ರಾಷ್ಟ್ರೀಯ

ಎರಡಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದ್ದರೆ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ!

Pinterest LinkedIn Tumblr


ಡೆಹ್ರಾಡೂನ್​: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಅಂತಹ ವ್ಯಕ್ತಿಗಳು ಪಂಚಾಯತಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನನ್ನು ಜಾರಿಗೆ ತಂದಿದ್ದು, ಇದರೊಂದಿಗೆ ಸ್ಪರ್ಧೆಗೆ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬ ಮಸೂದೆಯನ್ನು ಉತ್ತರಖಾಂಡ್‌ ವಿಧಾನಸಭೆಯಲ್ಲಿಂದು ಅಂಗೀಕರಿಸಲಾಗಿದೆ.

ಉತ್ತರಖಾಂಡ್‌ ಪಂಚಾಯಿತಿ ರಾಜ್‌(ತಿದ್ದುಪಡಿ) ಮಸೂದೆ 2019ರನ್ನು ನಿನ್ನೆ ಉತ್ತರಾಖಂಡ್ ಸರ್ಕಾರ ಮಂಡಿಸಿತ್ತು. ಇಂದು ಪ್ರತಿಪಕ್ಷಗಳ ವಿರೋಧದ ನಡುವೆಯೂ ಆ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಿದೆ.

ಮಸೂದೆಯನ್ನು ವಿಧಾನಸಭೆಯು ಅಂಗೀಕರಿಸಿದ್ದು, ಪಂಚಾಯತಿ ಚುನಾವಣೆ ಅಭ್ಯರ್ಥಿಗಳು 10 ನೇ ತರಗತಿ ಪಾಸ್‌ ಆಗಿರುವುದು ಕಡ್ಡಾಯವಾಗಿದೆ. ಎಸ್‌ಸಿ, ಎಸ್‌ಟಿ ಪುರುಷ ಅಭ್ಯರ್ಥಿಗಳು 8 ನೇ ತರಗತಿ, ಎಸ್‌ಸಿ, ಎಸ್‌ಟಿ ಮಹಿಳೆಯರು 5ನೇ ತರಗತಿ ಓದಿರುವುದು ಕಡ್ಡಾಯವಾಗಿದೆ. ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಅಭ್ಯರ್ಥಿ ಯಾವುದೇ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಹೊಸ ಕಾನೂನು ಜಾರಿಯಾದ 300 ದಿನಗಳ ನಂತರ ಮೂರನೇ ಮಗು ಜನಿಸಿದರೆ ಅವರು ಗ್ರಾಮೀಣ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುವುದಿಲ್ಲ.

Comments are closed.