
ಪ್ರಜ್ವಲ್ ದೇವರಾಜ್ ಚಾಕೋಲೇಟ್ ಹೀರೋ. ಲವ್ವರ್ ಬಾಯ್ ಕ್ಯಾರೆಕ್ಟರ್ಗಳಲ್ಲೇ ಹೆಚ್ಚಾಗಿ ಮಿಂಚಿದ ನಟ. ಮತ್ತೊಂದ್ಕಡೆ ಆ್ಯಕ್ಷನ್ ಸಿನಿಮಾಗಳನ್ನು ಮಾಡಿದರು ಸಹ, ಅದರಲ್ಲೂ ಲವ್ವರ್ ಬಾಯ್ ಶೇಡ್ ಇದ್ದೇ ಇರ್ತಾಯಿತ್ತು..ಆದರೆ ಇದೀಗ ಔಟ್ ಅಂಡ್ ಔಟ್ ಮಾಸ್ ಆ್ಯಕ್ಷನ್ ಹೀರೋ ಆಗಿ ತೆರೆಮೇಲೆ ಬರೋಕ್ಕೆ ರೆಡಿಯಾಗ್ತಿದ್ದಾರೆ.
2007 ರಲ್ಲಿ ತೆರೆಕಂಡಿದ್ದ ಪ್ರಜ್ವಲ್ 2 ನೇ ಸಿನಿಮಾ ಗೆಳೆಯ ಚಿತ್ರದ ನಂತರ ಸುಮಾರು 12 ವರ್ಷಗಳಾದ್ಮೇಲೆ ಮತ್ತದೇ ರೀತಿಯ ರೋಲ್ನಲ್ಲಿ ಕಾಣಸಿಕೊಳ್ತಿದ್ದಾರೆ. ಗೆಳೆಯ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ರೋಲ್ನಲ್ಲಿ ಮಿಂಚಿದ್ದ ಪ್ರಜ್ವಲ್ ದೇವರಾಜ್ ಇದೀಗ ಹೆಸರಿಡದ ಹೊಸ ಚಿತ್ರದಲ್ಲಿ ಮತ್ತೊಮ್ಮೆ ಗ್ಯಾಂಗ್ ಸ್ಟಾರ್ ಆಗಲಿದ್ದಾರೆ. ಪ್ರಜ್ವಲ್ ಚಿತ್ರದಲ್ಲಿ 3 ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ಪ್ರಜ್ವಲ್ ಅಭಿನಯದ ಅರ್ಜುನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಪಿಸಿ ಶೇಖರ್ ಈ ಚಿತ್ರಕ್ಕೂ ನಿರ್ದೇಶನ ಮಾಡ್ತಿದ್ದಾರೆ. ವಿಶೇಷ ಎಂದರೇ ಈ ಸಿನಿಮಾ ಕನ್ನಡ ತಮಿಳು-ತೆಲುಗು-ಹಿಂದಿ ಭಾಷೆಗಳಲ್ಲಿ ತಯಾರಾಗಲಿದೆ. ಇನ್ನು ಹೆಸರಿಡದ ಈ ಚಿತ್ರದ ಸ್ಟೋರಿಲೈನ್ ಕೂಡ ಡಿಫ್ರೆಂಟ್ ಆಗಿದ್ದು, ಮಾಫೀಯಾ ಲೋಕದ ಗಂಭೀರ ಕಥಾನಕವನ್ನು ತೆರೆಮೇಲೆ ತರಲಿದ್ದಾರಂತೆ.
ಇನ್ನು ಪ್ರಜ್ವಲ್ಗೆ ಜೋಡಿಯಾಗಿ ಮೊದಲ ಬಾರಿಗೆ ಆಶಿಕಾ ರಂಗನಾಥ್ ಅಭಿನಯಿಸಲಿದ್ದಾರೆ. ಬಹಳ ಸೈಲೆಂಟ್ ಹುಡುಗಿಯಾಗಿ , ಮೊದಲ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಇನ್ನು ಚಂದನ್ ಗೌಡ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದು, ಜುಲೈ 2 ನೇ ವಾರದಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಜುಲೈ 4 ರಂದು ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ದಿನ ಚಿತ್ರದ ಟೈಟಲ್ ರಿವೀಲ್ ಆಗಲಿದೆ.
Comments are closed.