಾವ ಹೊಂದಿರುವ ಈ ಮಹಿಳೆಯ ದಿಟ್ಟ ನಿರ್ಧರಕ್ಕೆ ಎಲ್ಲರೂ ಹ್ಯಾಡ್ ಸಾಫ್ಟ್ ಹೇಳಲೇ ಬೇಕು..
Comments are closed.