ಕರ್ನಾಟಕ

ರೋಷನ್ ಬೇಗ್ ಪರ ನಡಹಳ್ಳಿ ಬ್ಯಾಟಿಂಗ್

Pinterest LinkedIn Tumblr


ಬೆಂಗಳೂರು: ಶಾಸಕ ರೋಷನ್ ಬೇಗ್ ಮುಂಬೈಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಏರ್ಪೋರ್ಟ್‌ನಲ್ಲಿ ಅರೆಸ್ಟ್ ಮಾಡಿದ್ದಕ್ಕೆ ಬಿಜೆಪಿ ಶಾಸಕ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಬಾರದ ಕಷ್ಟ ಕೊಡ್ತೀವಿ ಅನ್ನೋ ರೀತಿಯಲ್ಲಿ ನಡೆದುಕೊಳ್ತಿದ್ದಾರೆ. ರೋಷನ್ ಬೇಗ್ ಅವರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯೋ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದ ನಡಹಳ್ಳಿ, ಎಸ್.ಐ.ಟಿ ವಿಚಾರಣೆಗೆ ಯಾರೂ ವಿರೋಧ ಮಾಡಲ್ಲ. ಆದರೆ ಒಯಕ್ತಿಕ ಕಾರಣಕ್ಕೆ ಎಲ್ಲೋ ಹೊರಟಾಗ ಒತ್ತಡದಿಂದ ತಡೆದಿದ್ದಾರೆ. ಸ್ಪೀಕರ್ ಗಮನಕ್ಕೆ ತರದೇ ಶಾಸಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಶಾಸಕರ ಹಕ್ಕು ಕಸಿದುಕೊಳ್ಳುವ ಕೆಲಸ ಮಾಡಿದೆ. ಸ್ಪೀಕರ್ ರಮೇಶ್ ಕುಮಾರ್ ರೋಷನ್ ಬೇಗ್ ರಕ್ಷಣೆಗೆ ಬರಲಿ. ಶಾಸಕರ ಹಕ್ಕುಗಳಿಗೆ ಧಕ್ಕೆ ಆಗಿದೆ. ಎಸ್.ಐ.ಟಿ ವಿಚಾರಣೆ ಹೆಸರಲ್ಲಿ ಸಿಎಂ ಬ್ಲಾಕ್ ಮೇಲ್ ಮಾಡ್ತಿದ್ದಾರೆ. ನೈತಿಕವಾಗಿ ಬಿಜೆಪಿಯ ನಾವೆಲ್ಲಾ ರೋಷನ್ ಬೇಗ್ ಜೊತೆ ಇದ್ದೀವಿ. ಸಿಎಂ ರಾಜಕೀಯ ಕಾರ್ಯದರ್ಶಿ ಯಾರ್ಯಾರ ಮನೆಗೆ ಕಾಲು ಹಿಡಿಯೋಕೆ ಹೋಗಿದ್ರು ಗೊತ್ತಿಲ್ವಾ? ಸಿಎಂಗೆ ನಾಚಕೆ ಆಗಲ್ವಾ? ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.

Comments are closed.