
ಚಂದೀಗರ್ (ಜೂ.20): ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಕಣಿವೆಯಲ್ಲಿ ಬಸ್ ಉರುಳಿ ಬಿದ್ದ ಪರಿಣಾಮ 25 ಜನ ಸಾವನ್ನಪ್ಪಿದ್ದು, 35 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಲು ಜಿಲ್ಲೆಯ ಬಂಜಾರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಕ್ಷಣಾ ಕಾರ್ಯ ನಡೆಸಲಾಗಿದೆ.
ಸ್ಥಳಕ್ಕೆ ಕುಲು ಎಸ್ಪಿ ಶಾಲಿನಿ ಅಗ್ನಿಹೋತ್ರಿ ಆಗಮಿಸಿದ್ದು, ಘಟನೆ ಪರಿಶೀಲನೆ ನಡೆಸಿದ್ದಾರೆ. ಈವರೆಗೆ 15 ಮೃತ ದೇಹಗಳು ಪತ್ತೆಯಾಗಿದೆ.
ಬಂಜಾರದಿಂದ ಗದಗುಶನಿ ಪ್ರದೇಶಕ್ಕೆ ಬಸ್ ಸಂಚರಿಸುತ್ತಿತ್ತು. ಬಸ್ಬಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ.
Comments are closed.