
ನವದೆಹಲಿ: ರಾಜ್ಯದಲ್ಲಿ ಇರುವ ಮೈತ್ರಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಸಂಸತ್ನಲ್ಲಿ ಹೇಳಿದರು.
ದೆಹಲಿ ಸಂಸತ್ನಲ್ಲಿ ಮಂಗಳವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, 2009-2013ರ ವರೆಗೂ ಬಿಜೆಪಿ ಭ್ರಷ್ಟಾ ಆಡಳಿತ ನಡೆಸಿತ್ತು. ‘ಯಡಿಯೂರಪ್ಪ ಸರ್ಕಾರವಿದ್ದಾಗ ಭ್ರಷ್ಟಾಚಾರ ಹೆಚ್ಚಿತ್ತು’ ಎಂದ ಅವರು, ಐಎಂಎ ವಂಚನೆ ಬಗ್ಗೆಯೂ ಪ್ರಸ್ತಾಪಿಸಿದರು. ಸಂಸತ್ನಲ್ಲೇ ತೇಜಸ್ವಿ, ಪ್ರತಾಪ್ ಸಿಂಹ ಇಬ್ಬರಿಗೂ ಪ್ರಜ್ವಲ್ ರೇವಣ್ಣ ಟಾಂಗ್ ಕೊಟ್ಟರು.
ಅಲ್ಲದೇ ರಾಜ್ಯದಲ್ಲಿ ಇರುವ ಮೈತ್ರಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಇದೆ ಎಂದು ಹೇಳಿ ಸಂಸತ್ನಲ್ಲಿ ಇರುವವರನನ್ನ ದಾರಿತಪ್ಪಿಸುವ ಕೆಲಸ ಮಾಡಬೇಡಿ. ಕಾಂಗ್ರೆಸ್ ಹಿರಿಯ ಮುಖಂಡ ರೋಷನ್ ಬೇಗ್ ಅವರ ಹೆಸರು ಐಎಂಎ ವಂಚನೆ ಆರೋಪದಲ್ಲಿ ಕೇಳಿ ಬಂದಾಕ್ಷಣ ಎಸ್ಐಟಿ ತನಿಖೆ ಹಂತದಲ್ಲಿ ಇರುವಾಗಲೇ ಅವರನ್ನು ಕಾಂಗ್ರೆಸ್ ಅಮಾನತು ಮಾಡಲಾಗಿದೆ ಎಂದು ಪ್ರಜ್ವಲ್ ರೇವಣ್ಣ ಅವರು ತಮ್ಮ ಸರ್ಕಾರದ ಆಡಳಿತವನ್ನು ಸಮರ್ಥನೆ ಮಾಡಿಕೊಂಡರು.
ಇದಕ್ಕೂ ಮುಂಚೆ ಸಂಸತ್ನಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಕರ್ನಾಟಕ ರಾಜ್ಯ ಅಭಿವೃದ್ಧಿ ಕಾಣದೇ ಸೊರಗಿ ಹೋಗಿದೆ. ನಮ್ಮ ರಾಜ್ಯ ಅದ್ಭುತವಾದ ಇತಿಹಾಸ ಮತ್ತು ಆಡಳಿತವನ್ನು ಈ ಹಿಂದೆ ಕೊಟ್ಟಿದೆ ಹಕ್ಕ-ಬುಕ್ಕ ವಿಜಯನಗರ ಸಾಮ್ರಾಜ್ಯ, ಕೆಂಪೇಗೌಡ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ಸರ್ ಎಂ ವಿಶ್ವೇಶ್ವರಯ್ಯ ಇವರುಗಳಂತ ಮಹನೀಯರು ಆಳ್ವಿಕೆ ಮಾಡಿದ ರಾಜ್ಯದಲ್ಲಿಂದು ಭಷ್ಟಾಚಾರ ತುಂಬಿದೆ ಎಂದು ಅವರು ಸಂಸತ್ ಹೇಳಿದ್ದರು.
Comments are closed.