ಮನೋರಂಜನೆ

ಅಭಿಷೇಕ್ ಅಂಬರೀಷ್ ಮುಂದಿನ ಚಿತ್ರ ಯಾವುದು ಗೊತ್ತಾ..?

Pinterest LinkedIn Tumblr

ಅಮರ್​​ ಆಗಿ ಸ್ಯಾಂಡಲ್​ವುಡ್​ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಜ್ಯೂ. ರೆಬೆಲ್ ಸ್ಟಾರ್ ಅಭಿಷೇಕ್​ ಅಂಬರೀಶ್​​, ಚೊಚ್ಚಲ ಪ್ರಯತ್ನದಲ್ಲೇ ಫಸ್ಟ್ ಕ್ಲಾಸ್​ನಲ್ಲಿ ಪಾಸಾಗಿದ್ದಾರೆ.. ಅಮರ್​​ ಸಕ್ಸಸ್​​​​ ನಂತ್ರ, ವಾಟ್ ನೆಕ್ಸ್ಟ್​ ಅಂತ ಕೇಳೋಕ್ಕು ಮೊದ್ಲೆ ಮತ್ತೆರಡು ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರೆ ಅಭಿಷೇಕ್​..

 

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್​ ಅಂಬರೀಶ್ ಫಸ್ಟ್​ ಸಿನಿಮಾ ಅನ್ನೋ ಕಾರಣಕ್ಕೆ ಅಮರ್​ ಸಿನಿಮಾ ಇನ್ನಿಲ್ಲದ ಕುತೂಹಲ ಮೂಡಿಸಿತ್ತು.. ಮೈನಾ ಖ್ಯಾತಿಯ ನಾಗಶೇಖರ್​ ನಿರ್ದೇಶನದಲ್ಲಿ ಮೂಡಿ ಬಂದ ರೊಮ್ಯಾಂಟಿಕ್ ಆಕ್ಷನ್ ಅಮರ್​​​ ಸಿನಿಮಾದಲ್ಲಿ ಯಂಗ್​ ರೆಬಲ್ ಸ್ಟಾರ್ ಅಭಿಷೇಕ್​ ಅಂಬರೀಶ್​​ ದೊಡ್ಡದಾಗಿ ಸೌಂಡ್ ಮಾಡಿದ್ರು.. ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರಿಂದ ಭೇಷ್​ ಅನ್ನಿಸಿಕೊಂಡಿದ್ದಾರೆ.. ಸಿನಿಮಾ 50ನೇ ದಿನದತ್ತ ಮುನ್ನುಗ್ಗುತ್ತಿದೆ..

 

ಆರಡಿ ಕಟೌಟ್​ ಅಭಿಷೇಕ್​​ ಅಂಬರೀಶ್​​, ಅಮರ್ ಸಿನಿಮಾದಲ್ಲಿ ಆ್ಯಕ್ಷನ್​ ಮತ್ತು ಡೈಲಾಗ್ಸ್​​​ನಲ್ಲಿ ಕೊಂಚ ಹೆಚ್ಚು ಮಾರ್ಕ್ಸ್​ ಗಿಟ್ಟಿಸಿಕೊಂಡಿದ್ದಾರೆ.. ಅಭಿ- ತಾನ್ಯಾ ಹೋಪ್​ ಜೋಡಿ ಮೋಡಿ ಮಾಡಿದ್ದು, ಅಭಿ ಭರವಸೆಯ ಯುವನಟನಾಗಿ ಹೊರಹೊಮ್ಮಿದ್ದಾರೆ.. ಸದ್ಯ ಸ್ಯಾಂಡಲ್​ವುಡ್​ ಅಂಗಳದಲ್ಲಿ ಮರಿ ರೆಬಲ್ ಸ್ಟಾರ್ ಹವಾ ಜೋರಾಗಿದ್ದು ದೊಡ್ಡ ದೊಡ್ಡ ಆಫರ್ಸ್​​ ಹುಡುಕಿ ಬರ್ತಿದೆ..

 

ಅಮರ್ ನಂತ್ರ ಅಭಿಷೇಕ್​​ ಸಂತೂ ಸ್ಟ್ರೈಟ್​ ಫಾರ್ವರ್ಡ್​ ಸಿನಿಮಾ ಖ್ಯಾತಿಯ ಮಹೇಶ್ ರಾವ್​ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ.. ಆ ಚಿತ್ರವನ್ನ ಅಂಬಿ ಕುಟುಂಬಕ್ಕೆ ಆಪ್ತರು ಆಗಿರುವ ಧೀರ ರಾಕ್​ಲೈನ್​ ವೆಂಕಟೇಶ್ ನಿರ್ಮಾಣ ಮಾಡೋ ಸಾಧ್ಯತೆಯಿದೆ.. ಮುರಳಿ ಮೀಟ್ಸ್ ಮೀರಾ, ಎಂದೆಂದೂ ನಿನಗಾಗಿ, ಸಂತೂ ಸ್ಟ್ರೈಟ್​ ಫಾರ್ವರ್ಡ್ ಸಿನಿಮಾಗಳಲ್ಲಿ ಮಹೇಶ್ ರಾವ್ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿದ್ದಾರೆ.. ಇದೀಗ ಅಭಿಗೋಸ್ಕರ ಹೊಸ ಕಥೆ ರೆಡಿ ಮಾಡಿದ್ದು, ಆ್ಯಕ್ಷನ್​ ಕಟ್ ಹೇಳೋಕ್ಕೆ ಮುಂದಾಗಿದ್ದಾರೆ.. ಆಷಾಢದ ನಂತ್ರ ಚಿತ್ರ ಸೆಟ್ಟೇರಲಿದೆ..

 

ಅಂಬಿ ನಂತ್ರ ಪುತ್ರ ಅಭಿಷೇಕ್​​ಗೆ ಗುರು ಆ್ಯಕ್ಷನ್ ಕಟ್

ಇನ್ನು ಅಂಬಿ ನಿಂಗ್​ ವಯಸ್ಸಾಯ್ತೋ ಸಿನಿಮಾದಿಂದ ಸದ್ದು ಮಾಡಿದ ಯುವ ನಿರ್ದೇಶಕ ಗುರುದತ್​ ಗಾಣಿಗ.. ಕಿಚ್ಚನ ಕ್ಯಾಂಪ್​ನಲ್ಲಿ ಬೆಳೆದ ಗುರು ಮೊದಲ ಸಿನಿಮಾದಲ್ಲೇ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸುದೀಪ್ ಇಬ್ಬರನ್ನ ಡೈರೆಕ್ಟ್ ಮಾಡಿ ಸಕ್ಸಸ್ ಕಂಡ್ರು.. ದಿಗ್ಗಜ ನಿರ್ದೇಶಕರ ಸಿನಿಮಾಗಳಲ್ಲಿ ನಟಸಿದ್ದ ಅಂಬರೀಷ್​​ ಅವರಿಂದ್ಲೇ ಗುರು, ಭೇಷ್ ಅನ್ನಿಸಿಕೊಂಡಿದ್ರು.. ಇದೀಗ ಗುರು, ಅಭಿಷೇಕ್​ಗೆ ಕಥೆ ಸಿದ್ಧಪಡಿಸಿದ್ದು, ಇದು ಅವರ ಮೂರನೇ ಸಿನಿಮಾ ಆಗಲಿದೆ..

 

ಅಂಬಿ ನಿಂಗ್​ ವಯಸ್ಸಾಯ್ತೋ ನಂತ್ರ ಗುರುದತ್​ ಗಾಣಿಗ ಮತ್ತೊಂದು ಚಿತ್ರಕ್ಕೆ ಪ್ಲಾನ್ ಮಾಡ್ತಿದ್ದು, ಅಷ್ಟರಲ್ಲಿ ಅಭಿ, ಮಹೇಶ್ ರಾವ್​ ಸಿನಿಮಾ ಕಂಪ್ಲೀಟ್ ಮಾಡಲಿದ್ದಾರೆ.. ಈ ಎರಡು ಸಿನಿಮಾಗಳ ನಂತ್ರ ಅಭಿ ಮತ್ತು ಗುರು ಕೈ ಜೋಡಿಸೋ ಸಾಧ್ಯತೆಯಿದೆ.. ಈ ಸಿನಿಮಾದಲ್ಲಿ ಮರಿ ರೆಬಲ್​ ಸ್ಟಾರ್​​ನ ಹೊಸ ಅವತಾರದಲ್ಲಿ ತೋರಿಸೋ ಸಾಹಸ ಮಾಡ್ತಿದ್ಧಾರೆ ಗುರುದತ್ತ ಗಾಣಿಗ.. ಈ ಎರಡು ಸಿನಿಮಾಗಳು ಹೇಗೆ ಮೂಡಿ ಬರುತ್ತೆ ಅಂತ ಕಾದು ನೋಡ್ಬೇಕು..

 

Comments are closed.