ಕರ್ನಾಟಕ

ಹೆರಿಗೆ ಸಂದರ್ಭ ಮಗು ಅತಿಯಾಗಿ ಬೆಳೆದಿದ್ದಕ್ಕೆ ನರ್ಸ್ ಒಬ್ಬಳು ಏನು ಮಾಡಿದ್ಲು ಗೊತ್ತಾ?!

Pinterest LinkedIn Tumblr


ಗರ್ಭಿಣಿಯಾಗಿದ್ದಾಗ ಮಗು ಚೆನ್ನಾಗಿರಲಿ, ದಷ್ಟಪುಷ್ಟವಾಗಿ ಬೆಳೆಯಲಿ ಎಂದು ಸಾಧಾರಣವಾಗಿ ಗರ್ಭಿಣಿಯರಿಗೆ ಚೆನ್ನಾಗಿ ತಿನಿಸುವುದು ಸಹಜ. ಆದರೆ ಇಲ್ಲೊಬ್ಬ ನರ್ಸ್​ ಗರ್ಭಿಣಿಗೆ ಚೆನ್ನಾಗಿ ತಿನ್ನಿಸಿದಕ್ಕೆ ಅಜ್ಜಿಯೊಬ್ಬರಿಗೆ ಹೊಡೆದಿರುವ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ಹೌದು ಗರ್ಭಿಣಿಯೊಬ್ಬರ ಮಗು ಅತಿ ತೂಕವಿದ್ದರಿಂದ ನರ್ಸ್​ಗೆ ಹೆರಿಗೆ ಮಾಡಿಸಲು ಕಷ್ಟವಾಗಿದೆ. ಇದರಿಂದ ಕೋಪಗೊಂಡಿರುವ ನರ್ಸ್​ ಗರ್ಭಿಣಿಗೆ ಇಷ್ಟೊಂದು ಯಾಕೆ ತಿನಿಸಿದ್ದೀರಾ ಎಂದು ಅಜ್ಜಿಯೊಬ್ಬರ ಕೆನ್ನೆಗೆ ಬಾರಿಸಿದ್ದಾಳೆ. ಹೌದು ಇದು ಆಶ್ಚರ್ಯ ಆದರೂ ಸತ್ಯ ಕಥೆ

ಸಾಮಾನ್ಯವಾಗಿ ಹುಟ್ಟುವ ಮಕ್ಕಳು ಆರೋಗ್ಯವಾಗಿರಲಿ ಎಂಬ ಬಯಕೆ ಎಲ್ಲ ತಾಯಂದಿರಲ್ಲಿಯೂ ಇರುವುದು ಸಹಜ. ಅದಕ್ಕಾಗಿ ಗರ್ಭಿಣಿಯರಿಗೆ ವಿಶೇಷ ಕಾಳಜಿ ವಹಿಸಿ, ಪೋಷಕಾಂಶ ಇರುವ ಆಹಾರ ನೀಡಿ ಆರೈಕೆ ಮಾಡುತ್ತಾರೆ, ಹಾಗೆಯೇ ಉತ್ತಮ ಪೋಷಕಾಂಶ ದೊರೆಯುವ ಆಹಾರ ಸೇವಿಸಿದ ಗರ್ಭಿಣಿಯೊಬ್ಬಳು 4.5 ಕೆಜಿ ತೂಕದ ಮಗುವಿಗೆ ಜನನ ನೀಡುವ ಮೂಲಕ ನರ್ಸ್​ ಕೈಯಿಂದ ಪೆಟ್ಟು ತಿಂದಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಇಂದೋರ್​ ನಿವಾಸಿ ನೇಹಾ ಸರ್ದಾಗೆ ಗುರುವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಆಕೆಯನ್ನು ಕುಟುಂಬಸ್ಥರು ಹೆರಿಗೆಗೆಂದು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು,ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ನರ್ಸ್​ಗಳೇ ಪರೀಕ್ಷೆ ನಡೆಸಿ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಗರ್ಭಿಣಿ ನೋವಿನಿಂದ ನರಳಾಡುತ್ತಿದ್ದರಿಂದ 16 ಇಂಜೆಕ್ಷನ್​ ನೀಡಿದ್ದಾರೆ. ಆದರೆ ಮಗುವಿನ ತೂಕ ಹೆಚ್ಚಿದ್ದರಿಂದ ಆಕೆಗೆ ಹೆರಿಗೆ ವಿಳಂಬವಾಗಿದೆ.

ಇದಕ್ಕೆ ಕಾರಣ ಗರ್ಭಿಣಿಗೆ ತಿನ್ನಿಸಿದ್ದರಿಂದ ತಾಯಿಯ ಗರ್ಭದಲ್ಲಿದ್ದ ಮಗು ಅತಿ ತೂಕವುಳ್ಳದ್ದಾಗಿದ್ದು, ಹೆರಿಗೆ ಮಾಡಿಸಲು ಕಷ್ಟವಾಗಿದೆ. ಎಂದು ಸಿಟ್ಟಾಗಿ ಆಕೆಯ ಅಜ್ಜಿ ಕೆನ್ನೆಗೆ ಬಾರಿಸಿದ್ದಾರೆ. ಇನ್ನೂ ಈ ವಿಚಾರವಾಗಿ ಅಜ್ಜಿ ಮೇಲೆ ಹಲ್ಲೆ ಮಾಡಲಾದ ನರ್ಸ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಈ ಕುರಿತು ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಹೆರಿಗೆ ಮಾಡಿಸಿದ ಬಳಿಕ ಬಂದ ನರ್ಸ್​ ಗರ್ಭಿಣಿಯ ಪತಿಗೆ ಮಗುವಿನ ತೂಕ ಹೆಚ್ಚಳದ ಕುರಿತು ಕ್ಲಾಸ್​ ತೆಗೆದುಕೊಂಡಿದ್ದಾರೆ. ಅಲ್ಲದೇ ಮಗು ಹೃದಯ ಬಡಿಯುತ್ತಿದೆ. ಆದರೆ, ಕೈ, ಕಾಲು ಆಡಿಸುತ್ತಿಲ್ಲ. ಅಳುತ್ತಿಲ್ಲ ಎಂದಿದ್ದಾರೆ.

ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ತಾಯಿ,ಮಗುವನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆರಿಗೆ ಸಮಯದಲ್ಲಿ ಆದ ನಿರ್ಲಕ್ಷ್ಯದಿಂದ ಮಗುವು ಬದುಕುಳಿಯಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Comments are closed.