ಅಂತರಾಷ್ಟ್ರೀಯ

ಅಪಾರ್ಟ್‌ಮೆಂಟ್‌ನ ಕಿಟಿಕಿಯೊಂದರಿಂದ ಬಿದ್ದ ಮಗುವಿನ ಜೀವ ಉಳಿಸಿದ ಯುವಕ!

Pinterest LinkedIn Tumblr

ಅಪಾರ್ಟ್‌ಮೆಂಟ್‌ನ ಮನೆಯೊಂದರ ಕಿಟಿಕಿಯೊಂದರಿಂದ ಕೆಳಗೆ ಬೀಳುತ್ತಿದ್ದ ಹೆಣ್ಣು ಮಗುವೊಂದನ್ನು ರಸ್ತೆಯಲ್ಲಿ ನಿಂತಿದ್ದ ಯುವಕನೊಬ್ಬ ಕ್ಯಾಚ್ ಹಿಡಿದು ರಕ್ಷಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮಗು ರಕ್ಷಿಸಿದ ‘ದೇವರ’ ಕೈ -ವಿಡಿಯೋ ಫುಲ್ ವೈರಲ್

ಇಸ್ತಾಂಬುಲ್‌ನ ಫತೀಹಾ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೋಹಾ ಮೊಹಮ್ಮದ್ ಎಂಬ ಮಗು ಕಟ್ಟಡದ ಎರಡನೇ ಮಹಡಿಯಿಂದ ಬೀಳುತ್ತಿರುವುದನ್ನು ಗಮನಿಸಿದ 17ರ ಹರೆಯದ ಫೆವುಜಿ ಜಬಾತ್ ಸುರಕ್ಷಿತವಾಗಿ ಕ್ಯಾಚ್ ಹಿಡಿದಿದ್ದಾರೆ.

ದೇವರ ರೂಪದಲ್ಲಿ ರಸ್ತೆಯಲ್ಲಿ ನಿಂತಿದ್ದ ಯುವಕ

ಜಬಾತ್ ಮಗುವನ್ನು ಹಿಡಿದು ರಕ್ಷಿಸಿದಾಗಲೇ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿದ್ದು. ನಾನು ಆ ಕ್ಷಣಕ್ಕೆ ಏನು ಮಾಡಬೇಕೋ ಅದನ್ನು ಮಾಡಿದೆ, ಇದೆಲ್ಲ ದೇವರ ಕೃಪೆ ಅಂತಾರೆ ಜಬಾತ್. ಮಗುವು ಕಿಟಿಕಿಯಿಂದ ಹೊರಗೆ ಇಣುಕಿದಾಗ ಕೆಳಗೆಬಿದ್ದಿದೆ. ಈ ಹೊತ್ತಲ್ಲಿ ಆಕೆಯ ಅಮ್ಮ ಅಡುಗೆ ಮನೆಯಲ್ಲಿದ್ದರು. ಮಗಳನ್ನು ರಕ್ಷಿಸಿದ್ದಕ್ಕೆ ದೋಹಾ ಅವರ ಕುಟುಂಬ ಜಬಾತ್‌ನ್ನು ಅಭಿನಂದಿಸಿದ್ದು, 50 ಡಾಲರ್ ಹಣವನ್ನು ಬಹುಮಾನವಾಗಿ ನೀಡಿದೆ.

Comments are closed.