ಆರೋಗ್ಯ

ಹಣ್ಣಿನ ಸಿಪ್ಪೆಗಳಲ್ಲಿ ಪೌಷ್ಠಿಕಾಂಶ ಹೇರಳವಾಗಿದ್ದು.ಯಾವ ಹಣ್ಣಿನ ಸಿಪ್ಪೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ..

Pinterest LinkedIn Tumblr

ಹಣ್ಣು ಮತ್ತು ತರಕಾರಿಗಳು ಪೋಷಕಾಂಶಗಳ ಕಣಜ. ಇವು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತವೆ. ಹಣ್ಣಿನ ತಿರುಳಿನ ಜೊತೆ ಹಣ್ಣಿನ ಸಿಪ್ಪೆಗಳು ಪೌಷ್ಠಿಕಾಂಶಗಳನ್ನು ಒಳಗೊಂಡಿರುತ್ತವೆ ಹಾಗೂ ಹಣ್ಣಿನ ಜೊತೆ ಸಿಪ್ಪೆಯನ್ನು ಸ್ವಚ್ಛಗೊಳಿಸಿ ತಿನ್ನುವುದು ಒಳ್ಳೆಯದು. ಅಧ್ಯಯನ ವರದಿಗಳ ಪ್ರಕಾರ ಸಿಪ್ಪೆಗಳಿಂದ ಕ್ಯಾನ್ಸರ್ ತಡೆಯಬಹುದು. ಯಾವ ಹಣ್ಣಿನ ಸಿಪ್ಪೆಯಲ್ಲಿ ಏನಿದೆ ನೋಡೋಣ.

ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನ ತೊಗಟೆ ಅಮೈನೋ ಆಮ್ಲದಿಂದ ಸಮೃದ್ಧವಾಗಿದೆ. ಇದು ರಕ್ತನಾಳದ ಹಿಗ್ಗುವಿಕೆಗೆ ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಸುಧಾರಣೆಯಾಗುತ್ತದೆ.
ಸ್ಟ್ರಾಬೆರಿಯ ಎಲೆಗಳ ಕಷಾಯ ಆರೋಗ್ಯಕ್ಕೆ ಒಳ್ಳೆಯದು. ಇದು ದೇಹದಲ್ಲಿರುವ ಹಾನಿಕಾರಕ ರಾಡಿಕಲ್ಸ್ ಹೊರಹಾಕಲು ಸಹಾಯ ಮಾಡುತ್ತದೆ.

ನಿಂಬೆಹಣ್ಣು
ನಿಂಬೆಹಣ್ಣಿನ ಸಿಪ್ಪೆ ಪೈಬರ್ ಹಾಗೂ ಸಮೃದ್ಧವಾದ ವಿಟಮಿನ್ ಎ ಸತ್ವವನ್ನು ಒಳಗೊಂಡಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ. ನಿಂಬೆ ಹಣ್ಣಿನ ಸಿಪ್ಪೆ ಒಣಗಿಸಿ ಪುಡಿ ಮಾಡಿ ಜೇನುತುಪ್ಪ ಅಥವಾ ಮೊಸರಿನೊಂದಿಗೆ ಸೇವಿಸಿದರೆ ಒಳ್ಳೆಯದು.

ಕುಂಬಳ ಬೀಜ
ಕುಂಬಳ ಕಾಯಿಯ ಬೀಜದಲ್ಲಿ ಒಮೇಗಾ, ಸತು, ಮೆಗ್ನೀಷಿಯಂ, ಪೈಬರ್ ಕ್ಯಾಲ್ಸಿಯಂ, ವಿಟಮಿನ್ ಬಿ ಸಮೃದ್ಧವಾಗಿದೆ. ಇದು ಉರಿಯೂತ, ಹೃದಯ ರೋಗ, ಕ್ಯಾನ್ಸರ್, ಸಂಧಿವಾತ ಅಪಾಯ ತಡೆಯುತ್ತದೆ. ಈ ಬೀಜಗಳನ್ನು ಹುರಿದು ತಿನ್ನಬಹುದು, ಹಸಿಬೀಜ ತಿನ್ನಬಹುದು. ಇಲ್ಲವಾದರೆ, ಬ್ರೆಡ್ ಹಾಗೂ ಸೂಪ್‌ನೊಂದಿಗೆ ಸೇವಿಸಬಹುದು.

ಕಿತ್ತಲೆ ಹಣ್ಣು
ಕಿತ್ತಳೆ ಸಿಪ್ಪೆಯ ಪೈಬರ್, ವಿಟಮಿನ್‌ಗಳಿಂದ ತುಂಬಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದನ್ನು ಒಣಗಿಸಿ ಪುಡಿ ಮಾಡಿ ಸೇವಿಸಬಹುದು.

ಸೌತೆಕಾಯಿ
ಸೌತೆಕಾಯಿ ಸಿಪ್ಪೆ ಪೈಬರ್‌ನಿಂದ ಸಮೃದ್ಧವಾಗಿದೆ. ಸಿಪ್ಪೆ ಸಮೇತ ಸೌತೆಕಾಯಿ ತಿಂದರೆ, ಮಲಬದ್ಧತೆಯನ್ನು ನಿವಾರಿಸುತ್ತದೆ. ಜೊತೆಗೆ ಕರುಳಿನ ಕ್ಯಾನ್ಸರ್ ತಡೆಯುತ್ತದೆ.

ಬೀಟ್‌ರೋಟ್
ಬೀಟ್‌ರೋಟ್ ಸಿಪ್ಪೆ ಹುರಿದು ಅಥವಾ ಸೂಪ್ ಮಾಡಿ ಕುಡಿಯಬಹುದು. ಇದರಿಂದ ಉರಿಯೂತ ತಡೆಯಬಹುದು. ಜೊತೆಗೆ ರೋಗ ನಿರೋಧಕ ಅಂಶವು ಹೆಚ್ಚಿರುತ್ತದೆ.

Comments are closed.