ಕರ್ನಾಟಕ

ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ: ಮುಂದಿನ ಮೂರು ದಿನಗಳಲ್ಲಿ ವರುಣ ಅಬ್ಬರಿಸುವ ಸಾಧ್ಯತೆ

Pinterest LinkedIn Tumblr


ಬಿಸಿಲಿನ ಬೇಗೆಗೆ ಸಿಲಿಕಾನ್ ಸಿಟಿಯ ಜನರು ತತ್ತರಿಸಿ ಹೋಗಿದ್ದಾರೆ. ಹೇಳೋಕೆ ಗಾರ್ಡನ್ ಸಿಟಿಯಾದರು ಬಿಸಿಲಿನ ತಾಪ 35 ರಿಂದ 37 ಸೆಲ್ಸಿಯಸ್ ನಷ್ಟಿದೆ. ಬಿಸಿಲಿನ ಬೇಗೆಗೆ ಬೆಂದ್ದು ಹೋಗಿದ್ದ ಜನರಿಗೆ ಇನ್ನೂ ಎರಡು ಮೂರು ದಿನಗಳ ಕಾಲ ವರುಣ ತಂಪು ಬಿರಲ್ಲಿದ್ದಾನೆ.

ರಾಜಧಾನಿಯಲ್ಲೂ ವರುಣ ಅಬ್ಬರಿಸುವ ಸಾಧ್ಯತೆ

ಮಿತಿ ಮೀರಿದ ತಾಪಮಾನ ಮತ್ತು ಗಾಳಿಯ ಒತ್ತಡ ಕಡಿಮೆಯಾದ ಹಿನ್ನೆಲೆ ಮುಂದಿನ ಮೂರು ದಿನಗಳ ದಕ್ಷಿಣ ಒಳನಾಡಿನ ಜಿಲ್ಲೆಗಳು ಸೇರಿದಂತೆ ಮಲೆನಾಡು ಭಾಗದಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಜೊತೆಗೆ ರಾಜಧಾನಿಯಲ್ಲೂ ವರುಣ ಅಬ್ಬರಿಸುವ ಸಾಧ್ಯತೆ ಇದ್ದು, ಬಿಬಿಎಂಪಿಗೆ ಆರ್ಲಟ್ ಆಗಿರುವಂತೆ ಮಾಹಿತಿಯನ್ನು ನೀಡಿದೆ.

ಹವಾಮಾನ ಇಲಾಖೆಯ ಸಿಹಿ ಸುದ್ದಿ

ಬಿಸಿಲಿನ ತಾಪಮಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಕೂಡಾ ಉಂಟಾಗಿದೆ. ಇದೀಗ ಹವಾಮಾನ ಇಲಾಖೆಯ ಸಿಹಿ ಸುದ್ದಿಯಿಂದ ಕೊಂಚ ರೀಲಿಫ್ ಸಿಕ್ಕಂತಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿ ಉತ್ತಮ ಮಳೆಯಾಗಲಿ ಎಂದು ಧರ್ಮಸ್ಥಳ ಮಂಜುನಾಥನಲ್ಲಿ ನಾವೂ ಕೂಡ ಪ್ರಾರ್ಥಿಸೋಣ.

Comments are closed.