ಕರ್ನಾಟಕ

ಡೋರ್ ಲಾಕ್​ ಮಾಡುವುದು ತಡ ಆಗಿದ್ರೆ ನಾನು ಜೀವಂತ ಇರುತ್ತಿರಲಿಲ್ಲ’- ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ನಾನು ಮೊದಲು ಸಾಗರದ ಜೈಲಿನಲ್ಲಿ ಇದ್ದೆ ನಂತರ ಬಳ್ಳಾರಿ ಜೈಲಿಗೆ ಹಾಕಿದರು ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಅವರು ಹೇಳಿದರು.

 

ನಗರದಲ್ಲಿ ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಂದು ಜೈಲರ್​​ಗಳು ಊಟದ ವ್ಯವಸ್ಥೆಯಲ್ಲಿ ಮಾಡಿದ ದುರುಪಯೋಗದ ಕುರಿತು ನಾನು ಹೋರಾಟ ಮಾಡಿದ್ದೆ ಎಂದರು.

 

ಇನ್ನು ಜೈಲಿನಲ್ಲಿ ಹೋರಾಟದ ಸಂದರ್ಭದಲ್ಲಿ ಒಂದು ಕ್ಷಣ ನಾನು ಬಾಗಿಲು ಲಾಕ್ ಮಾಡಿಕೊಳ್ಳದೇ ಇದ್ದರೆ ಜೈಲಿನಿಂದ ನಾನು ಹೊರ ಬರ್ತಿರಲಿಲ್ಲ, ಜೀವಂತವಾಗಿ ಉಳಿತಿರಲಿಲ್ಲ ಎಂದು ಅವರು ಜೈಲಿನಲ್ಲಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ.

 

ಅಲ್ಲದೇ ಅನೇಕ ಜನರನ್ನ ಜೈಲಿಗೆ ಹಾಕಿದರು. ತಪ್ಪು ನಿರ್ಧಾರದ ಮೂಲಕ ಇಂದಿರಾ ಗಾಂಧಿ ಜನರ ಆಕ್ರೋಶಕ್ಕೆ ಗುರಿಯಾದರು. ಪ್ರಜಾತಂತ್ರ ವಿರುದ್ಧವಾದ ಯಾವುದೇ ಸಿದ್ದಾಂತ ಶಾಶ್ವತವಾಗಿ ಉಳಿಯಲ್ಲ ಇದಕ್ಕೆ ಕಾಂಗ್ರೆಸ್​ನ ಸದ್ಯದ ದಯನೀಯ ಸ್ಥಿತಿ ನೋಡಬಹುದು ಎಂದು ಅವರು ಕಾಂಗ್ರೆಸ್​ ಪರಿಸ್ಥಿತಿಯನ್ನು ಜರಿದರು.

 

ಅಷ್ಟೇ ಅಲ್ಲದೇ ಆರ್​​ಎಸ್​ಎಸ್ ನಂತಹ ಸಂಘಟನೆ ಇರದಿದ್ದರೆ ಅಂದು ಇಡೀ ದೇಶದ ಘಟಾನುಘಟಿಗಳು ಸುಮ್ಮನೇ ಕೈ ಕಟ್ಟಿ ಕೂತ ಸಂದರ್ಭದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತರು ಅಂದು ಹೋರಾಡಿದ ಪರಿ, ಕಷ್ಟ, ನೋವು ನೋಡಲಾಗದು ಎಂದು ಅವರು ನುಡಿದರು.

 

ಸದ್ಯ ಜಯಪ್ರಕಾಶ್ ನಾರಾಯಣರನ್ನು ಜೈಲಿನಲ್ಲಿಟ್ಟು ಕೊಂದವರು ಇವರು. ಕಾಂಗ್ರೆಸ್ ನಾಯಕರೂ ಈಗಲೂ ಅವಲೋಕನ ಮಾಡಿಕೊಳ್ಳಲಿ. 44 ವರ್ಷಗಳ ನಂತರ ತುರ್ತು ಪರಿಸ್ಥಿತಿ ಬಗ್ಗೆ ನಮ್ಮ ಯುವಕರಿಗೆ ಅರಿವು ಮೂಡಿಸಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಅವರು ಮಾತನಾಡಿದ್ದಾರೆ.

 

Comments are closed.