
ಡಿ ಬಾಸ್ ದಚ್ಚು ಏನೇ ಮಾಡಿದ್ರು ಡಿಫರೆಂಟ್.. ಅದ್ರಲ್ಲೂ ಸಿನಿಮಾಗಳ ಆಯ್ಕೆ, ಅದ್ರಲ್ಲಿನ ಪಾತ್ರಗಳ ಆಯ್ಕೆಯಲ್ಲಂತೂ ತುಂಬಾನೇ ಪರ್ಟಿಕ್ಯುಲರ್. ಸದ್ಯ ದರ್ಶನ್ ಸಿನಿಮಾಗಳ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗೋ ಸೂಚನೆ ಸಿಕ್ಕಿದೆ. ಅದೇ ಶಿವನಂದಿ.
ಅರೇ ಶಿವನಂದಿ, ಯಜಮಾನ ಚಿತ್ರದಲ್ಲಿ ಫೇಮಸ್ ಆದ ಪದವಲ್ಲವೇ ಅಂತ ಹುಬ್ಬೇರಿಸಬೇಡಿ. ಅಫ್ ಕೋರ್ಸ್, ಯಜಮಾನ ಚಿತ್ರವೇ ಶಿವನಂದಿ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸೋಕ್ಕೆ ಸ್ಫೂರ್ತಿ. ಹೌದು. ಇತ್ತೀಚೆಗೆ ಯಜಮಾನ ಶತದಿನೋತ್ಸವ ಆಚರಿಸಿದ ಬೆನ್ನಲ್ಲೇ ಡಿ ಬಾಸ್ ದರ್ಶನ್ ಸಹೋದರ ದಿನಕರ್ ತೂಗುದೀಪ್ ಫಿಲ್ಮ್ ಚೇಂಬರ್ನಲ್ಲಿ ಶಿವನಂದಿ ಟೈಟಲ್ ರಿಜಿಸ್ಟರ್ ಮಾಡಿಸಿಬಿಟ್ಟಿದ್ದಾರೆ.
ಒಂದಷ್ಟು ಸಿನಿಮಾಗಳನ್ನ ನಿರ್ಮಿಸಿ, ವಿತರಣೆ ಕೂಡ ಮಾಡ್ತಿರೋ ತೂಗುದೀಪ ಬ್ರದರ್ಸ್ ಒಡೆತನದ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ನಡಿ ಶಿವನಂದಿ ಚಿತ್ರದ ಶೀರ್ಷಿಕೆ ರಿಜಿಸ್ಟರ್ ಆಗಿದೆ. ಅಲ್ಲಿಗೆ ಆ ಸಿನಿಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಸಹೋದರ ದಿನಕರ್ ಅವ್ರೇ ಆ್ಯಕ್ಷನ್ ಕಟ್ ಹೇಳಿದ್ರೂ ಅಚ್ಚರಿಯಿಲ್ಲ.
ಅಂದಹಾಗೆ ಸದ್ಯ ದರ್ಶನ್ ಒಡೆಯ ಹಾಗೂ ರಾಬರ್ಟ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ರಾಬರ್ಟ್ ನಾನ್ಸ್ಟಾಪ್ ಶೂಟಿಂಗ್ ನಡೀತಿದ್ರೆ, ಕುರುಕ್ಷೇತ್ರ ರಿಲೀಸ್ಗೆ ಸಜ್ಜಾಗ್ತಿದೆ. ಹಾಗಾಗಿ ಸದ್ಯ ಇರೋ ಸಿನಿಮಾಗಳೆಲ್ಲಾ ಮುಗಿದ ನಂತ್ರ ಹೋಮ್ ಪ್ರೊಡಕ್ಷನ್ನಲ್ಲೇ ಶಿವನಂದಿ ಸೆಟ್ಟೇರೋ ಸಾಧ್ಯತೆಯಿದೆ.
ತೂಗುದೀಪ ಬ್ರದರ್ಸ್ ನಡುವೆ ಒಳ್ಳೆಯ ಬಾಂಡಿಂಗ್ ಇದೆ. ಇವರಿಬ್ರು ಒಂದಾದ್ರೆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ. ಅದಕ್ಕೆ ಈ ಹಿಂದಿನ ನವಗ್ರಹ ಹಾಗೂ ಸಾರಥಿ ಸಿನಿಮಾಗಳು ಬೆಸ್ಟ್ ಎಕ್ಸಾಂಪಲ್. ಹೌದು. ಅಣ್ಣ ದಚ್ಚುಗೆ ತಮ್ಮ ದಿನಕರ್ ಕೊನೆಯ ಬಾರಿ ನಿರ್ದೇಶನ ಮಾಡಿದ ಸಾರಥಿ ಎಂತಹ ದಾಖಲೆಗಳನ್ನ ಬರೆದಿತ್ತು ಅನ್ನೋದನ್ನ ವಿಶೇಷವಾಗಿ ಹೇಳೋ ಅವಶ್ಯಕತೆಯಿಲ್ಲ.
ಇನ್ನು ಇತ್ತೀಚೆಗೆ ಬಂದಂತಹ ಚಕ್ರವರ್ತಿ ಸಿನಿಮಾದಲ್ಲಿ ಅಣ್ಣನ ವಿರುದ್ಧ ತಮ್ಮ ದಿನಕರ್ ಅವ್ರೇ ಖಡಕ್ ಖಳನಾಯಕನಾಗಿ ಬಣ್ಣ ಹಚ್ಚಿದ್ರು. ಅದೂ ಸಹ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ಸೇರಿತ್ತು. ಒಟ್ಟಾರೆ ತೂಗುದೀಪ್ ಬ್ರದರ್ಸ್ ಒಂದಾಗ್ಲಿ ಅನ್ನೋದು ಇಡೀ ಡಿ ಕಂಪೆನಿ ಖಾಂದಾನ್ ಆಶಯ. ಇನ್ನು ಸರ್ವಾಂತರ್ಯಾಮಿ ಸಿನಿಮಾ ಅನೌನ್ಸ್ ಮಾಡಿದ್ದ ದಿನಕರ್, ಅದಕ್ಕೂ ಮೊದಲೇ ಶಿವನಂದಿ ಶುರುವಿಟ್ರೆ ಅದಕ್ಕಿಂತ ಖುಷಿ ವಿಚಾರ ಮತ್ತೊಂದು ಇರಲಿಕ್ಕಿಲ್ಲ.
Comments are closed.