ಮನೋರಂಜನೆ

ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ರೆಜಿನಾ ಕಸ್ಸಂದ್ರ ಏನಂತಾರೆ?

Pinterest LinkedIn Tumblr


ಕನ್ನಡದ ‘ಸೂರ್ಯಕಾಂತಿ’ ಚಿತ್ರದಲ್ಲಿ ಅಭಿನಯಿಸಿರುವ ತಾರೆ ರೆಜಿನಾ ಕಸ್ಸಂದ್ರ. ಈಗ ಬಾಲಿವುಡ್, ಟಾಲಿವುಡ್‌ನಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗೆ ಅವರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಈ ಬಗ್ಗೆ ರೆಜಿನಾ ಪ್ರತಿಕ್ರಿಯಿಸಿದ್ದಾರೆ.

ಕೆಲವು ದಿನಗಳ ಹಿಂದೆ ತೆಲುಗು ನಟರೊಬ್ಬರ ಜತೆಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ತನ್ನ ಕೈಯಲ್ಲಿರುವ ಪ್ರಾಜೆಕ್ಟ್‌ಗಳನ್ನು ಈ ವರ್ಷದಲ್ಲಿ ಮುಗಿಸಿಕೊಂಡು ವರ್ಷಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಡಲಿದ್ದಾರೆ ಎನ್ನಲಾಗಿತ್ತು. ಹದಿವಯಸ್ಸಿನಲ್ಲಿ ಆ ರೀತಿಯ ಸಿನಿಮಾಗಳನ್ನು ನೋಡಿದ್ದೇನೆ ಎಂದ ನಟಿ

ಈ ಬಗ್ಗೆ ಕೊನೆಗೂ ಬಾಯ್ಬಿಟ್ಟಿರುವ ರೆಜೀನಾ ಇದೆಲ್ಲಾ ಕೇವಲ ವದಂತಿ ಅಷ್ಟೇ. ಎಲ್ಲಿಂದ ಈ ರೀತಿಯ ಸುದ್ದಿಗಳು ಹಬ್ಬುತ್ತವೋ ಗೊತ್ತಿಲ್ಲ, ಇಂತಹ ಸುದ್ದಿಗಳನ್ನು ಓದಿದಾಗ ಕಿರಿಕಿರಿ ಅನ್ನಿಸುತ್ತದೆ. ತಾನು ಗುಟ್ಟಾಗಿ ಮದುವೆಯಾಗಲ್ಲ. ಎಲ್ಲರಿಗೂ ತಿಳಿಸಿಯೇ ಮದುವೆಯಾಗುತ್ತೇನೆ ಎಂದಿದ್ದಾರೆ.

ಇತ್ತೀಚೆಗೆ ಸಂದರ್ಶನದಲ್ಲಿ ರೆಜಿನಾ ಕೆಲವೊಂದು ವಿವಾದಾತ್ಮಕ ಪ್ರಶ್ನೆಗಳಿಗೆ ಬೋಲ್ಡ್ ಆಗಿ ಉತ್ತರ ನೀಡಿದ್ದು ಅದು ಚರ್ಚೆಗೆ ಗ್ರಾಸವಾಗಿದೆ. ಹದಿವಯಸ್ಸಿನಲ್ಲಿ ಅಡಲ್ಟ್ ಸಿನಿಮಾಗಳನ್ನು ನೋಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ರೆಜಿನಾ, “ಸಾಕಷ್ಟು ನೋಡಿದ್ದೇನೆ. ಇಂದಿನ ಜಮಾನಾದಲ್ಲಿ ಇದೆಲ್ಲಾ ಕಾಮನ್” ಎಂದಿದ್ದಾರೆ. ರೆಜಿನಾ ಸಂದರ್ಶನದ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Comments are closed.