ರಾಷ್ಟ್ರೀಯ

ತನ್ನ 8 ವರ್ಷದ ಮಗನನ್ನೇ ಕೊಂದ ತಾಯಿ ! ಕೊಲೆಗೆ ಕಾರಣ ಏನು ಗೊತ್ತೇ…?

Pinterest LinkedIn Tumblr

ರಾಯಪುರ: ಎಂಟು ವರ್ಷದ ಮಗನನ್ನ ತಾಯಿಯ ಕೊಂದಿರುವ ದಾರುಣ ಘಟನೆ ಛತ್ತೀಸ್ ಗಡದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ.

35 ವರ್ಷದ ಸುಖಮತಿ ಎಂಬ ಮಹಿಳೆ ಕೋಪದಿಂದ ಮಗುವನ್ನು ಸಲಾಕೆಯಿಂದ ಹೊಡೆದು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಪತಿ ಮಹಾವೀರ ಟಂಡೋ ಕೂಲಿ ಕಾರ್ಮಿಕನಾಗಿದ್ದು, ತನ್ನ 8 ವರ್ಷದ ಮಗ ಲೋಕೇಶ್ ನನ್ನು ಯಾವಾಗಲೂ ಥಳಿಸುತ್ತಿದ್ದನು, ಈ ವಿಷಯವಾಗಿ ಇಬ್ಬರಿಗೂ ಪದೇ ಪದೇಜಗಳ ನಡೆಯುತ್ತಿತ್ತು.

ಮಗ ಇಷ್ಟ ಇಲ್ಲ ಎಂಬ ಕಾರಣಕ್ಕೆ ಮಹಿಳೆ ತನ್ನ ಮಗನ ಜೊತೆ ಪ್ರೀತಿ ವಾತ್ಸಲ್ಯದಿಂದ ನಡೆದುಕೊಳ್ಳುತ್ತಿರಲಿಲ್ಲ, ಸಾರ್ವಜನಿಕವಾಗಿಯೇ ಮಗನ ಜೊತೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಳು.

ಶುಕ್ರವಾರ ಮಹಾವೀರ್ ಮನೆಯಿಂದ ಹೊರ ಹೋಗಿದ್ದಾಗ, ಕೆಲ ವಿಷಯಗಳ ಬಗ್ಗೆ ಕೋಪದಿಂದ ಜಗಳ ಮಾಡಿಕೊಂಡು ಆತನ ಕುತ್ತಿಗೆಗೆ ಸಲಾಕೆಯಿಂದ ಹೊಡೆದಿದ್ದಾಳೆ, ಗಾಯಗೊಂಡ 8 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮಹಿಳೆ ತನ್ನ ಮಗನ ಜೊತೆ ಸಂತೋಷದಿಂದ ಇರಲಿಲ್ಲ ಎಂದು ತಿಳಿದು ಬಂದಿದೆ, ಈ ಸಂಬಂಧ ಪೊಲೀಸರು ಆಕೆಯನ್ನು ಹೆಚ್ಚಿನ ತನಿಖೆಗಾಗಿ ಬಂಧಿಸಿ ಕರೆದೊಯ್ದಿದ್ದಾರೆ, ಮಹಿಳೆಯ ಮಾನಸಿಕ ಸ್ಥಿತಿ ಪರೀಕ್ಷಿಸಲು ಪೊಲೀಸರು ನಿರ್ಧರಿಸಿದ್ದಾರೆ.

Comments are closed.