
ಬೆಂಗಳೂರು: ಸ್ಯಾಂಡಲ್ವುಡ್ನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗಳೆಂದ್ರೆ ಪಕ್ಕಾ ಫ್ಯಾಮಿಲಿ ಆಡಿಯೆನ್ಸ್ ಕುಳಿತು ನೋಡುವ ಸಿನಿಮಾ ಅನ್ನೋದು ಮತ್ತೊಮ್ಮೆ ಕರ್ನಾಟಕ ಜನತೆ ಸಾಬೀತು ಪಡಿಸಿದ್ದಾರೆ.
ಪವರ್ ಸ್ಟಾರ್ ಅಪ್ಪು ನಾನು ಬಾಕ್ಸಾಫೀಸ್ನಲ್ಲಿಯೂ ಸೌಂಡು ಮಾಡುತ್ತೇನೆ. ಚಿಕ್ಕ ಪರದೆ ಮೇಲೂ ಧಾಮ್ ಧೂಮ್ ಮಾಡುತ್ತೇನೆ ಎಂದು ಸಾರಿದ್ದಾರೆ. ಕಿರುತೆರೆಯಲ್ಲಿ ಕೆಜಿಎಫ್ಗೂ ಮೀರಿದ ದಾಖಲೆಯನ್ನು ನಟಸಾರ್ವಭೌಮ ಸಿನಿಮಾ ತನ್ನ ಹೆಸರಿಗೆ ಬರೆಸಿಕೊಂಡಿದೆ.
ಸದ್ಯ ಕಾಲ ಬದಲಾಗಿದೆ. ಥಿಯೇಟರ್ನಲ್ಲಿ ಎಷ್ಟು ಮಂದಿ ನೋಡುತ್ತಾರೋ.. ಬಿಡುತ್ತಾರೋ.. ಗೊತ್ತಿಲ್ಲ, ಆದರೆ, ಅದಕ್ಕಿಂತ ನೂರು ಪಟ್ಟು ಹೆಚ್ಚು ಮಂದಿ ಸ್ಮಾಲ್ ಸ್ಕ್ರೀನ್ನಲ್ಲಿ ಸಿನಿಮಾ ನೋಡೋದು ಗ್ಯಾರೆಂಟಿ. ಒಂದು ಹೊಸ ಸಿನಿಮಾ. ಒಂದು ಇಂಗ್ಲಿಷ್ ನ್ಯೂಸ್ ಚಾನೆಲ್ಗೆ ಸಮಾ. ಪದೆ ಪದೇ ಅಪ್ಪು ಅಭಿನಯದ ಸಿನಿಮಾ ಮಾಡುತ್ತಿವೆ ದಾಖಲೆಯ ಹಂಗಾಮ.
Comments are closed.