ಕರಾವಳಿ

ಕುಂದಾಪುರದ ಬಳ್ಕೂರಿನಲ್ಲಿ ತೋಟ, ಗದ್ದೆಗೆ ಬಿದ್ದ ಬೆಂಕಿ ನಂದಿಸಿದ ಅಗ್ನಿಶಾಮಕದಳ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮಪಂಚಾಯತ್ ಸಮೀಪದ ಮೇಲ್ ಬಳ್ಕೂರು ಎಂಬಲ್ಲಿ ತೋಟ ಹಾಗೂ ಗದ್ದೆಗೆ ಬೆಂಕಿ ಬಿದ್ದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಆಕಸ್ಮಿಕವಾಗಿ ಬಿದ್ದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ವ್ಯಾಪ್ತಿಯಲ್ಲಿ ಹರಡಿದ್ದು ಸ್ಥಳಕ್ಕಾಗಮಿಸಿದ ಕುಂದಾಪುರ ಅಗ್ನಿಶಾಮಕ ದಳದವರು ಸ್ಥಳೀಯರ ಸಹಕಾರದಲ್ಲಿ ಬೆಂಕಿಯನ್ನು ಹತೋಟಿಗೆ ತಂದು ನಂದಿಸಿದರು. ಬೆಂಕಿ ಹತ್ತಲು ನಿಖರ ಕಾರಣ ತಿಳಿದುಬಂದಿಲ್ಲವಾದರೂ ಕೂಡ ಬೆಂಕಿ ಬಿದ್ದ ಆಸುಪಾಸಿನಲ್ಲಿ ಮನೆಗಳಿದ್ದಿದ್ದು ಸ್ಥಳೀಯರ ಕಾರ್ಯಕ್ಷಮತೆಯಿಂದ ಸಂಭವ್ಯ ಅವಘಡ ತಪ್ಪಿದಂತಾಗಿದೆ.

Comments are closed.