
ರಾಮ್ ಕುಮಾರ್. ಕನ್ನಡ ಚಿತ್ರರಂಗ ಕಂಡ ಸ್ಫುರದ್ರೂಪಿ ನಟ. ಈಗಲೂ ಯಾವ ಹ್ಯಾಂಡ್ಸಮ್ ಹೀರೋಗೂ ಕಮ್ಮಿ ಇಲ್ಲ ಅನ್ನೋ ತರ ಇದ್ದಾರೆ. ಅವರ ಮಗ ಧೀರೇನ್ ಕೂಡ ಈ ಬಣ್ಣದ ಲೋಕಕ್ಕೆ ಜಿಗಿಯಲೂ ಕ್ಯಾಮೆರಾ ಮುಂದೆ ತಾಲಿಮೂ ಮಾಡುತ್ತಿದ್ದಾರೆ. ಈಗ ರಾಮ್ ಕುಮಾರ್ ಮಗಳೂ ಕೂಡ ಬೆಳ್ಳಿತೆರೆಯ ಮೇಲೆ ಮಿನುಗಲು ಸಜ್ಜಾಗಿದ್ದಾರೆ ಧನ್ಯಾ ರಾಮ್ ಕುಮಾರ್.
ಧನ್ಯಾ ರಾಮ್ ಕುಮಾರ್ ಚಿತ್ರರಂಗಕ್ಕೆ ಬಲಗಾಲಿಡುತ್ತಿರುವ ಸಮಾಚಾರ ಈ ಮೊದಲೇ ಸದ್ದಾಗಿತ್ತು. ಆದರೆ ಆ ಸಿನಿಮಾ ಯಾವಾಗ ಸೆಟ್ಟೇರುತೆ, ಶೂಟಿಂಗ್ ಯಾವಾಗ ಏನು ಎತ್ತಾ ಅನ್ನೋದು ಅಧಿಕೃತವಾಗಿರಲಿಲ್ಲ, ಸದ್ಯ ಮೊದಲನೇ ಹಂತವಾಗಿ ಚಿತ್ರದ ಟೈಟಲ್ ಕಾರ್ಡ್ ಪೋಸ್ಟರ್ಸ್ಗಳಿಗಾಗಿ ಚಿತ್ರತಂಡ ಫೋಟೋ ಶೂಟ್ ಮಾಡಿಸಿದೆ.
ಸುಮನ್ ಜಾದುಗಾರ್, ರಾಮ್ ಕುಮಾರ್ ಮಗಳು ಧನ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಸುತ್ತಿರುವ ಡೈರೆಕ್ಟರ್ . ಅಕ್ಕ ಪಕ್ಕದ ಇಂಡಸ್ಟ್ರಿಯಲ್ಲಿ ಸಿನಿಮಾ ಕಾಗುಣಿತ ಕಲಿತು, ಸಕ್ಕರೆ ಮತ್ತು ಸಿಲಿಕಾನ್ ಸಿಟಿ ಸಿನಿಮಾಕ್ಕೆ ರೈಟರ್ ಆಗಿ ಕೆಲಸ ಮಾಡಿ, ಈಗ ಸ್ವಾತಂತ್ರ್ಯ ನಿರ್ದೇಶಕರಾಗಿ ಸುಮನ್ ಜಾದುಗಾರ್ ಬಡ್ತಿ ಪಡೆಯುತ್ತಿದ್ದಾರೆ.
ಇನ್ನು ಹೆಸರಿಡದ ಈ ಚಿತ್ರಕ್ಕೆ ಮದುವೆಯ ಮಮತೆಯ ಕರೆಯೋಲೆ ಖ್ಯಾತಿಯ ನಾಯಕ ನಟ ಸೂರಜ್ ಗೌಡ ಕಥೆ ಬರೆದು ನಾಯಕ ನಟನಾಗಿ ಬಣ್ಣ ಹಚ್ಚಲಿದ್ದಾರೆ. ಸುಮನ್ ಜಾದುಗಾರ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕೂ ಮುಂಚಿತವಾಗಿ ಲುಕ್ ಟೆಸ್ಟ್ ಮಾಡುವ ಸಲುವಾಗಿ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಸೂರಜ್ ಗೌಡ , ಧನ್ಯಾ ರಾಮ್ ಕುಮಾರ್ ಜೋಡಿ ಚಿತ್ರಕ್ಕೆ ನಾಮಕರಣ ಮಾಡಲಾಗುವುದು.. ಆಷಾಢ ಮುಗಿಯುತ್ತಿದಂತೆ , ಚಿತ್ರತಂಡ ಶೂಟಿಂಗ್ ಸ್ಪಾಟ್ಗೆ ಧುಮುಖಲಿದೆ. ಚಿತ್ರಕ್ಕೆ ರಘು ದೀಕ್ಷಿತ್ ರಾಗ ಪೋಣಿಸುತ್ತಿದ್ದಾರೆ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಸಾಹಿತ್ಯ ಜೋಡಿಸುತ್ತಿದ್ದಾರೆ. ಅಭಿಲಾಷ್ ಕ್ಯಾಮೆರಾ ಹಿಡಿಯಲಿದ್ದಾರೆ. ವೈಟ್ ಆಂಡ್ ಗ್ರೇ ಪಿಕ್ಚರ್ ಬ್ಯಾನರ್ ನವರು ಈ ವರ್ಷ ಕಳೆಯುಷ್ಟರಲ್ಲಿ ಒಂದು ರೊಮ್ಯಾಟಿಕ್ ಕಾಮಿಡಿ ಸಿನಿಕಥಾಹಂದರವನ್ನು ಪ್ರೇಕ್ಷಕರ ಮುಂದೆ ತರಲಿದ್ದಾರೆ.
Comments are closed.