
ಪಾಕ್ ನಟಿ ವೀಣಾ ಮಲಿಕ್ ಮೋದಿಯವರನ್ನು ಟೀಕಿಸಿದ ಬೆನ್ನಲ್ಲೇ ಇದೀಗ ಹಾಡುಗಾರ್ತಿಯೊಬ್ಬರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಆರ್.ಎಸ್.ಎಸ್. ಮುಖಂಡ ಮೋಹನ್ ಭಾಗ್ವತ್ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಹಾಡುಗಾರ್ತಿಯಾಗಿರುವ ಅನಿವಾಸಿ ಭಾರತೀಯ ಹಾರ್ಡ್ ಕೌರ್ ಹೀಗೆ ವಿವಾದಾತ್ಮಕ ಹೇಳಿಕೆ ನೀಡಿದಾಕೆ. ಹಾರ್ಡ್ ಕೌರ್ ಯೋಗಿ ಆದಿತ್ಯನಾಥ್ ಹಾಗೂ ಮೋಹನ್ ಭಾಗವತ್ ಫೋಟೋವನ್ನು ಫೋಸ್ಟ್ ಮಾಡಿ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಯೋಗಿ ಆದಿತ್ಯನಾಥ್ ಒಬ್ಬ ರೇಪ್ ಮ್ಯಾನ್ ಹಾಗೂ ಮೋಹನ್ ಭಾಗವತ್ ಒಬ್ಬ ಉಗ್ರಗಾಮಿ ಎಂಬ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಫೇಸ್ ಬುಕ್ ನಲ್ಲಿ ಯೋಗಿ ಆದಿತ್ಯನಾಥ್ ಫೋಟೋ ಫೋಸ್ಟ್ ಮಾಡಿಕೊಂಡಿರುವ ಕೌರ್ ಈ ವ್ಯಕ್ತಿಯೊಬ್ಬ ಸೂಪರ್ ಹೀರೋ ಆಗಿದ್ದರೆ ಇವರ ಹೆಸರು ರೇಪ್ ಮ್ಯಾನ್ ಯೋಗಿ ಎಂದು ಆಗುತ್ತಿತ್ತು. ಎಂದು ಹೇಳಿದ್ದಷ್ಟೇ ಅಲ್ಲದೆ ನಿಮ್ಮ ಸಹೋದರಿ, ತಾಯಿ ಮೇಲೆ ಅತ್ಯಾಚಾರವಾದಾಗ ಇತನನ್ನು ಈ ಹೆಸರಿನಿಂದ ಕರೆಯಬಹುದು. ನಾನು ಪರ್ಸನಲ್ ಆಗಿ ಈತನನ್ನು ಕೇಸರಿ ರೇಪ್ ಮ್ಯಾನ್ ಅಂತ ಕರೆಯುತ್ತೇನೆ ಎಂದು ಟೀಕಿಸಿದ್ದಾರೆ.
ಜೊತೆಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಫೋಟೋ ಕೂಡ ಪೋಸ್ಟ್ ಮಾಡಿ ಪುಲ್ವಾಮ ದಾಳಿ ಅಷ್ಟೇಯಲ್ಲದೆ ಭಾರತದ ಎಲ್ಲಾ ಭಯೋತ್ಪಾದಕ ದಾಳಿಗೆ ಈ ವ್ಯಕ್ತಿಯೇ ನೇರವಾದ ಕಾರಣ ಎಂದು ಕೌರ್ ಆರೋಪಿಸಿದ್ದಾರೆ. ಇನ್ನೂ ಮಹಾತ್ಮ ಗಾಂಧಿ ಹೋಡ್ಸೆ ಹತ್ಯೆ ಮಾಡಿದ ನಂತರ ನಿಮ್ಮನ್ನು ಸರ್ದಾರ್ ಪಟೇಲ್ ಬ್ಯಾನ್ ಮಾಡಿದ್ದರು, ಅಲ್ಲದೆ ಯಾವುದೇ ಕಾರ್ಯಕ್ರಮಕ್ಕೆ ನಿಮ್ಮನ್ನು ಬಿಟ್ಟಿರಲಿಲ್ಲ. ನೀವು ದೇಶಭಕ್ತ ಅಲ್ಲ, ಒಬ್ಬ ಜನಾಂಗಿಯ ಕೊಲೆಗಾರ ಎಂದು ಟೀಕಿಸಿದ್ದಾರೆ.
ಸದ್ಯ ಭಾರತದ ಇಬ್ಬರು ಗಣ್ಯ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು ಈ ಟೀಕೆಗಳ ಸುಳಿಯಲ್ಲಿ ಸಿಲುಕಿರುವ ಹಾರ್ಡ್ ಕೌರ್ ವಿರುದ್ದ ಉತ್ತರ ಪ್ರದೇಶದ ಕಾಂಟೋನ್ ಮೆಂಟ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದು, ವಿವಿಧ ಸೆಕ್ಷನ್ ಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.