
ಭಾರತ-ಇಂಗ್ಲೆಂಡ್ ನಡುವಣ ಪಂದ್ಯದಲ್ಲಿ ಭಾರತ 31ರನ್ಗಳ ಸೋಲು ಕಂಡಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಹಿನ್ನಡೆ ಅನುಭವಿಸಿದೆ. ಸೆಮಿ ಫೈನಲ್ ಏರುವ ಕನಸು ಕಾಣುತ್ತಿದ್ದ ಪಾಕಿಸ್ತಾನವನ್ನು ಭಾರತದ ಸೋಲು ಕಂಗೆಡಿಸಿದೆ.
ಭಾರತದ ಸೋಲಿನಿಂದ ಪಾಕಿಸ್ತಾನ ಮನೆಗೆ ತೆರಳಿತು ಎಂದು ಅನೇಕರು ಕುಣಿದು ಕುಪ್ಪಳಿಸುತ್ತಿದ್ದಾರೆ. ಆದರೆ, ಪಾಕಿಸ್ತಾನದ ಸೆಮಿಫೈನಲ್ ಏರುವ ಕನಸು ಇನ್ನೂ ಜೀವಂತವಾಗಿದೆ. ಹೌದು, ಕೆಲ ಪವಾಡಗಳು ನಡೆದರೆ ಪಾಕಿಸ್ತಾನ ಸೆಮಿ ಫೈನಲ್ಗೆ ಏರಬಹುದಾಗಿದೆ.
ಇಂಗ್ಲೆಂಡ್ ಆಡಿದ 8 ಪಂದ್ಯಗಳಲ್ಲಿ 3 ಪಂದ್ಯವನ್ನು ಸೋತು ನಾಲ್ಕು ಪಂದ್ಯ ಗೆದ್ದಿದೆ. ಈ ಮೂಲಕ ರ್ಯಾಂಕಿಗ್ ಪಟ್ಟಿಯಲ್ಲಿ 10 ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಮುಂಬರುವ ನ್ಯೂಜಿಲೆಂಡ್ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇಂಗ್ಲೆಂಡ್ಗಿದೆ. ಒಂದೊಮ್ಮೆ ಈ ಪಂದ್ಯ ಗೆದ್ದರೆ 12 ಅಂಕ ಗಳಿಸುವ ಮೂಲಕ ಆಂಗ್ಲರು ಸೆಮಿಫೈನಲ್ಗೆ ಲಗ್ಗೆ ಇಡಲಿದ್ದಾರೆ.
ಇನ್ನು ಪಾಕಿಸ್ತಾನ ಆಡಿದ 8 ಪಂದ್ಯಗಳ ಪೈಕಿ 4 ಪಂದ್ಯಗಳನ್ನು ಗೆದ್ದಿದ್ದು, 3 ಪಂದ್ಯಗಳನ್ನು ಸೋತಿದೆ. ಒಂದು ಮಳೆಯಿಂದಾಗಿ ರದ್ದಾಗಿದೆ. ಹಾಗಾಗಿ ಅಂಕ ಪಟ್ಟಿಯಲ್ಲಿ 9 ಪಾಯಿಂಟ್ಗಳನ್ನು ಪಡೆದು 5ನೇ ಸ್ಥಾನದಲ್ಲಿದೆ.
ಹಾಗಾಗಿ ಜು.3ರಂದು ನಡೆಯುವ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಇಂಗ್ಲೆಂಡ್ ಸೋತು, ಜು.5ರಂದು ನಡೆಯುವ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಬೇಕು. ಹಾಗಾದಲ್ಲಿ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ಗೆ 10, ಪಾಕ್ಗೆ 11 ಅಂಕ ಸಿಗಲಿದೆ. ಈ ಮೂಲಕ ಪಾಕ್ ಸೆಮಿಫೈನಲ್ಗೆ ಏರಲಿದೆ. ಇಷ್ಟೆಲ್ಲ ಚಮಾತ್ಕಾರಗಳು ನಡೆದರೆ ಪಾಕ್ ಸೆಮೀಸ್ಗೆ ಲಗ್ಗೆ ಇಡಲಿದೆ.
Comments are closed.