ಕರ್ನಾಟಕ

ಯಾವುದೇ ಕಾರಣಕ್ಕೂ ಬಿಜೆಪಿ ಷಡ್ಯಂತ್ರ ಫಲಿಸಲ್ಲ!: ಕುಮಾರಸ್ವಾಮಿ

Pinterest LinkedIn Tumblr


ರಾಜ್ಯ ರಾಜಕೀಯದಲ್ಲಿ ರಾಜಕೀಯ ಅಬದ್ರತೆ ಉಂಟಾಗಿದ್ದು ಮೈತ್ರಿ ಸರ್ಕಾರದ 11 ಅತೃಪ್ತ ಶಾಸಕರು ಮುಂಬೈ ರಿನೈಸನ್ಸ್ ಹೋಟೆಲ್​ನಲ್ಲಿ ಬೀಡು ಬಿಟ್ಟಿರುವ ಬೆನ್ನಲ್ಲೇ ಇದೆಲ್ಲ ಬಿಜೆಪಿ ನಾಯಕರ ಕುತಂತ್ರ ಅವರ ಪಿತೂರಿಯಿಂದಲೇ ಇದೆಲ್ಲ ನಡೆಯುತ್ತಿದೆ ಎಂದು ನಾಡ ದೊರೆ ಸಿಎಂ ಹೆಚ್​ಡಿಕೆ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಬಿಜೆಪಿ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ಎಲ್ಲವನ್ನೂ ಗಮನಿಸ್ತಿದ್ದೇನೆ. ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆ.ಯಾವುದೇ ಕಾರಣಕ್ಕೂ ಬಿಜೆಪಿ ಷಢ್ಯಂತ್ರ ಫಲಿಸಲ್ಲ ಎಂದು ಹೇಳಿದ್ದಾರೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬಿಜೆಪಿ ಮೈತ್ರಿ ಯನ್ನೂ ಅಧಿಕಾರದಿಂದ ಕೆಳಗಿಳಿಸಿ ಆ ಅಧಿಕಾರದ ಚುಕ್ಕಾಣಿಯನ್ನು ತಮ್ಮದಾಗಿಸಿಕೊಳ್ಳಲು ಬಿಜೆಪಿ ಆಪರೇಷನ್ ಕಮಲ ಅಸ್ತ್ರವನ್ನು ಉಪಯೋಗಿಸುತ್ತಲೇ ಬಂದಿದ್ದು ಇದೀಗಾ ಮೈತ್ರಿ ಸರ್ಕಾರದ ಅತೃಪ್ತರ ಮೇಲೆ ಮತ್ತೆ ತಮ್ಮ ಆಪರೇಷನ್ ಅಸ್ತ್ರವನ್ನ ಉಪಯೋಗಿಸಿದ್ದರ ಪರಿಣಾಮ ರಾಜ್ಯ ರಾಜಕಾರಣ ಕ್ಷಣಕ್ಕೊಂದು ರೂಪ ಪಡೆದುಕೊಳ್ಳತ್ತಿದೆ.

Comments are closed.