ರಾಷ್ಟ್ರೀಯ

ಸತ್ತ ಮರಿ ಆನೆಯ ಶವ ಸಂಸ್ಕಾರಕ್ಕೆ ಕೊಂಡೊಯ್ಯುತ್ತಿರುವ ಆನೆಗಳ ಹಿಂಡು ! ವೀಡಿಯೊ ವೈರಲ್

Pinterest LinkedIn Tumblr

ನವದೆಹಲಿ: ಪ್ರಾಣಿಗಳಿಗೂ ಭಾವನೆಯಿದೆ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ, ವನ್ಯಮೃಗಗಳಲ್ಲೂ ಭಾವನೆಗಳಿವೆ, ತಮ್ಮವರಿಗಾಗಿ ಪರಿತಪಿಸುವ ಭಾವುಕ ಮನಸ್ಸಿದೆ ಎಂಬುದಕ್ಕೆ ಸಾಕ್ಷಿಯಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸತ್ತ ಮರಿಯನ್ನು ಆನೆಯೊಂದು ಕಚ್ಚಿಕೊಂಡು ಹೋಗುತ್ತಿದ್ದು, ಅದರ ಶವ ಸಂಸ್ಕಾರಕ್ಕೆ ಆನೆಯ ಹಿಂಡೇ ನಾಯಕ ಆನೆಯನ್ನು ಹಿಂಬಾಲಿಸುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಾಸ್ವಾನ್ ಎಂಬುವವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆನೆಯೊಂದು ಸತ್ತ ಮರಿಯನ್ನು ಕಚ್ಚಿಕೊಂದು ಬರುತ್ತಿದ್ದು, ಮೊದಲಿಗೆ ರಸ್ತೆ ದಾಟುವ ಅದು ಮರಿಯ ಶವವನ್ನು ಅಲ್ಲಿಯೇ ಇರಿಸುತ್ತದೆ. ಕೆಲ ಕ್ಷಣದ ನಂತರ ಮತ್ತೊಂದು ಆನೆ ಬಂದು ಅದಕ್ಕೆ ಶ್ರದ್ಧಾಂಜಲಿ ಸಲ್ಲಿಸುವಂತೆ ಮಾಡುತ್ತದೆ. ಇದಾದ ನಂತರ ಆನೆಗಳ ಹಿಂದೊಂದು ಅಲ್ಲಿಗೆ ಬರುತ್ತದೆ. ಮತ್ತೆ ಆನೆಗಳೆಲ್ಲ ಸೇರಿ ಆ ಮರಿಯನ್ನು ಹೊತ್ತು, ಕಾಡಿನ ಮತ್ತೊಂದು ದಿಕ್ಕಿಗೆ ಹೋಗುತ್ತವೆ. ಹೀಗೆ ಹೋಗುವ ಆನೆಗಳು ತಮ್ಮೊಂದಿಗೇ ಸತ್ತ ಮರಿಯನ್ನು ಹೊತ್ತುಕೊಂದು ಹೋಗುವ ವಿಡಿಯೋ ಇದಾಗಿದೆ.

Comments are closed.