ಕರ್ನಾಟಕ

ಜೆಡಿಎಸ್​​ ನಿಂದ ಆಗಸ್ಟ್ 20ರಿಂದ ಪಾದಯಾತ್ರೆ: ಎಸ್ ವಿ ದತ್ತಾ

Pinterest LinkedIn Tumblr


ಬೆಂಗಳೂರು(ಜೂನ್​​.25): ಜೆಡಿಎಸ್​​ ಪಕ್ಷ ಸಂಘಟನೆಗೆ ಮಾಜಿ ಶಾಸಕ ವೈ.ಎಸ್​​ ವಿ ದತ್ತಾ ಮುಂದಾಗಿದ್ದಾರೆ. ಮುಂದಿನ ಆಗಸ್ಟ್ 20ರಿಂದ ನಂಜನಗೂಡಿನಿಂದ ಮೊದಲ ಹಂತದ ಪಾದಯಾತ್ರೆ ಆರಂಭಿಸಲಿದ್ದೇನೆ. ಈ ಮೂಲಕ ಪಕ್ಷ ಬಲವರ್ಧನೆ ಮಾಡಲಿದ್ದೇನೆ ಎಂದು ವೈ.ಎಸ್​​ ವಿ ದತ್ತಾ ಅವರೇ ತಿಳಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತಾಡಿದ ವೈ.ಎಸ್.ವಿ.ದತ್ತಾ ಅವರು, ಆಗಸ್ಟ್​​​ 20ರಂದು ದೇವರಾಜ ಅರಸು ಅವರ ಜನ್ಮದಿನ. ಅಂದಿನಿಂದಲೇ ಮೊದಲ ಹಂತದ ಪಾದಯಾತ್ರೆ ಆರಂಭವಾಗಲಿದೆ. ಮೊದಲ ಹಂತದ ಪಾದಾಯಾತ್ರೆ ಕಾವೇರಿಯಿಂದ ತುಂಗಭದ್ರಾವರೆಗೂ ನಡೆಯಲಿದೆ. ಎರಡನೇ ಹಂತದಲ್ಲಿ ತುಂಗಭದ್ರಾದಿಂದ ಮಲಪ್ರಭಾದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ವಿಭಿನ್ನ ಹೆಸರಿನಲ್ಲಿ ಪಾದಯಾತ್ರೆ ಮಾಡಲಾಗುತ್ತಿದೆ. ‘ವಿಚಾರ, ವಿಕಾಸ ಮತ್ತು ವಿಶ್ವಾಸ’ ಎಂಬ ಮೂರು ಪರಿಕಲ್ಪನೆಗಳ ಜೊತೆಗೆ ನಡೆಸುವ ಪಾದಯಾತ್ರೆ ಇದಾಗಿದೆ. ಪ್ರಾದೇಶಿಕ ಹಿತಾಸಕ್ತಿಗಾಗಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಬೇಕಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ 1 ಸ್ಥಾನ ಮಾತ್ರ ಗೆದ್ದಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 579 ಸದಸ್ಯರು ಗೆದ್ದು ಶಕ್ತಿ ತುಂಬಿದ್ದರಾದರೂ, ಪಕ್ಷ ಸಂಘಟನೆ ಕಡೆಗೆ ಗಮನ ಹರಿಸಿರಲಿಲ್ಲ. ಸದ್ಯ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.

ನಮ್ಮ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸ ಕುಗ್ಗಿದೆ. ಇನ್ನೂ ಸಂಘಟನೆ ಚುರುಕಾಗಬೇಕಿದೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಜೆಡಿಎಸ್​ ಸಜ್ಜುಗೊಳಿಸಲು ಪಕ್ಷ ಸಂಘಟನೆ ಅನಿವಾರ್ಯವಾಗಿದೆ ಎನ್ನುತ್ತಿದ್ದಾರೆ ವರಿಷ್ಠರು.

Comments are closed.