
ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಶುರುವಾಗ್ತಿದಂತೆ ವಿರೋಧ ಪಕ್ಷ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಲೋಕಸಭಾ ಚುನಾವಣೆ ಬಳಿಕ ತಟಸ್ಥವಾಗಿದ್ದ ಬಿಜೆಪಿಗೆ ಕಾಂಗ್ರೆಸ್ ಶಾಸಕರ ರಾಜೀನಾಮೆಯೇ ಹೆದ್ದಾರಿಯೇ ಮಾಡಿಕೊಟ್ಟಂತಾಗಿದೆ. ಮತ್ತಷ್ಟು ಅತೃಪ್ತ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯ ಸುದ್ದಿ ಕೇಸರಿಪಾಳಯದಲ್ಲಿ ಹೊಸಹುರುಪು ನೀಡಿದೆ.
ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಕರೆದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ನಾವು ಯಾವುದೇ ತಂತ್ರ, ಕುತಂತ್ರ ಮಾಡ್ತಿಲ್ಲ. ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟು ಹೊರಬಂದರೆ ಸರ್ಕಾರ ರಚನೆ ಮಾಡ್ತೀವಿ. ನಾವೇನು ರಾಜಕೀಯ ಸನ್ಯಾಸಿಗಳಾ..? ಅಂತ ಹೇಳುವ ಮೂಲಕ ಸರ್ಕಾರ ರಚಿಸಲು ತುದಿಗಾಲ ಮೇಲೆ ನಿಂತಿದ್ದೇವೆ ಎಂಬ ಸಂದೇಶ ರವಾನಿಸಿದರು.
ಈಗ ನಾವು ರಾಜ್ಯಪಾಲರ ಬಳಿ ಹೋಗುವ ಅಗತ್ಯವಿಲ್ಲ. ಮುಂದಿನ ಬೆಳವಣಿಗೆ ಕಾದು ನೋಡ್ತೇವೆ ಅಂತ ಶೆಟ್ಟರ್ ಹೇಳಿದ್ದಾರೆ.
ಇದು ನಿಲಲ್ಲ, ಈಗ ಎರಡು ವಿಕೆಟ್ ಬಿದ್ದಿವೆ. ಮತ್ತಷ್ಟು ಉರುಳಬಹುದು ಎಂದು ಆರ್.ಅಶೋಕ್ ಭವಿಷ್ಯ ನುಡಿದ್ದಾರೆ. ಇದಕ್ಕೂ ಮೊದಲು ಅವರು, ಆನಂದ್ ಸಿಂಗ್ ಒಬ್ಬರೇ ಇದ್ದಂತಿಲ್ಲ ಎಂದು ಹೇಳಿದ್ದ ಕೆಲ ಗಂಟೆಗಳಲ್ಲೇ ರಮೇಶ್ ಜಾರಕಿಹೊಳಿ ವಿಕೆಟ್ ಉರುಳಿತು. ಮುಂದೆ ದೊಡ್ಡ ರಾಜಕೀಯ ಬೆಳವಣಿಗೆ ಘಟಿಸುತ್ತೆ ಅಂತ ಶಾಸಕ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದ್ರೆ, ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿಲ್ಲ ಅಂತ ಉಮೇಶ್ ಕತ್ತಿ ಹೇಳಿದ್ದಾರೆ.
ಈ ನಡುವೆ, ಬಿಜೆಪಿಯವರು ಹಗಲುಗನಸು ಕಾಣ್ತಿದ್ದಾರೆ ಎಂಬ ಸಿಎಂ ಟೀಕೆಗೆ ತಿರುಗೇಟು ನೀಡಿರುವ ಸಿ.ಟಿ.ರವಿ, ಬೀಳಿಸೋದಲ್ಲ ಸರ್ಕಾರ ಉಳಿಸಿದೋದು ನಮ್ಮ ಕೆಲಸ ಅಲ್ಲ ಎಂದಿದ್ದಾರೆ. ಆದರೆ, ಸುರೇಶ್ ಕುಮಾರ್, ಇದರ ಸೂತ್ರದಾರ ಸಿದ್ದರಾಮಯ್ಯ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಕೂತಿರುವ ಬಿಜೆಪಿ ವರಿಷ್ಠ ಅಮಿತ್ ಶಾ, ಕರ್ನಾಟಕದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಕಿವಿಗೆ ಬೀಳ್ತಿದ್ದಂತೆ ಹೈಅಲರ್ಟ್ ಆಗಿದ್ದಾರೆ. ಈ ಮೊದಲು ತಟಸ್ಥವಾಗಿರುವಂತೆ ಸೂಚನೆ ನೀಡಿದ್ದ ಅಮಿತ್ ಶಾ, ಈಗ ಮುಂದುವರಿಯುವಂತೆ ರಾಜ್ಯ ಬಿಜೆಪಿಗೆ ಮೆಸೇಜ್ ರವಾನಿಸಿದ್ದಾರೆ. ವಿಳಂಬ ಮಾಡದೆ ಸರ್ಕಾರ ರಚಿಸಲು ಆರ್ಡರ್ ನೀಡಿದ್ದಾರೆ. ಕಳೆದ ಬಾರಿ ಆದಂತೆ ಈ ಬಾರಿ ಕೇಂದ್ರ ಸರ್ಕಾರಕ್ಕೆ ಯಾವುದೇ ಮುಜುಗರ ಆಗದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂಬ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
Comments are closed.