
ಬೆಂಗಳೂರು: ನಾವೆಲ್ಲಾ ಅಣ್ತಮ್ಮಾಸ್ ಬಂದ್ ಬಿಡಿ ಯಾಕ್ ಸುಮ್ನೆ(!?) ಎಂದು ಸಚಿವ ಡಿ.ಕೆ ಶಿವಕುಮಾರ್ ಅವರು ಅತೃಪ್ತ ಶಾಸಕರಿಗೆ ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಯಾಮಾರಿಸುತ್ತಿದ್ದಾರೆ, ಶಾಸಕರು ಅದನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ ಲೈಫ್ ನಾ ಹಾಳ್ ಮಾಡಿಕೊಳ್ಳಬೇಡಿ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಇದು ನಿಮ್ ಮನೆ, ನೀವೇ ಕಟ್ಟಿದ ಮನೆ, ಬನ್ನಿ ನಾವು ಯಾವ ತ್ಯಾಗಕ್ಕೂ ಸಿದ್ಧವಿದ್ದೇವೆ. ನ್ಯಾಯಾಲಯದಿಂದ ಅನ್ಯಾಯವಾಗಲ್ಲ, ನಮ್ಮ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ, ಕೋರ್ಟ್ನ ತೀರ್ಪನ್ನು ಗೌರವಿಸುತ್ತೇವೆ. ನಮ್ಮ ಪರ ತೀರ್ಪು ಬರಲಿದೆ ಎಂಬ ನಿರೀಕ್ಷೆ ಇದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆ ಒಂದು ರಾಜೀನಾಮೆಯಲ್ಲಿ ಕೆಲವು ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ತಿರಸ್ಕರಿಸಿದ್ದರು. ಸದ್ಯ ಈಗ ರಾಜೀನಾಮೆ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
Comments are closed.