ಕ್ರೀಡೆ

ಟೀಂ ಇಂಡಿಯಾ ಆರಂಭಿಕ ಎಡಗೈ ಬ್ಯಾಟ್ಸ್​ಮನ್ ವಿಶ್ವಕಪ್​ ಟೂರ್ನಿಯಿಂದ​ ಔಟ್​​..!

Pinterest LinkedIn Tumblr


ಇಂಗ್ಲೆಂಡ್: ಟೀಂ ಇಂಡಿಯಾ ಆರಂಭಿಕ ಎಡಗೈ ಬ್ಯಾಟ್ಸ್​ಮನ್​ ಶಿಖರ್ ಧವನ್ ಅವರು ತಮ್ಮ ಬೆರಳಿನ ಗಾಯದ ಸಮಸ್ಯೆಯಿಂದಾಗಿ​ ಐಸಿಸಿ ಕ್ರಿಕೆಟ್​ ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಎರಡನೇ ಪಂದ್ಯದ ವೇಳೆ ಶಿಖರ್​ ಧವನ್​ ಬ್ಯಾಟ್ ಬೀಸುವಾಗ ಬಾಲ್​ ಬೆರಳಿಗೆ ತಗುಲಿ ಗಾಯವಾಗಿತ್ತು. ಪರಿಣಾಮ ಅವರಿಗೆ ಮೂರು ವಾರಗಳ ಕಾಲ ವಿಶ್ರಾಂತಿ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದರು.

ಆದರೆ ಈಗ ಬೆರಳಿಗೆ ಗಾಯವಾಗಿರುವ ಸಮಸ್ಯೆ ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಬಹುದು ಎಂಬ ಕಾರಣಕ್ಕೆ ಅವರನ್ನು ಈ ಬಾರಿ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿರುವ ವಿಷಯನ್ನು ಬಿಸಿಸಿಐ ಸ್ಪಷ್ಟಪಡಿಸಿದೆ.

ಸದ್ಯ ಧವನ್​ ಸ್ಥಾನಕ್ಕೆ ಕೆ.ಎಲ್ ರಾಹುಲ್ ಅವರು ಆರಂಭಿಕ ಬ್ಯಾಟ್ಸ್​ಮನ್​ ಆಗಿ ಆಟ ಆಡಲಿದ್ದಾರೆ. ಅಷ್ಟೇ ಅಲ್ಲದೇ ಧವನ್​ಗೆ ಗಾಯವಾದ ದಿನದಲ್ಲೇ ಬಿಸಿಸಿಐ ವಿಕೆಟ್​ ಕೀಪರ್, ಎಡಗೈ ಬ್ಯಾಟ್​ಮನ್​ ರಿಷಬ್​ ಪಂತ್ ಅವರನ್ನ ಅವಸರವಾಗಿ ಇಂಗ್ಲೆಂಡ್​ ಕರೆಸಿಕೊಂಡಿತ್ತು.

ಮುಂದಿನ ಪಂದ್ಯಗಳಲ್ಲಿ ರಿಷಬ್​ ಪಂತ್​ ಅವರು ಕೂಡ ವಿಶ್ವಕಪ್​ ಪಂದ್ಯದಲ್ಲಿ ಆಡುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು ಸದ್ಯ ಜೂನ್ 16ರಂದು ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಪರ ನಾಲ್ಕನೇ ಕ್ರಮಾಂಕದಲ್ಲಿ ವಿಜಯ್​ ಶಂಕರ್ ಅವರು ಆಟ ಆಡಿದ್ದರು. ​

ಜೂನ್​ 22 ರಂದು ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ 5 ಪಂದ್ಯವನ್ನು ಆಡಲಿದೆ.

Comments are closed.