ರಾಷ್ಟ್ರೀಯ

ವಾಟ್ಸಾಪ್​, ಪೇಸ್​ಬುಕ್​ ಸೇವೆ ಸ್ಥಗಿತಕ್ಕೆ ಮೋದಿ ಆದೇಶ?!

Pinterest LinkedIn Tumblr


ನಿನ್ನೆ ಕೆಲಹೊತ್ತು ವಾಟ್ಸಾಪ್​ ಮತ್ತು ಪೇಸ್​ಬುಕ್​ಗಳು ಡೌನ್ ಆಗಿದ್ದರಿಂದ ವಿಶ್ವದೆಲ್ಲೆಡೆ ಸಂಚಲನ ಮೂಡಿತ್ತು. ಇನ್ನೊಂದೆಡೆ ಭಾರತದಲ್ಲಿ ಕೇಂದ್ರ ಸರ್ಕಾರ ವಾಟ್ಸಪ್​ ಸೇರಿದಂತೆ ಕೆಲ ಸೋಷಿಯಲ್​ ಮೀಡಿಯಾ ಬ್ಯಾನ್ ಮಾಡಲು ಚಿಂತನೆ ನಡೆಸಿದೆ ಎಂಬ ಮಾತು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಲಕಾಲ ಜನರು ಆತಂಕಿತರಾಗಿದ್ದರು.

ಆದರೇ ಇದೀಗ ಈ ವಿಚಾರದ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಿದ್ದು, ವಾಟ್ಸ್ಯಾಪ್ ನೀಷೆಧವಾಗುವ ಕುರಿತು ಕೇಂದ್ರ ಸರ್ಕಾರವಾಗಲಿ ,ಗೂಗಲ್ ಆಗಲಿ ,ವಾಟ್ಸ್ಯಾಪ್ ಆಗಲಿ ಎಲ್ಲಿಯೂ ಹೇಳಿಕೊಂಡಿಲ್ಲ.ಇನ್ನು ನೆನ್ನೆ ಸುಮಾರು 7 ಗಂಟೆಯ ಹೊತ್ತಿಗೆ ವಾಟ್ಸ್ಆಪ್.ಫೇಸ್ ಬುಕ್ .ಟ್ವಿಟರ್,ಇನ್ ಸ್ಟಾಗ್ರಾಂಗಳಲ್ಲಿನ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ಮೊದಲಿಗೆ ಗ್ರಾಹಕರು ಮೊಬೈಲ್ ಮತ್ತು ಇಂಟರ್ ನೆಟ್​ ಸಮಸ್ಯೆ ಇರಬೇಕು ಎಂದು ಪರದಾಡುತ್ತಿದ್ದರು. ಇನ್ನು ಮುಂದೆ ನಿತ್ಯ ರಾತ್ರಿ 11.30ರಿಂದ ಬೆಳಗ್ಗೆ 6 ವರೆಗೆ ವಾಟ್ಸ್ಆಪ್ ಬಂದ್ ಮಾಡಲು ಮೋದಿ ಸರ್ಕಾರ ಅದೇಶ ಮಾಡಿದೆ . ಈ ಸಂದೇಶವನ್ನು ಎಲ್ಲರಿಗೂ ಫಾರ್ವಡ್ ಮಾಡಲು ಕೊರಲಾಗಿದೆ.ಫಾರ್ವಡ್ ಮಾಡದೇ ಹೋದರೆ ನಿಮ್ಮ ವಾಟ್ಸ್ಆಪ್ ಅಕೌಂಟ್ ಡಿಲೀಟ್ ಆಗಲಿದೆ. ಅಕೌಂಟ್ ಅನ್ನು ಮತ್ತೆ ಚಾಲ್ತಿ ತರಬೇಕಾದ್ದರೆ.499 ರೂ ಪಾವತಿಸಬೇಕು. ಮತ್ತು ಇದರ ಜತೆ ವಾಟ್ಸ್ ಆ್ಯಪ್ ನಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿವೆ ಎಂದು ಕೆಲವು ಸಂದೇಶಗಳು ವಾಟ್ಸ್ಆಪ್ ನಲ್ಲಿ ಹರಿದಾಡಿತ್ತಿತ್ತು.

ಆದರೆ ಇವೆಲ್ಲ ಕೇವಲ ಊಹಾಪೋಹವಾಗಿದ್ದು, ನಿನ್ನೆ ರಾತ್ರಿ ವಾಟ್ಸಪ್ ಮತ್ತು ಪೇಸ್​ಬುಕ್​ನಲ್ಲಿ ಉಂಟಾಗಿದ್ದು, ಕೇವಲ ತಾಂತ್ರಿಕ ಸಮಸ್ಯೆಯಾಗಿತ್ತು. ಮೋದಿ ಸರ್ಕಾರದ ಯಾವುದೇ ಆದೇಶ ಇಲ್ಲ ಎಂಬುದು ಸಾಬೀತಾಗಿದೆ.

Comments are closed.