ಕರ್ನಾಟಕ

ಮದುವೆಯಾಗಿ ಒಂದು ದಿನದಲ್ಲೇ ತಲಾಖ್ ನೀಡಿದ ಪತಿ!!

Pinterest LinkedIn Tumblr


ಕೇಂದ್ರ ಸರ್ಕಾರ ತಲಾಖ್​​​ಗೆ ಬ್ರೇಕ್​ ಹಾಕುವ ಪ್ರಯತ್ನ ನಡೆಸಿದ್ದರೂ ದೇಶದಲ್ಲಿ ತಲಾಖ್​ ಭೂತಕ್ಕೆ ನಲುಗುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಮಾತ್ರ ಕುಗ್ಗಿಲ್ಲ. ಹೌದು ಉತ್ತರ ಪ್ರದೇಶದ ಲಕ್ನೋದಲ್ಲಿ ಪತಿ ಎಂಬ ಭೂಪನೊಬ್ಬ ಮದುವೆಯಾದ 24 ಗಂಟೆಯೊಳಗೆ ತನ್ನ ಪತ್ನಿಗೆ ತಲಾಖ್ ಕೊಟ್ಟಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಹೌದು ತಲಾಕ್ ನೀಡಿದ ಭೂಪನ ಹೆಸರುಯ ಉಸ್ಮಾನ್ ಗನಿ ,ಜುಲೈ 13ರಂದು ಉಸ್ಮಾನ್ ಗನಿ, ಹಸನಪುರ ತಾಂಡಾದ ನಿವಾಸಿಯಾದ ಖುತುಬುದ್ದೀನ್ ಅವರ ಮಗಳು ರುಕ್ಸಾನಾರನ್ನು ಮದುವೆ ಆಗಿದ್ದನು. ಶನಿವಾರ ಮದುವೆ ಆದ ಬಳಿಕ ರುಕ್ಸಾನಾ ಕುಟುಂಬದವರು ವರದಕ್ಷಿಣೆ ನೀಡಿ ಮಗಳಿಗೆ ತನ್ನ ಪತಿಯ ನಿವಾಸಕ್ಕೆ ಕಳುಹಿಸಿಕೊಟ್ಟಿದ್ದರು. ಮಗಳ ಮದುವೆ ಮಾಡಿದ ಖುಷಿಯಲ್ಲಿದ್ದ ಹೆತ್ತವರಿಗೆ ಅಳಿಯ ಸಖತ್ ಶಾಕ್ ನೀಡಿದ್ದಾನೆ.

ಮಗಳ ಮದುವೆಯ ಖುಷಿಯಲ್ಲಿದ್ದ ವಧುವಿನ ಹೆತ್ತವರಿಗೆ ವರದಕ್ಷಿಣೆಯಾಗಿ ಬೈಕ್​ ತರಬೇಕೆಂದು ಒತ್ತಾಯಿಸಿದ ಪತಿ ರುಕ್ಸಾನಾಗೆ ಇದೇ ವಿಚಾರಕ್ಕೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಆತನ ಬೇಡಿಕೆ ಈಡೇರಿಸಿಲ್ಲ ಎಂಬ ಕಾರಣಕ್ಕೆ ಮದುವೆಯಾದ 24 ಗಂಟೆಯಲ್ಲೇ ಉಸ್ಮಾನ್​ ಪತ್ನಿಗೆ ತಲಾಖ್​ ಘೋಷಿಸಿದ್ದಾನೆ.

ಇನ್ನು ಮದುವೆಯಾಗಿ 24 ಗಂಟೆಯೊಳಗೆ ಮಗಳಿಗೆ ತಲಾಖ್ ಕೊಟ್ಟಿದ್ದಕ್ಕೆ ಖುತುಬುದ್ದೀನ್ ಹಾಗೂ ಕುಟುಂಬಸ್ಥರು ದುಃಖದಲ್ಲಿದ್ದಾರೆ.ಈ ಬಗ್ಗೆ ಖುತುಬುದ್ದೀನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Comments are closed.