
ದೇಶದಲ್ಲಿ ಟಿಕ್ ಟಾಕ್ ವಿಡಿಯೋ ಕ್ರೇಜ್ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಇತ್ತೀಚೆಗೆ ವಿಡಿಯೋಗಾಗಿ ಸ್ಟಂಟ್ ಮಾಡಲು ಹೋಗಿ ಸಾವನ್ನಪ್ಪಿದ ತುಮಕೂರು ಜಿಲ್ಲೆಯ ಕುಮಾರ್(22) ಸಾಕ್ಷಿ. ಈ ಜನಪ್ರಿಯ ಅಪ್ಲಿಕೇಶನ್ನ ಹುಚ್ಚುತನ ಇಲ್ಲಿಗೆ ನಿಲ್ಲುವುದಿಲ್ಲ. ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಪಾಲನೆ ಮಾಡಬೇಕಾದ ನರ್ಸ್ಗಳು ಸಹ ತಮ್ಮ ಕರ್ತವ್ಯವನ್ನು ಮರೆತು ಟಿಕ್ ಟಾಕ್ ವಿಡಿಯೋ ಮಾಡಿಕೊಂಡು ಇದೀಗ ಸುದ್ದಿಯಾಗಿದ್ದಾರೆ.
ಒಡಿಶಾದ ಮಲ್ಕಂಗಿರಿಯ ವಿಶೇಷ ನವಜಾತ ಆರೈಕೆ ಘಟಕದ (ಎಸ್‌ಎನ್‌ಸಿಯು) ನರ್ಸ್ಗಳು ತಮ್ಮ ಕೆಲಸದ ವೇಳೆ ಟಿಕ್ ಟಾಕ್ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ವಿಡಿಯೋ ಭಾರೀ ವೈರಲ್ ಕೂಡ ಆಗಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ಸೇವೆಯ ನಿರ್ಲಕ್ಷ್ಯಕ್ಕೆ ನರ್ಸ್ಗಳಿಗೆ ನೋಟಿಸ್ ನೀಡಿದ್ದಾರೆ.
ಆಸ್ಪತ್ರೆಯ ಸಮವಸ್ತ್ರದಲ್ಲಿ ನೃತ್ಯದ ಝಲಕ್ ತೋರಿಸಿರುವ ನರ್ಸ್ಗಳು, ಮತ್ತೊಂದು ವಿಡಿಯೋದಲ್ಲಿ ಮಕ್ಕಳ ಪಾಲನೆಯ ವೇಳೆ ವಿಡಿಯೋ ಮಾಡುವಲ್ಲಿ ನಿರತರಾಗಿದ್ದರು. ತಮ್ಮ ಕರ್ತವ್ಯದ ವೇಳೆ ರೋಗಿಗಳನ್ನು ಶುಶ್ರೂಷೆ ಮಾಡದೇ ಟಿಕ್ ಟಾಕ್ನಲ್ಲಿ ತಲ್ಲೀನರಾಗಿದ್ದ ನರ್ಸ್ಗಳಿಗೆ ಸಿಡಿಎಂಒ ಅಜಿತ್ ಕುಮಾರ್ ಮೊಹಂತಿ ಅವರು ಶೋ-ಕಾಸ್ ನೋಟಿಸ್ ಕಳುಹಿಸಿದ್ದಾರೆ.
ಅಷ್ಟೇ ಅಲ್ಲದೆ ಈ ವಿಷಯದ ತನಿಖೆ ನಡೆಸಲಾಗುತ್ತಿದ್ದು, ಅಗತ್ಯ ಕ್ರಮಕ್ಕಾಗಿ ವರದಿ ತರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ವೈದ್ಯಕೀಯ ಅಧಿಕಾರಿ ಮತ್ತು ಆಸ್ಪತ್ರೆಯ ಉಸ್ತುವಾರಿ ತಪನ್ ಕುಮಾರ್ ದಿಂಡಾ ತಿಳಿಸಿದ್ದಾರೆ. ಒಡಿಶಾದ ನರ್ಸ್ಗಳ ಅತಿರೇಕದ ಈ ವಿಡಿಯೋ ಘಟನೆಯನ್ನು ದುರದೃಷ್ಟಕರ ಎಂದು ಸಿಡಿಎಂಒ ಬಣ್ಣಿಸಿದೆ.
ಭಾರೀ ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ನರ್ಸ್ಗಳನ್ನು ಅಮಾನತುಗೊಳಿಸಬೇಕೆಂಬ ಒತ್ತಾಯಗಳು ಕೇಳಿಬಂದಿವೆ. ವಿಡಿಯೋ ತುಣುಕುಗಳಲ್ಲಿ ಕಂಡುಬರುವ ನಾಲ್ಕು ದಾದಿಯರನ್ನು ಸದ್ಯ ಅಮಾನತಿನಲ್ಲಿಡಲು ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ (ಸಿಡಿಎಂಒ) ಅಜಿತ್ ಕು ಮೊಹಂತಿ ಶಿಫಾರಸ್ಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments are closed.